ನವದೆಹಲಿ : ಜಗತ್ತಿನ ಹಲವು ದೇಶಗಳಲ್ಲಿ ತಲ್ಲಣ ಮೂಡಿಸಿರುವ ಡೆಲ್ಟಾ ಪ್ಲಸ್ ಭಾರತದಲ್ಲಿಯೂ ಆತಂಕ ಮೂಡಿಸಿದೆ. ಅಷ್ಟೇ ಅಲ್ಲಾ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಮೊದಲ ಬಲಿ ಪಡೆದಿದೆ.

ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಸಂಗ್ರಹಿಸಲಾಗಿದ್ದ ಸ್ವಾಬ್ ನಲ್ಲಿ ಪತಿ, ಪತ್ನಿಯಲ್ಲಿ ಡೆಲ್ಟಾ ಪ್ಲಸ್ ಪ್ರಭೇದ ಪತ್ತೆಯಾಗಿತ್ತು. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಇಬ್ಬರಿಗೂ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಡೆಲ್ಟಾ ಪ್ಲಸ್ ಎಂದು ಗೊತ್ತಾದ ಬಳಿಕ ಮತ್ತಷ್ಟು ನಿಗಾ ವಹಿಸಲಾಗಿತ್ತು. ಆದರೆ ಇದೀಗ ಡೆಲ್ಟಾ ಪ್ಲಸ್ ದೃಢಪಟ್ಟಿದ್ದ ಮಹಿಳೆ ಮೃತಪಟ್ಟಿದ್ದರು, ಆದರೆ ಪತಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಪತ್ನಿ ಕೊರೊನಾ ಲಸಿಕೆ ಪಡೆದುಕೊಂಡಿರಲಿಲ್ಲ. ಆದರೆ ಪತಿ ಕೊರೊನಾ ವೈರಸ್ ಸೋಂಕಿನ ಎರಡು ಡೋಸ್ ಗಳನ್ನು ತೆಗೆದುಕೊಂಡಿದ್ದರು. ಮಧ್ಯಪ್ರದೇಶದಲ್ಲಿ ಇದುವರೆಗೆ ಒಟ್ಟು ಐದು ಡೆಲ್ಟಾ ಪ್ಲಸ್ ಪ್ರಭೇದದ ಪ್ರಕರಣಗಳು ವರದಿಯಾಗಿದೆ. 3 ಕೇಸ್ ಗಳು ಭೋಪಾಲ್ ನಿಂದ ವರದಿಯಾಗಿದ್ದು, 2 ಕೇಸ್ ಗಳು ಉಜ್ಜಯನಿಯಲ್ಲಿ ವರದಿಯಾಗಿದೆ. ಡೆಲ್ಟಾ ವೈರಸ್ ಸೋಂಕು ಕಾಣಿಸಿಕೊಂಡ ಐವರ ಪೈಕಿ ನಾಲ್ವರು ಚೇತರಿಸಿಕೊಂಡಿದ್ದಾರೆ.