ಸೋಮವಾರ, ಜೂನ್ 16, 2025
HomeBreakingಕೋವಿಡ್ ಚಿಕಿತ್ಸೆಗೆ ಪರಿಷ್ಕೃತ ಮಾರ್ಗಸೂಚಿ….! ಪ್ಲಾಸ್ಮಾ ಥೆರಪಿ ಕೈಬಿಟ್ಟ ಕೇಂದ್ರ ಸರ್ಕಾರ…!!

ಕೋವಿಡ್ ಚಿಕಿತ್ಸೆಗೆ ಪರಿಷ್ಕೃತ ಮಾರ್ಗಸೂಚಿ….! ಪ್ಲಾಸ್ಮಾ ಥೆರಪಿ ಕೈಬಿಟ್ಟ ಕೇಂದ್ರ ಸರ್ಕಾರ…!!

- Advertisement -

ನವದೆಹಲಿ: ಪ್ಲಾಸ್ಮಾ ಥೆರಪಿ ವಿಧಾನದಿಂದ ಕೋವಿಡ್ ಗೆ ನೀಡಲಾಗು ತ್ತಿದ್ದ ಚಿಕಿತ್ಸಾ ವಿಧಾನವನ್ನು ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಡಿಸಿದೆ.

A1 23
https://kannada.newsnext.live/health-tips-ramayana-fruits-benifits/

ಪ್ಲಾಸ್ಮಾ ಥೆರಪಿಯಿಂದ ನೀರಿಕ್ಷಿತ ಪ್ರಮಾಣದಲ್ಲಿ ಚಿಕಿತ್ಸೆಯ ಫಲ ದೊರೆಯದೇ ಇರೋದರಿಂದ ಈ ವಿಧಾನವನ್ನು ಚಿಕಿತ್ಸಾ ಕ್ರಮದಿಂದ ಕೈಬಿಡಲು ಸರ್ಕಾರ ವೈದ್ಯಕೀಯ ಸಲಹೆಗಳ  ಆಧಾರದ ಮೇಲೆ ನಿರ್ಧರಿಸಿದೆ.

A2 22
https://kannada.newsnext.live/daily-horoscope-18-05-2021-indina-dina-bhavishya-arise-taurus-gemini-cancer-and-zodiac-sign-prediction-today-astrology/

ಸೋಮವಾರ ಸಭೆ ನಡೆಸಿದ ಕೇಂದ್ರ ಸರ್ಕಾರ ಕೋವಿಡ್ ಗೆ ಸಂಬಂಧಿಸಿದ ನಿಯಮಾವಳಿಗಳನ್ನು ಪರಿಷ್ಕರಿಸಿದ್ದು, ಈ ವೇಳೆ ಪ್ಲಾಸ್ಮಾ ವಿಧಾನವನ್ನು ಕೈಬಿಡುವ ನಿರ್ಣಯಕ್ಕೆ ಬರಲಾಗಿದೆ.

A3 20

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಸಲಹೆ ಮೇರೆಗೆ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಹಲವು ಪ್ರಕರಣದಲ್ಲಿ ಪ್ಲಾಸ್ಮಾ ಬಳಕೆ ಪ್ರಯೋಜನವಾಗಿಲ್ಲ. ಅಲ್ಲದೇ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ಸಾಧ್ಯವಾಗಿಲ್ಲ ಎಂದು ಐಸಿಎಂಆರ್ ತಿಳಿಸಿದೆ.

A4 17

ಹೀಗಾಗಿ ಕೋವಿಡ್-19 ಚಿಕಿತ್ಸಾ ಕ್ರಮದಿಂದ ಪ್ಲಾಸ್ಮಾ ಥೆರಪಿ ಕೈಬಿಟ್ಟು ಆದೇಶ ಹೊರಡಿಸಲಾಗಿದೆ. ಇನ್ಮುಂದೆ ದೇಶದಲ್ಲಿ ಪ್ಲಾಸ್ಮಾ ಥೆರಪಿಯನ್ನು ಚಿಕಿತ್ಸೆಗೆ ಬಳಸುವಂತಿಲ್ಲ.  ಈ ಮೊದಲು ಕೊವೀಡ್ ನಿಂದ ಚೇತರಿಸಿಕೊಂಡ ರೋಗಿಗಳ ಪ್ಲಾಸ್ಮಾ ಬಳಸಿ ಸೋಂಕಿತರ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿತ್ತು.

9000 75
RELATED ARTICLES

Most Popular