ಫೆಲೆಸ್ತಿನ್: ಇಸ್ರೆಲ್ ಮತ್ತೆ ತನ್ನ ಪರಾಕ್ರಮ ಮುಂದುವರೆಸಿದ್ದು, ಗಾಜಾ ಪಟ್ಟಿ ಮೇಲೆ ವಾಯುದಾಳಿ ಮುಂದುವರೆಸಿದೆ. ಫೆಲೆಸ್ತಿನ್ ಪ್ರದೇಶದಲ್ಲಿರುವ ಉಗ್ರರು ಅಗ್ನಿ ಸ್ಪರ್ಶದ ಬಲೂನ್ ಒಂದನ್ನು ಹಾರಿಬಿಟ್ಟ ಹಿನ್ನೆಲೆಯಲ್ಲಿ ದಾಳಿ ನಡೆಸುತ್ತಿರುವುದಾಗಿ ಇಸ್ರೆಲ್ ಹೇಳಿಕೊಂಡಿದೆ.

ಕಳೆದ ತಿಂಗಳು ಎರಡು ರಾಷ್ಡ್ರಗಳ ನಡುವೆ ಕದನ ನಡೆದು ನೂರಾರು ಜನರ ಹತ್ಯೆಯಾದ ಬಳಿಕ ಕದನ ವಿರಾಮ ಘೋಷಿಸಲಾಗಿತ್ತು. ಆದರೆ ಇದೀಗ ಮತ್ತೆ ಇಸ್ರೆಲ್ ದಾಳಿ ಆರಂಭಿಸಿದೆ.
ಪ್ಯಾಲೆಸ್ತಿನ್ ಕಡೆಯಿಂದ ಸ್ಪೋಟಕ ತುಂಬಿದ ಬಲೂನ್ ಹಾರಿಬಂದ ಹಿನ್ನೆಲೆಯಲ್ಲಿ ಇಸ್ರೆಲ್ ಗಾಜಾಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
ಪ್ಯಾಲೇಸ್ತಿನ್ ಹಾರಿಬಿಟ್ಟ ಬಲೂನ್ ನಿಂದ ಇಸ್ರೆಲ್ 11 ಕಡೆಗಳಲ್ಲಿ ಬೆಂಕಿ ಅವಘಡ ಉಂಟಾಗಿದೆ. ಸ್ಪೋಟಕ್ ತುಂಬಿದ ಬಲೂನ್ ಹಾರಾಟದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೆಲ್, ಬಲೂನ್ ಹಾರಾಟಕ್ಕೆ ಪ್ರತಿಯಾಗಿ ಖಾನ್ ಯೂನೆಸ್ ನಲ್ಲಿರುವ ಭಯೋತ್ಪಾದಕರಿಗೆ ಸೌಲಭ್ಯ ಒದಗಿಸುವ ವ್ಯವಸ್ಥೆ ಹಾಗೂ ಸಭೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದಿದೆ.
ಕಳೆದ ಮೇ ನಲ್ಲಿ 11 ದಿನಗಳ ಕಾಲ ನಡೆದ ಪ್ಯಾಲೇಸ್ತಿನ ಮತ್ತು ಇಸ್ರೆಲ್ ಯುದ್ಧದಲ್ಲಿ 260 ಪ್ಯಾಲೇಸ್ತಿನಿಯರು ಸತ್ತಿದ್ದರೇ, 13 ಇಸ್ರೆಲಿಗರು ಸಾವನ್ನಪ್ಪಿದ್ದಾರೆ. ಬಳಿಕ ಕದನ ವಿರಾಮ ಘೋಷಿಸಲಾಗಿತ್ತು.