ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೊರೋನಾ ಸಂಕಷ್ಟದ ನಡುವೆಯೂ ವೃತ್ತಿಬದುಕಿನ ಸುವರ್ಣಕಾಲದಲ್ಲಿರೋ ನಟಿ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಶೂಟಿಂಗ್ ಗೆ ಹೋದರೇ ಪೋಷಕರು ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ತೆಲುಗು,ತಮಿಳು,ಹಿಂದಿಯಲ್ಲಿ ಸಾಲು ಸಾಲು ಅವಕಾಶ ಪಡೆದುಕೊಳ್ತಿರೋ ರಶ್ಮಿಕಾ, ಹೈದ್ರಾಬಾದ್ ಮತ್ತು ಮುಂಬೈ ನಡುವೆ ಓಡಾಡುತ್ತಲೇ ಇರುತ್ತಾರೆ. ಆದರೆ ರಶ್ಮಿಕಾ ಈ ಓಡಾಟ ಮತ್ತು ಶೂಟಿಂಗ್ ಓಡಾಟಕ್ಕೆ ಪೋಷಕರು ಆತಂಕದಲ್ಲಿದ್ದಾರಂತೆ.

ಪೋಷಕರ ಆತಂಕಕ್ಕೆ ಕಾರಣ ಮತ್ತೇನೂ ಅಲ್ಲ ಕೊರೋನಾ. ಹೌದು ಕೊರೋನಾ ನಮ್ಮೆಲ್ಲರ ಬದುಕನ್ನೇ ಬದಲಾಯಿಸಿ ಬಿಟ್ಟಿದೆ ಎಂದಿರೋ ರಶ್ಮಿಕಾ ನಾನು ಶೂಟಿಂಗ್ ಹೊರಡುತ್ತಿದ್ದಂತೆ ಪೋಷಕರು ಗಾಬರಿಯಾಗುತ್ತಾರೆ.

ನಾನು ಶೂಟಿಂಗ್ ನಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸಾಧ್ಯವಿಲ್ಲ. ಇದು ಅವರ ಆತಂಕಕ್ಕೆ ಕಾರಣ. ಆದರೆ ನಾನು ಈ ಕಾರಣಕ್ಕೆ ನನ್ನನ್ನು ನಂಬಿ ಬಂಡವಾಳ ಹೂಡಿದವರಿಗೆ ತೊಂದರೆ ಕೊಡಲು ಸಾಧ್ಯವಿಲ್ಲ.

ನಟನೆ ನನ್ನ ವೃತ್ತಿಯಾಗಿರೋದರಿಂದ ನಾನು ಶೂಟಿಂಗ್ ಗೆ ಹಾಜರಾಗಲೇ ಬೇಕಾಗುತ್ತದೆ ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಸದ್ಯ ಬಾಲಿವುಡ್ ನ ಮಿಷನ್ ಮಜ್ನು ಶೂಟಿಂಗ್ ನಲ್ಲಿರೋ ರಶ್ಮಿಕಾ, ತೆಲುಗಿನ ಪುಷ್ಪ ಹಾಗೂ ಹಿಂದಿಯ ಗುಡ್ ಬೈ ಶೂಟಿಂಗ ಬಹುತೇಕ ಮುಗಿಸಿದ್ದಾರೆ.