ಕೋಲಾರ : ಒಂದೇ ಮುಹೂರ್ತದಲ್ಲಿ ಅಕ್ಕ ತಂಗಿಯನ್ನು ಮದುವೆ ಯಾಗೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದ್ದ ಉಮಾಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮ ದ ಸುಪ್ರಿಯಾ ಹಾಗೂ ಲಲಿತ ಎಂಬ ಅಕ್ಕ ತಂಗಿಯರನ್ನು ಉಮಾಪತಿ ಎಂಬಾತ ಮದುವೆಯಾಗಿದ್ದ. ಮದುವೆಯ ಪೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ಗಳು ನಡೆದಿತ್ತು.
ಮಾತು ಬಾರದ ಅಕ್ಕನನ್ನು ಮದುವೆಯಾದ್ರೆ ಮಾತ್ರ ತಾನು ಮದುವೆ ಯಾದ್ರೆ ಮಾತ್ರವೇ ತಾನು ಮದುವೆಯಾಗೋದಾಗಿ ತಂಗಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಉಮಾಪತಿ ಒಂದೇ ಮುಹೂರ್ತದಲ್ಲಿ ಇಬ್ಬರನ್ನೂ ಮದುವೆಯಾಗಿದ್ದ. ಮದುವೆಯ ಬೆನ್ನಲ್ಲೆ ಇಬ್ಬರು ಹೆಂಡಿರ ಪೋಟೋ ಸಖತ್ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಅವರು ತನಿಖೆಗೆ ಆದೇಶಿಸಿದ್ದರು. ತನಿಖೆಯ ವೇಳೆ ಯಲ್ಲಿ ತಂಗಿ ಲಲಿತಾ ಅಪ್ರಾಪ್ತೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಕಾಯ್ದೆಯಡಿ ಯಲ್ಲಿ ಉಮಾಪತಿ ಸೇರಿ 7 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದ್ದು, ಉಮಾಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
