ಬೆಂಗಳೂರು : ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ನೂತನ ಸಂಪುಟ ವಿಸ್ತರಣೆಯ ಕಸರತ್ತು ಶುರುವಾಗಿದೆ. ಈಗಾಗಲೇ ದೆಹಲಿ ಭೇಟಿ ನೀಡಿರುವ ಬೊಮ್ಮಾಯಿ ವಾರದ ಒಳಗೆ ಸಂಪುಟ ರಚನೆ ಮಾಡುವುದಾಗಿ ಘೋಷಿಸಿದ್ದಾರೆ.
ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ. ಈ ವೇಳೆಯಲ್ಲಿ ರಾಜ್ಯದಲ್ಲಿ ಮಂತ್ರಿ ಮಂಡಲ ರಚನೆ ಮಾಡುವ ಕುರಿತು ಕೇಂದ್ರ ನಾಯಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ನೂತನ ಸಚಿವರ ಪಟ್ಟಿಯನ್ನು ಈಗಾಗಲೇ ಹೈಕಮಾಂಡ್ ನಾಯಕರಿಗೆ ನೀಡಿದ್ದು, ಒಂದೆರಡು ದಿನಗಳಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋದು ಖಚಿತವಾಗಲಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಒಂದು ವಾರದ ಒಳಗಾಗಿ ಸಂಪುಟ ರಚನೆಯಾಗಲಿದೆ ಎಂದು ಹೇಳಿದ್ದಾರೆ. ಈ ನಡುವಲ್ಲೇ ರಾಜ್ಯದ ಹಲವು ಶಾಸಕರು ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸಲು ಶುರು ಮಾಡಿದ್ದಾರೆ. ಅದ್ರಲ್ಲೂ ಹಿರಿಯ ಸಚಿವರಿಗೆ ಕೋಕ್ ಕೊಟ್ಟು ಯುವಕರನ್ನೇ ಹೆಚ್ಚಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ಆರ್‌ಎಸ್‌ಎಸ್ ಯಾರನ್ನೆಲ್ಲಾ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಅನ್ನೋ ಕುರಿತು ಪಟ್ಟಿಯನ್ನು ಬಿಜೆಪಿ ನಾಯಕರಿಗೆ ಈಗಾಗಲೇ ರವಾನಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿ ಶ್ರೀರಕ್ಷೆ : ಸಂಪೂರ್ಣ ಸಹಕಾರ ಅಂದ್ರು ನಮೋ
ಒಟ್ಟಿನಲ್ಲಿ ಒಂದು ವಾರದ ಒಳಗೆ ರಾಜ್ಯದಲ್ಲಿ ಸಂಪುಟ ರಚನೆಯಾಗೋದು ಬಹುತೇಕ ಖಚಿತ. ಆದರೆ ಈ ಬಾರಿಯ ಸಂಪುಟಕ್ಕೆ ಯಾರೆಲ್ಲಾ ಸೇರ್ತಾರೆ. ಯಾರಿಗೆಲ್ಲಾ ಕೋಕ್ ಕೊಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : FINANCIER MURDER : ಕುಂದಾಪುರ ಸಳ್ವಾಡಿಯ ಡ್ರೀಮ್ ಫೈನಾನ್ಸ್ ನ ಪಾಲುದಾರ ಅಜೇಂದ್ರ ಶೆಟ್ಟಿ ಹತ್ಯೆ