ಮಂಗಳವಾರ, ಏಪ್ರಿಲ್ 29, 2025
HomeBreakingRajanikanth: ತಮಿಳುನಾಡಿನ ತಲೈವಿ ರಾಜಕೀಯದಿಂದ ವಿಮುಖ….! ನೋ ಪಾಲಿಟಿಕ್ಸ್ ಎಂದ ರಜನಿಕಾಂತ್….!!

Rajanikanth: ತಮಿಳುನಾಡಿನ ತಲೈವಿ ರಾಜಕೀಯದಿಂದ ವಿಮುಖ….! ನೋ ಪಾಲಿಟಿಕ್ಸ್ ಎಂದ ರಜನಿಕಾಂತ್….!!

- Advertisement -

ತಮಿಳುನಾಡಿನ ರಾಜಕೀಯದಲ್ಲಿ ಸ್ಟಾರ್ ಚಮಕ್ ಬೆರೆಸುವ  ಹಾಗೂ ಅಭಿಮಾನವನ್ನು ಮತವಾಗಿ ಪರಿವರ್ತಿಸಿ ಅಧಿಕಾರ ಸ್ಥಾಪಿಸುವ ಕನಸು ಕಂಡಿದ್ದ ತಲೈವಾ ಖ್ಯಾತಿಯ ರಜನಿಕಾಂತ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ತಮಿಳುನಾಡಿನ ರಾಜಕೀಯ ಹಾಗೂ ಚುನಾವಣೆಯಲ್ಲಿ ಮೋಡಿ ಮಾಡುವ ಆಸೆಯೊಂದಿಗೆ ಪಕ್ಷ ಸ್ಥಾಪಿಸಿದ್ದ ರಜನಿಕಾಂತ್ ತಮ್ಮನ್ನು ಕಾಡುತ್ತಿರುವ ಅನಾರೋಗ್ಯದಿಂದಾಗಿ 2021 ರ ವಿಧಾನಸಭಾ ಚುನಾವಣೆಯಿಂದ ದೂರ ಉಳಿಯುವಂತಾಗಿತ್ತು.

ಆದರೆ ಆರೋಗ್ಯ ಸುಧಾರಿಸಿದ ಬಳಿಕ ಮತ್ತೆ ತಲೈವಾ ರಾಜಕೀಯಕ್ಕೆ ಮರಳುತ್ತಾರೆ ಎಂಬ ಅಭಿಮಾನಿಗಳ ನೀರಿಕ್ಷೆ ಮತ್ತೊಮ್ಮೆ ನಿರಾಸೆಯಲ್ಲಿ ಕೊನೆಯಾಗಿದ್ದು, ಶಾಶ್ವತವಾಗಿ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ 70 ವರ್ಷದ ರಜನಿಕಾಂತ್ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದ್ದಾರೆ. ‘

ತಾವು ಸ್ಥಾಪಿಸಿದ ಮಕ್ಕಳ್ ಮಂಡ್ರಮ್ ಪಕ್ಷ ತನ್ನ ರಾಜಕೀಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಿದ್ದು, ಕೇವಲ ಅಭಿಮಾನಿ ಸಂಘವಾಗಿ ಉಳಿಯಲಿದೆ ಎಂದು ರಜನಿಕಾಂತ್ ಪ್ರಕಟಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಮೂತ್ರಪಿಂಡಗಳ ಸಮಸ್ಯೆಯಿಂದ ಬಳಲುತ್ತಿರುವ ರಜನಿಕಾಂತ್ ಚೈನೈನಲ್ಲಿ ಹಲವು ಭಾರಿ ಚಿಕಿತ್ಸೆ ಪಡೆದುಕೊಂಡಿದ್ದು, ಕೆಲ ದಿನಗಳ ಹಿಂದೆಯಷ್ಟೇ ಅಮೇರಿಕಾಕ್ಕೆ ತೆರಳಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ.

ವೈದ್ಯರ ಸಲಹೆಯಂತೆ ಅತಿಯಾದ ಸುತ್ತಾಟ ಹಾಗೂ ಕೊರೋನಾದಿಂದ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯ ಇರೋದರಿಂದ ರಾಜಕೀಯದಿಂದ ದೂರ ಸರಿಯಲು ತಲೈವಾ ನಿರ್ಧರಿಸಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಸಹಿ ಹಾಕಿರುವ ಸಿನಿಮಾಗಳ ಬಳಿಕ ರಜನಿಕಾಂತ್ ನಟನೆಯಿಂದ ಕೂಡ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.  

RELATED ARTICLES

Most Popular