ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾ ರಿಲೀಸ್ ವಿಚಾರದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಕೆಜಿಎಫ್ ಸಿನಿಮಾ ಇದೀಗ ಕೆಜಿಎಫ್-2 ಸಿನಿಮಾ ಹಾಗೂ ಯಶ್ ಅಭಿಮಾನಿಗಳಿಗೆ ಖುಷಿ ಹಾಗೂ ಹೆಮ್ಮೆಯ ಸುದ್ದಿ ನೀಡಿದೆ. ಕೆಜಿಎಫ್-2 ಯೂಟ್ಯೂಬ್ ನಲ್ಲಿ ಸಖತ್ ಹಿಟ್ ಸೃಷ್ಟಿಸಿದ್ದು, ಅತಿಹೆಚ್ಚು ವೀಕ್ಷಣೆಗೊಳಗಾದ ಭಾರತದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಕಳೆದ ಜನವರಿಯಲ್ಲಿ ಯಶ್ ಹುಟ್ಟುಹಬ್ಬದ ವೇಳೆ ಕೆಜಿಎಫ್-2 ಟೀಸರ್ ರಿಲೀಸ್ ಮಾಡಲಾಗಿತ್ತು. ಈಗಾಗಲೇ 33 ಮಿಲಿಯನ್ ವೀವ್ಸ್ ಪಡೆದಿರುವ ಕೆಜಿಎಫ್-2 ಟೀಸರ್ ಇದೀಗ 1 ಮಿಲಿಯನ್ ಕಮೆಂಟ್ ಗಳನ್ನು ಪಡೆದಿದ್ದು, ಅಲ್ಲದೇ ಅತಿಹೆಚ್ಚು ವೀಕ್ಷಣೆಗೊಳಗಾದ ಭಾರತದ ಮೊದಲ ಸಿನಿಮಾ ದಾಖಲೆಗೈಯ್ದಿದೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ವಿಶ್ವದಾದ್ಯಂತ 5 ಕ್ಕೂ ಹೆಚ್ಚು ಭಾಷೆಗಳಲ್ಲಿ ರಿಲೀಸ್ ಗೆ ಸಿದ್ಧವಾಗಿದೆ. ಈಗಾಗಲೇ ಎಲ್ಲ ಭಾಷೆಯಲ್ಲೂ ಸಿನಿಮಾ ಫರ್ಸ್ಟ್ ಲುಕ್ ಸೇರಿದಂತೆ ಟೀಸರ್ ಗಳು ರಿಲೀಸ್ ಆಗಿದೆ.
ಜುಲೈ 16 ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಕೊರೋನಾ ಸಂಕಷ್ಟದಿಂದಾಗಿ ಬಿಡುಗಡೆ ಮುಂದೂಡಿಕೆಯಾಗಿದ್ದು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಟೀಸರ್ ವೀಕ್ಷಣೆಯಲ್ಲಿ ಈಗಾಗಲೇ ದಾಖಲೆ ಬರೆದಿರುವ ಕೆಜಿಎಫ್-2 ಗೆ ಇದೀಗ 1 ಮಿಲಿಯನ್ ಕಮೆಂಟ್ ಗಳು ಬಂದಿದ್ದು, ಇದು ಕೂಡ ಭಾರತದ ಸಿನಿ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ. ಹೊಂಬಾಳೆ ಫಿಲ್ಸ್ಮಂ ಟ್ವೀಟ್ ಮೂಲಕ ಈ ಸಂಗತಿಯನ್ನು ಹಂಚಿಕೊಂಡಿದೆ.