ಮಂಗಳವಾರ, ಏಪ್ರಿಲ್ 29, 2025
HomeBreakingKanganaranaut:ಇಂಡಿಯಾ ವಿವಾದದ ಬಳಿಕ ಇಂದಿರಾಗಾಂಧಿ ಲೈಫ್ ಸ್ಟೋರಿಯತ್ತ ಕಂಗನಾ ಚಿತ್ತ….!!

Kanganaranaut:ಇಂಡಿಯಾ ವಿವಾದದ ಬಳಿಕ ಇಂದಿರಾಗಾಂಧಿ ಲೈಫ್ ಸ್ಟೋರಿಯತ್ತ ಕಂಗನಾ ಚಿತ್ತ….!!

- Advertisement -

ಇಂಡಿಯಾ ಗುಲಾಮರಿಟ್ಟ ಹೆಸರು ಬದಲಾಯಿಸೋಣ ಎನ್ನುವ ಮೂಲಕ ಇನ್ ಸ್ಟಾಗ್ರಾಂನಲ್ಲಿ ವಿವಾದ ಸೃಷ್ಟಿಸಿದ್ದ ನಟಿ ಕಂಗನಾ ರನಾವುತ್, ಇದೀಗ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಶಕ್ತಿಯಾಗಿದ್ದ ಇಂಧಿರಾಗಾಂಧಿ ಜೀವನಚರಿತ್ರೆಯತ್ತ  ಗಮನ ಹರಿಸಿದ್ದು, ಎಮರ್ಜೆನ್ಸಿ ಟೈಟಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

ಕೊರೋನಾ ಬ್ರೇಕ್ ಬಳಿಕ ಮತ್ತೆ ಕೆಲಸಕ್ಕೆ ಮರಳಿದ ಕಂಗನಾ ರನಾವುತ್ ಇಂಧಿರಾ ಗಾಂಧಿಯವರ ಜೀವನಕಥೆ ಆಧಾರಿತ ಎಮರ್ಜೆನ್ಸಿ ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

 ಈ ಬಗ್ಗೆ ಸ್ವತಃ ನಟಿ ಕಂಗನಾ ರನಾವುತ್  ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಮಣಿಕರ್ಣಿಕಾ ಬಳಿಕ ಇಂದಿರಾಗಾಂಧಿ ನಿರ್ದೇಶಿಸುತ್ತಿದ್ದೇನೆ. ಅದಕ್ಕಾಗಿ ಒಂದಿಷ್ಟು ಸಿದ್ಧತೆಗಳು ನಡೆದಿವೆ. ಒಂದಿಷ್ಟು ಒಳ್ಳೆಯ ಕಲಾವಿದರು ಈ ಚಿತ್ರಕ್ಕಾಗಿ ಜೊತೆಗೂಡಲಿದ್ದಾರೆ ಎಂದಿದ್ದಾರೆ.

https://instagram.com/kanganaranaut?utm_medium=copy_link

ಈಗಾಗಲೇ ತಮಿಳುನಾಡಿನ ತಲೈವಿ ಜಯಲಲಿತಾ ಜೀವನಾಧಾರಿತ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಕಂಗನಾ ಆ ಚಿತ್ರದ ಬಿಡುಗಡೆಗೂ ಮುನ್ನವೇ ಇಂಧಿರಾಗಾಂಧಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧವಾಗಿದ್ದಾರೆ.

ಕಂಗನಾ ರನಾವುತ್ ಒಡೆತನದ ಮಣಿಕರ್ಣಿಕಾ ಬ್ಯಾನರ್ಸ್ ಅಡಿಯಲ್ಲೇ  ಇಂಧಿರಾಗಾಂಧಿ ಕತೆ ಆಧಾರಿತ ಎಮರ್ಜೆನ್ಸಿ ಸಿದ್ಧವಾಗಲಿದ್ದು, ಇಂದಿರಾಗಾಂಧಿ ಲುಕ್ ನಲ್ಲಿ ಕಾಣಿಸಿಕೊಳ್ಳಲು ಕಂಗನಾ ಸಜ್ಜಾಗುತ್ತಿದ್ದಾರೆ.

RELATED ARTICLES

Most Popular