ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಏಪ್ರಿಲ್ ನಲ್ಲಿ ಸ್ಥಗಿತಗೊಂಡಿದ್ದ ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಆರಂಭವಾಗಲಿದೆ. ಚೈನೈ,ತಿರುವೆಲ್ಲೂರು,ಕಂಚಿ ಸೇರಿದಂತೆ ತಮಿಳುನಾಡಿನ ವಿವಿಧ ಪ್ರದೇಶಗಳಿಗೆ ತೆರಳುವ ಕೆ.ಎಸ್.ಆರ್.ಟಿಸಿ ಬಸ್ ಗಳನ್ನು ಸೋಮವಾರದಿಂದ ಮತ್ತೆ ರಸ್ತೆಗಿಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಮೊದಲ ಹಂತದಲ್ಲಿ ಕೇವಲ 250 ಬಸ್ ಗಳು ಸಂಚಾರ ಆರಂಭ ಮಾಡಲಿದ್ದು ಪ್ರಯಾಣಿಕರ ರೆಸ್ಪಾನ್ಸ್ ಆಧರಿಸಿ ಬಸ್ ಗಳ ಪ್ರಮಾಣ ಹೆಚ್ಚಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಕೊರೋರಾ ಎರಡನೆ ಅಲೆ ತೀವ್ರಗೊಂಡು ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಏಪ್ರಿಲ್ ನಲ್ಲಿ ಬಸ್ ಗಳ ಸಂಚಾರವನ್ನು ರದ್ದು ಮಾಡಲಾಗಿತ್ತು. ಈಗ ಮತ್ತೆ ಆರಂಭವಾಗಿದೆ. ಚಾಲಕರು-ನಿರ್ವಾಹಕರಿಗೆ ಕೊರೋನಾ ವಾಕ್ಸಿನ್ ನೀಡಲಾಗಿದ್ದು, ಪ್ರಯಾಣಿಕರು ಕೊರೋನಾ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಹೇಳಿದೆ.