ಬಹುಭಾಷಾ ನಟ ಪ್ರಕಾಶ್ ರೈ ಮಗನಿಗಾಗಿ ಮತ್ತೊಮ್ಮೆ ಮದುವೆಯಾಗಿದ್ದಾರೆ. ಈಗಾಗಲೇ ಎರಡು ಮದುವೆಯಾಗಿರೋ ಪ್ರಕಾಶ್ ರೈ ಮತ್ತೊಂದು ಮದ್ವೆ ಆದ್ರಾ ಅಂತ ನೀವು ಹುಬ್ಬೇರಿಸಬೇಡಿ. ಪ್ರಕಾಶ್ ರೈ ಪೋನಿ ವರ್ಮಾರನ್ನೇ ಮತ್ತೊಮ್ಮೆ ಮದುವೆಯಾಗಿದ್ದಾರೆ.

ಅಗಸ್ಟ್ 24 ರಂದು ಪ್ರಕಾಶ್ ರೈ ಹಾಗೂ ಅವರ ಎರಡನೇ ಪತ್ನಿ ಪೋನಿ ವರ್ಮಾ ಅವರ 11 ನೇ ಮದುವೆ ವಾರ್ಷಿಕೋತ್ಸವ. ಈ ದಿನದಂದು ಪ್ರಕಾಶ್ ರೈ ತಮ್ಮ ಪುತ್ರ ವೇದಾಂತ್ ಆಸೆ ಈಡೇರಿಸೋದಿಕ್ಕಾಗಿ ಪೋನಿ ವರ್ಮಾ ಅವರನ್ನು ಮತ್ತೊಮ್ಮೆ ಮದುವೆಯಾಗಿದ್ದಾರೆ.

ಈ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ಪ್ರಕಾಶ್ ರೈ, ವೇದಾಂತ್ ಗೆ ಅಪ್ಪ-ಅಮ್ಮ ಮದುವೆಯಾಗೋದನ್ನು ನೋಡೋ ಆಸೆ ಇತ್ತಂತೆ. ಅದಕ್ಕಾಗಿ ಮತ್ತೊಮ್ಮೆ ಮದುವೆಯಾಗಿದ್ದೇವೆ ಎಂದಿದ್ದಾರೆ. ಪೋನಿವರ್ಮಾ ಅವರ ತುಟಿಗೆ ತುಟಿ ಬೆಸೆದ ಪ್ರಕಾಶ್ ರೈ ಮತ್ತೊಮ್ಮೆ ಜೊತೆ ಸಾಗುವ ವಾಗ್ದಾನ ಮಾಡಿದ್ದಾರಂತೆ.
1994 ರಲ್ಲಿ ಲಲಿತಾ ಜೊತೆ ವಿವಾಹವಾಗಿದ್ದ ಪ್ರಕಾಶ್ ರೈ ಗೆ ಒಂದು ಹೆಣ್ಣುಮಗುವಿದೆ. ಇದಾದ ಬಳಿಕ 2009 ರಲ್ಲಿ ಲಲಿತಾಗೆ ಡಿವೋರ್ಸ್ ನೀಡಿದ ಪ್ರಕಾಶ್ ರೈ, ಬಳಿನ ಪೋನಿ ವರ್ಮಾಅವರನ್ನು ವರಿಸಿದ್ದರು.