ನವದೆಹಲಿ : ಕೊರೊನಾ ವೈರಸ್ ಸೋಂಕಿನ ವಿರುದ್ದ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಪ್ರಮುಖವಾಗಿ ದೇಶದ ಪ್ರತೀ ಪ್ರಜೆಗೂ ಕೊರೊನಾ ಲಸಿಕೆ ಹಾಕಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ಈ ನಡುವಲ್ಲೇ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಅಧ್ಯಯನವೊಂದು ಗುಡ್ ನ್ಯೂಸ್ ಕೊಟ್ಟಿದೆ.

ಕೊರೊನಾ ಎರಡನೇ ಅಲೆಯ ಅಬ್ಬರ ತಗ್ಗಿದೆ. ಮೂರನೇ ಅಲೆಯ ಆತಂಕ ಶುರುವಾಗಿದೆ. ಈ ನಡುವಲ್ಲೇ ಲಸಿಕೆ ಅಭಿಯಾನ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಲಸಿಕೆ ಪಡೆದವರಲ್ಲಿ ಯಾವ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ ಅನ್ನೋ ಕುರಿತು ಅಧ್ಯಯನವೊಂದು ನಡೆದಿದೆ. ಪಂಜಾಬ್ ಸರಕಾರದ ಸಹಕಾರದೊಂದಿಗೆ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸ್ನಾತಕೋತ್ತರ ಸಂಸ್ಥೆ ಪಂಜಾಬ್ ಪೊಲೀಸರ ಮೇಲೆ ಅಧ್ಯಯನ ನಡೆಸಿ ವರದಿಯನ್ನು ನೀಡಿದೆ.

ಪ್ರಮುಖವಾಗಿ ಕೊರೊನಾ ಒಂದು ಡೋಸ್ ಲಸಿಕೆಯನ್ನು ಪಡೆದವರು ಕೊರೊನಾ ಸೋಂಕಿನಿಂದ ಆಗಬಹುದಾದ ಸಾವಿನ ಅಪಾಯದಿಂದ ಶೇ 92ರಷ್ಚು ರಕ್ಷಣೆಯನ್ನು ಪಡೆದ್ರೆ, ಅದೇ ಎರಡು ಡೋಸ್ ಲಸಿಕೆ ಪಡೆದರೆ ಸಾವಿನ ಅಪಾಯದಿಂದ ಶೇ 98ರಷ್ಟು ರಕ್ಷಣೆ ಸಿಗಲಿದೆ ಎಂದು ಅಧ್ಯಯನ ಮಾಹಿತಿಯನ್ನು ನೀತಿ ಆಯೋಗ ಸದಸ್ಯ ಡಾ. ವಿಕೆ. ಪೌಲ್ ಹಂಚಿಕೊಂಡಿದ್ದಾರೆ.

ಕೊರೊನಾ ಲಸಿಕೆಯನ್ನು ಪಡೆಯದ 4868 ಪೊಲೀಸ್ ಸಿಬ್ಬಂದಿಯ ಪೈಕಿ15 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಆದರೆ ಒಂದು ಡೋಸ್ ಕೊರೊನಾ ಲಸಿಕೆ ಪಡೆದಿದ್ದ35,856 ಪೊಲೀಸ್ ಸಿಬ್ಬಂದಿಗಳ ಪೈಕಿ 9 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇನ್ನು 2 ಡೋಸ್ ಲಸಿಕೆ ಪಡೆಕೊಡಂದಿದ್ 42,720 ಸಿಬ್ಬಂದಿಯ ಪೈಕಿ ಇಬ್ಬರು ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಅಧ್ಯಯನದ ವರದಿ ಹೇಳಿದೆ.

ದೇಶದಲ್ಲಿ ಕೊರೊನಾ ಲಸಿಕೆ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವರಲ್ಲಿ ಗೊಂದಲಗಳಿಗೆ. ಇನ್ನೊಂದೆಡೆ ಮೂರನೇ ಲಸಿಕೆಯ ಭೀತಿಯ ನಡುವಲ್ಲೇ ಕೊರೊನಾ ಲಸಿಕೆ ಪಡೆಯಲು ಜನರು ಮುಂದಾಗಿದ್ದಾರೆ. ಈ ನಡುವಲ್ಲೇ ಕೊರೊನಾ ಲಸಿಕೆ ಪಡೆದವರು ಸಾವಿನಿಂದ ಪಾರಾಗುತ್ತಾರೆ ಅನ್ನೋ ವರದಿ ಜನರ ಭಯವನ್ನು ಹೋಗಲಾಡಿದೆ. ಮೂರನೇ ಅಲೆಯ ಹೊತ್ತಲೇ ದೇಶದ ಜನರಿಗೆ ಲಸಿಕೆ ಲಭ್ಯವಾದ್ರೆ ಕೊರೊನಾ ಸೋಂಕನ್ನು ಭಾರತ ಸಮರ್ಥವಾಗಿ ಎದುರಿಸಲಿದೆ.