ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಅನ್ ಲಾಕ್ ಆಗಿರುವ ಜಿಲ್ಲೆಗಳಲ್ಲಿಯೂ ಬಸ್ ಸೌಕರ್ಯವಿಲ್ಲ. ಹೀಗಾಗಿ ಮಹಿಳಾ ಶಿಕ್ಷಕಿಯರು ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ರಾಜ್ಯದ 11 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಅಲ್ಲದೇ ಉಳಿದ ಜಿಲ್ಲೆಗಳಲ್ಲಿಯೂ ಅನ್ ಲಾಕ್ ಆದೇಶ ಜಾರಿ ಮಾಡಿದ್ದರೂ ಕೂಡ ಬಸ್ ಸೌಕರ್ಯವಿಲ್ಲ. ಶಿಕ್ಷಣ ಇಲಾಖೆ ಜೂನ್ 15ರಿಂದ ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ. ಆದರೆ ಶಾಲೆಗೆ ಬರಲು ಮಹಿಳಾ ಶಿಕ್ಷಕಿಯರಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಸೌಕರ್ಯ ಆರಂಭವಾಗು ವವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಆದರೆ ಏಕೋಪಾಧ್ಯಾಯ ಶಾಲೆಯಲ್ಲಿನ ಮಹಿಳಾ ಶಿಕ್ಷಕಿ ಯರು ಶಾಲೆಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ.
ಸದ್ಯ ಈ ಆದೇಶ ಜೂನ್ 21ರ ವರೆಗೆ ಜಾರಿಯಲ್ಲಿರಲಿದೆ. ಒಂದೊಮ್ಮೆ ಆನಂತರವೂ ಲಾಕ್ ಡೌನ್ ಆದೇಶ ಮುಂದುವರಿದು, ಬಸ್ ಸಂಚಾರ ಆರಂಭವಾಗದೇ ಇದ್ದಲ್ಲಿ, ಇನ್ನಷ್ಟು ದಿನಗಳ ಕಾಲ ಶಿಕ್ಷಕಿಯರಿಗೆ ವರ್ಕ್ ಫ್ರಂ ಹೋಮ್ ಆದೇಶ ಮುಂದುವರಿಯುವ ಸಾಧ್ಯತೆಯಿದೆ. ಈ ಕುರಿತು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
