ಇಂದೋರ್ : ಕೊರೊನಾ ವೈರಸ್ ಸೋಂಕು ತೀವ್ರ ವಾಗಿ ಹರಡುತ್ತಿದ್ದ ಕೊರೊನಾ ನಿಯಂತ್ರಣಕ್ಕಾಗಿ ಎಪ್ರಿಲ್ 30ರ ವರೆಗೆ ಮದುವೆಯನ್ನೇ ನಿಷೇಧ ಹೇರಲಾಗಿದ್ದು, ಮಧ್ಯಪ್ರದೇಶದ ಇಂದೋರ್ ಜಿಲ್ಲಾಡಳಿತ ಮದುವೆಗೆ ಅನುಮತಿ ನೀಡದಿರಲು ನಿರ್ಧರಿಸಿದೆ.

ಇಂದೋರ್ ನಲ್ಲಿ ಕೋವಿಡ್ ಸೋಂಕು ತಲ್ಲಣ ಮೂಡಿಸಿದೆ. ಆಸ್ಪತ್ರೆ ಗಳು ತುಂಬಿ ತುಳುಕುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಮದುವೆಯ ಮೂಲಕ ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಾಗಿರುವುದ ರಿಂದ ಎಪ್ರಿಲ್ 30ರ ವರೆಗೆ ಮದುವೆಯನ್ನೇ ನಿಷೇಧಿಸಿ ಇಂದೋರ್ ಜಿಲ್ಲಾಧಿಕಾರಿ ಮನೀಶ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ಮುಂದೂಡುವುದರ ಜೊತೆಗೆ ಜನರು ಮನೆಯಲ್ಲಿಯೇ ಉಳಿದುಕೊಳ್ಳುವಂತೆಯೂ ಜಿಲ್ಲಾಡಳಿತ ಮನವಿಯನ್ನು ಮಾಡಿಕೊಂಡಿದೆ. ಇನ್ನು ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದಿನ ಕಾಳಸಂತೆಯಲ್ಲಿ ಮಾರಾಟದ ದೂರು ಗಳು ಬರುತ್ತಿದ್ದು, ಪ್ರಕರಣದಲ್ಲಿ ಬಾಗಿಯಾಗಿರುವ ಇಬ್ಬರು ವ್ಯಕ್ತಿಗಳ ಮೇಲೆ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಸ್ಪತ್ರೆ ಗಳಲ್ಲಿ ಹಾಸಿಗೆಯ ಕೊರತೆ ಎದುರಾಗಿದ್ದು, ಆಮ್ಲಜನಕದ ಬೇಡಿಕೆ ಯೂ ಹೆಚ್ಚಳವಾಗಿದೆ.

ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ. ಕಳೆದ ಮೂರು ದಿನಗಳಿಂದ ದೇಶವು ಪ್ರತಿದಿನ ಮೂರು ಲಕ್ಷದಂಚಿನಲ್ಲಿ ಕೊರೊನಾ ಸೋಂಕು ದೃಢಪಡುತ್ತಿದ್ದು, ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.