ನವದೆಹಲಿ : ಕಳೆದ ಕೆಲವು ದಿನಗಳಿಂದಲೂ ಒಂದಿಲ್ಲೊಂದು ವಿವಾದ ಕ್ಕೆ ಸಿಲುಕುತ್ತಿದ್ದ ಟ್ವಿಟರ್ ಇದೀದ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಭಾರತ ದೇಶದ ಮುಕುಟಮಣಿ ಎನಿಸಿಕೊಂಡಿರುವ ಜಮ್ಮು ಕಾಶ್ಮೀರವನ್ನೇ ಭಾರತ ನಕ್ಷೆಯಿಂದ ತೆಗೆದು ತಿರುಚಿದ ನಕ್ಷೆ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಟ್ವಿಟರ್ ಗೆ ಸಂಕಷ್ಟ ಎದುರಾಗಿದೆ.
ಸೋಶಿಯಲ್ ಮೀಡಿಯಾ ಮಾರ್ಗಸೂಚಿ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದ ಟ್ವಿಟರ್ ಸಂಸ್ಥೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಮುಸ್ಲಿಂ ವೃದ್ಧನ ನಕಲಿ ವಿಡಿಯೋ ವೈರಲ್ ಮಾಡಿ ವಿವಾದಕ್ಕೆ ಸಿಲುಕಿತ್ತು. ಇದೀಗ ಈಗ ಭಾರತದ ನಕ್ಷೆಯನ್ನು ತಿರುಚಿ ಪೋಸ್ಟ್ ಮಾಡಿರುವುದು ಟ್ವಿಟರ್ ಇಂಡಿಯಾಕ್ಕೆ ಕಾನೂನು ಸಂಕಷ್ಟ ಎದುರಾಗಿದೆ.
ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ದೇಶವೆಂದು ತೋರಿಸಲಾಗಿದೆ. ಟ್ವೀಟರ್ ಬಳಕೆದಾರರೊಬ್ಬರು ಈ ಲೋಪವನ್ನು ಬಯಲಿಗೆಳೆದ ಬೆನ್ನಲ್ಲೇ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ. ಲೇಹ್ ಅನ್ನು ಚೀನಾದ ಭಾಗವೆಂದು ತೋರಿಸುವ ಭೂಪಟವನ್ನು ಟ್ವೀಟರ್ ಪ್ರದರ್ಶಿಸಿತ್ತು. ಈ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ಬಳಿಕ ಅದು ಕ್ಷಮೆ ಕೋರಿತ್ತು. ಅದರ ಬೆನ್ನಲ್ಲೇ ಇದೀಗ ಇಡೀ ಕಣಿವೆ ರಾಜ್ಯವನ್ನೇ ಪ್ರತ್ಯೇಕ ದೇಶವೆಂದು ತೋರಿಸುವ ಮೂಲಕ ಟ್ವೀಟರ್ ಎಡವಟ್ಟು ಮಾಡಿದೆ.
ಭಾರತದ ನಕ್ಷೆಯನ್ನೇ ತಿರುಚಿರುವ ಟ್ವಿಟರ್ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಮನೀಷ್ ಮಹೇಶ್ವರಿ ವಿರುದ್ದ ಬಜರಂಗ ದಳದ ಮುಖಂಡ ರು ನೀಡಿದ ದೂರಿನಡಿ ಉತ್ತರ ಪ್ರದೇಶದ ಬುಲಂದರ್ ಶಹರ್ ಪೊಲೀಸರು ಮಹೇಶ್ವರಿ ವಿರುದ್ಧ ಸೆಕ್ಷನ್ 205(2) ಹಾಗೂ 2008ರ ಐಟಿ(ತಿದ್ದುಪಡಿ) ಕಾನೂನಿನ ಸೆಕ್ಷನ್ 74ರಡಿ ಕೆಸ್ ದಾಖಲಿಸಿದ್ದಾರೆ.
ಟ್ವಟರ್ ಸಂಸ್ಥೆ ಪದೇ ಪದೇ ಇಂತಹ ಎಡವಟ್ಟುಗಳನ್ನು ಮಾಡುತ್ತಿದೆ. ಭಾರತ ನಕ್ಷೆಯನ್ನು ತಿರುಚಿರುವ ಪ್ರಕರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಹೊಸ ಐಟಿ ಕಾಯ್ದೆಯನ್ನು ಜಾರಿ ಮಾಡದ ಹಿನ್ನೆಲೆಯಲ್ಲಿ ಟ್ವೀಟರ್ ಇಂಡಿಯಾ ಮುಖ್ಯಸ್ಥರಿಗೆ ಪ್ರಕರಣ ಮುಂದಿನ ದಿನಗಳಲ್ಲಿ ಸವಾಲಾಗುವ ಸಾಧ್ಯತೆಯಿದೆ.