ರಾಜಕೋಟ್: ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಟೀಮ್ ಇಂಡಿಯಾ ಕೊನೆಗೂ ಜೀವಂತವಾಗಿರಿಸಿಕೊಂಡಿದೆ. ರಾಜಕೋಟ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 1-1 ಅಂತರದಿಂದ ಸಮಬಲ ಸಾಧಿಸಿವೆ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭವೊದಗಿಸಿದ್ರು. ರೋಹಿತ್ ಶರ್ಮಾ 40 ರನ್ ಗಳಿಸಿದಾಗ ವಿಕೆಟ್ ಒಪ್ಪಿಸುತ್ತಿದ್ದಂತೆಯೇ ಬ್ಯಾಟಿಂಗ್ ನಡೆಸಿ ಕೊಯ್ಲಿ ಶಿಖರ್ ಧವನ್ ಉತ್ತಮ ಜೊತೆಯಾಟ ನೀಡಿದ್ರು. ಕೊಯ್ಲಿ 70ರನ್, ಶಿಖರ್ ಧವನ್ 96 ಹಾಗೂ ಕೆ.ಎಲ್.ರಾಹುಲ್ 80 ರನ್ ಗಳಿಸುವುದರೊಂದಿಗೆ ಭಾರತ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಭರ್ಜರಿ 340 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ಅಡಮ್ ಜಂಪಾ 3 ಹಾಗೂ ಕೆನೆ ರಿಚರ್ಡ್ಸನ್ 2 ವಿಕೆಟ್ ಪಡೆದುಕೊಂಡ್ರು.

ಭರ್ಜರಿ ಮೊತ್ತವನ್ನು ಬೆನತ್ತಿದ ಆಸ್ಟ್ರೇಲಿಯಾಕ್ಕೆ ಮೊಹಮದ್ ಶಮಿ ಆರಂಭಿಕ ಆಘಾತ ನೀಡಿದ್ರು. ಕಳೆದ ಪಂದ್ಯದ ಹಿರೋ ಡೇವಿಡ್ ವಾರ್ನರ್ 15 ರನ್ ಗಳಿಸುವಾಗಲೇ ಪೆವಿಲಿಯನ್ ಹಾದಿ ಹಿಡಿದಿದ್ರು. ನಂತರ ಆರೋನ್ ಪಿಂಚ್ ಹಾಗೂ ಸ್ಟೀವನ್ ಸ್ಮಿತ್ ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಒಂದಿಷ್ಟು ಹೊತ್ತು ಆಧರಿಸಿದ್ರು. ಆರೋನ್ ಪಿಂಚ್ 33 ರನ್ ಗಳಿಸಿದಾ ವಿಕೆಟ್ ಒಪ್ಪಿಸಿದ್ರೆ ಲ್ಯಾಬುಸ್ಟಗ್ನೆ 46ರನ್ ಗಳಿಸಿದ್ರು.

ಆಸ್ಟ್ರೇಲಿಯಾ ಪರ ಉತ್ತಮ ಬ್ಯಾಟಿಂಗ್ ನಡೆಸಿದ ಸ್ಟೀವನ್ ಸ್ಮಿತ್ 98 ರನ್ ಗಳಿಸಿ ವಿಕೆಟ್ ಒಪ್ಪಿಸುತ್ತಿದ್ದಂತೆಯೇ ವಿಜಯ ಲಕ್ಷ್ಮೀ ಭಾರತದತ್ತ ವಾಲಿದ್ದಳು. ಭಾರತ ಪರ ಶಮಿ 3, ಶೈಲಿ, ಜಡೇಜಾ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ.