ಮಂಗಳವಾರ, ಜೂನ್ 17, 2025
HomeCrimeFacebook Kidnap : ಫೇಸ್ ಬುಕ್ ನಲ್ಲಿ ಮಹಿಳೆಯ ಪರಿಚಯ, ಕಿಡ್ನಾಪ್ ಮಾಡಿ ಬೆದರಿಕೆ

Facebook Kidnap : ಫೇಸ್ ಬುಕ್ ನಲ್ಲಿ ಮಹಿಳೆಯ ಪರಿಚಯ, ಕಿಡ್ನಾಪ್ ಮಾಡಿ ಬೆದರಿಕೆ

- Advertisement -

ಕೊಲ್ಕತ್ತಾ : ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಅದ್ರಲ್ಲೂ ಉಪಯೋಗದ ಬದಲು ಅನಾಹುತಗಳೇ ಹೆಚ್ಚಾಗಿ ನಡೆಯುತ್ತಿದೆ. ಇದೀಗ ಫೇಸ್ ಬುಕ್ ನಲ್ಲಿ ಮಹಿಳೆ ಯನ್ಜು ಪರಿಚಯ‌ ಮಾಡಿಕೊಂಡ ವ್ಯಕ್ತಿ ಆಕೆಯನ್ನು ಕಿಡ್ನಾಪ್ ಮಾಡಿದ್ದಾನೆ.‌

Facebook Love News Next

ಪಶ್ಚಿಮ ಬಂಗಾಳದ ಬಿರ್​ಭಮ್​​ ಎಂಬಲ್ಲಿ ನಡೆದಿದೆ. ಇಲ್ಲಿನ ನಲ್ಹಾತಿ ನಿವಾಸಿ ಮಹಿಳೆಗೆ 2019ರಲ್ಲಿ ವಿವಾಹವಾಗಿತ್ತು. ಪತಿಯ ಮನೆಯಲ್ಲಿ ವಾಸವಿದ್ದ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಮಹಿಳೆಗೆ ಫೇಸ್​ಬುಕ್​​ನಲ್ಲಿ ರಾಕೇಶ್​ ಕುಮಾರ್​ ಪಾಂಡೆ ಎಂಬಾತನ ಜೊತೆಗೆ ಪರಿಚಯವಾಗಿತ್ತು‌. ಪರಿಚಯ ಸ್ನೇಹ, ಪ್ರೀತಿಗೆ ತಿರುಗಿತ್ತು‌.‌ ಅಲ್ಲದೆ ಒಂದು ದಿನ ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಾಳೆ.

Facebook Love Kidnap News Next

ಮಹಿಳೆಯ ಪತಿ ಪತ್ನಿ ನಾಪತ್ತಯಾಗುತ್ತಲೇ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ ರಾಕೇಶ್ ಪಾಂಡೆ ಮಹಿಳೆಯನ್ನು ಗುಜರಾತ್‌ಗೆ ಕರೆದೊಯ್ದು ಕಿಡ್ನಾಪ್ ಮಾಡಿದ್ದಾನೆ. ಅಲ್ಲದೇ ಮಹಿಳೆಯ‌ ಮನೆಗೆ ಕರೆ ಮಾಡಿ 6 ಲಕ್ಷ‌ ರೂಪಾಯಿ‌ ಹಣವನ್ನು ನೀಡಬೇಕು. ಇಲ್ಲವಾದ್ರೆ ಮಹಿಳೆಯನ್ನು ಮಾರಾಟ ಮಾಡುವುದಾಗಿಯೂ ಬೆದರಿಕೆ ಯೊಡ್ಡಿದ್ದಾನೆ.

Police

ಮಹಿಳೆಯ ತಂದೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಅಪಹರಣಕಾರನ ಕರೆಯನ್ನು ಆಧರಿಸಿ ಪೊಲೀಸರು ರಾಕೇಶ್ ಕುಮಾರ್ ಪಾಂಡೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular