ಬ್ರಾಟಿಸ್ಲಾಮಾ : ಸಾಮಾನ್ಯವಾಗಿ ಸಿನಿಮಾ, ಗ್ರಾಫಿಕ್ಸ್ ಗಳಲ್ಲಿ ಮಾತ್ರವೇ ಹಾರುವ ಕಾರುಗಳನ್ನು ನೋಡಿದ್ದೇವೆ. ಆದ್ರೀಗ ಹಾರುವ ಕಾರಿನ ಕನಸು ನನಸಾಗುತ್ತಿದೆ. ಸ್ಲೋವಾಕಿಯಾ ಮೂಲದ ಕ್ಲೈನ್ ವಿಷನ್ ಕಂಪೆನಿ ಏರ್ ಕಾರ್ ಅಭಿವೃದ್ಧಿ ಪಡಿಸಿದ್ದು, ಎರಡು ನಗರಗಳ ನಡುವೆ ಯಶಸ್ವಿ ಹಾರಾಟ ನಡೆಸಿದೆ.

ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಏರ್‌ಕಾರ್ ಇದೇ ಮೊದಲ ಬಾರಿಗೆ ಪರೀಕ್ಷಾ ಹಾರಾಟವನ್ನು ಪೂರ್ಣಗೊಳಿಸಿದೆ. ಯಾವುದೇ ಹಾರುವ ಕಾರು ಅಂತರ ನಗರ ಹಾರಾಟವನ್ನು ಪೂರ್ಣ ಗೊಳಿಸಿದ್ದು ಇದೇ ಮೊದಲು. ಜೂನ್ 28 ರಂದು ಈ ಕಾರು ನೈಟ್ರಾ ಮತ್ತು ಸ್ಲೊವಾಕಿಯಾದ ಬ್ರಾಟಿಸ್ಲಾವಾ ಎಂಬ ಎರಡು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ಹಾರಿಡಿದೆ. ಹಾರುವ ಕಾರು ಎರಡು ನಗರಗಳನ್ನು ಕ್ರಮಿಸಲು 35 ನಿಮಿಷಗಳನ್ನು ತೆಗೆದು ಕೊಂಡಿದೆ. ಲ್ಯಾಂಡಿಂಗ್ ನಂತರ, ವಿಮಾನವು ಮೂರು ನಿಮಿಷಗಳಿ ಗಿಂತ ಕಡಿಮೆ ಅವಧಿಯಲ್ಲಿ ಸ್ಪೋರ್ಟ್ಸ್‌ಕಾರ್ ಆಗಿ ಬದಲಾಗಿದೆ.

ಫ್ಲೈಯಿಂಗ್ ಕಾರು 160 ಎಚ್‌ಪಿ ಬಿಎಂಡಬ್ಲ್ಯು ಎಂಜಿನ್ ಒಳಗೊಂಡಿದೆ. ಏರ್ ಕಾರು ಸುಮಾರು 8,200 ಅಡಿ ಎತ್ತರದಲ್ಲಿ 1,000 ಕಿ.ಮೀ. ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಕಾರು ಸುಮಾರು 170 ಕಿ.ಮೀ ವೇಗದಲ್ಲಿ ಹಾರಬಲ್ಲದು. ಈಗಾಗಗಲೇ ಸತತ 40 ಗಂಟೆಗಳ ಹಾರಾಟವನ್ನು ಪೂರ್ಣಗೊಳಿಸಿದೆ.

ಪರೀಕ್ಷಾ ಹಾರಾಟದ ಸಮಯದಲ್ಲಿ, ಹಾರುವ ಕಾರು ಕಡಿದಾದ 45 ಡಿಗ್ರಿ ತಿರುವುಗಳು ಮತ್ತು ಸ್ಥಿರತೆ ಮತ್ತು ಕುಶಲ ಪರೀಕ್ಷೆಯನ್ನು ಮಾಡಿದೆ. ಟೇಕಾಫ್ ಮಾಡಲು ಮತ್ತು ಕಾರಿನಿಂದ ವಿಮಾನಕ್ಕೆ ಪರಿವರ್ತಿಸಲು ಸುಮಾರು ಎರಡು ನಿಮಿಷ ಮತ್ತು 15 ಸೆಕೆಂಡುಗಳು ಬೇಕಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಏರ್ ಕಾರು ರಸ್ತೆಯಲ್ಲಿ ಚಲಿಸುವಾಗ ವಿಶಿಷ್ಟ ವಿನ್ಯಾಸವನ್ನು ಒಳಗೊಂಡಿದೆ. ಭವಿಷ್ಯದಲ್ಲಿ ನಗರ ಪ್ರಯಾಣ ಮತ್ತು ಅಂತರ ನಗರ ಪ್ರಯಾಣಕ್ಕೆ ಹೆಚ್ಚು ಅನುಕೂಲಕರವಾಗಿದೆ. ಉಬರ್ ಈಗಾಗಲೇ ರೈಡ್- ಹೇಲಿಂಗ್ ಸೇವೆಗಳನ್ನು ಈಗಾಗಲೇ ಘೋಷಿಸಿವೆ.

ಈ ಫ್ಲೈಯಿಂಗ್ ಕಾರ್ ಆಧಾರಿತ ರೈಡ್-ಹೇಲಿಂಗ್ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆ ಯಿದೆ. ಏರ್ ಕಾರು ಹ್ಯುಂಡೈನಂತಹ ಕೆಲವು ಒಇಎಂಗಳು ಸಹ ಫ್ಲೈಯಿಂಗ್ ಕಾರ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿವೆ