ಸೋಮವಾರ, ಜೂನ್ 16, 2025
HomeWorldಪಾಕಿಸ್ತಾನ ನಮ್ಮ ಎರಡನೇ ಮನೆ ಎಂದ ತಾಲಿಬಾನ್ !

ಪಾಕಿಸ್ತಾನ ನಮ್ಮ ಎರಡನೇ ಮನೆ ಎಂದ ತಾಲಿಬಾನ್ !

- Advertisement -

ಕಾಬೂಲ್‌ : ತಾಲಿಬಾನ್‌ ಉಗ್ರರು ಅಫ್ಗಾನಿಸ್ತಾನವನ್ನು ಕೈವಶ ಮಾಡಿಕೊಂಡ ಬೆನ್ನಲೇ ಪಾಕಿಸ್ತಾನದ ಕುರಿತು ಹೇಳಿಕೆಗಳನ್ನು ನೀಡಿದೆ. ತಾಲಿಬಾನ್‌ ಪಾಕಿಸ್ತಾನದ ಜೊತೆಗೆ ಸೇರಿಕೊಂಡು ಭಾರತದ ಮೇಲೆ ಆಕ್ರಮಣ ಮಾಡುವ ಶಂಕೆ ವ್ಯಕ್ತವಾಗಿತ್ತು. ಆದ್ರೀಗ ಎಲ್ಲಾ ಅನುಮಾನಗಳಿಗೆ ತಾಲಿಬಾನ್‌ ಉತ್ತರವನ್ನು ಕೊಟ್ಟಿದೆ.

ಪಾಕಿಸ್ತಾನದ ಟಿವಿ ಚಾನೆಲ್ ‘ಎಆರ್‌ವೈ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಜಾಹಿದ್, ‘ವಿವಾದಿತ ಪ್ರದೇಶದ ಬಗ್ಗೆ ಭಾರತವು ಸಕಾರಾತ್ಮ ಧೋರಣೆ ಹೊಂದಬೇಕಿದೆ’. ಕಾಶ್ಮೀರ ವಿಷಯವೂ ಸೇರಿದಂತೆ ತಮ್ಮ ನಡುವೆ ಬಾಕಿ ಇರುವ ಸಮಸ್ಯೆಗಳನ್ನು ಭಾರತ- ಪಾಕಿಸ್ತಾನ ಒಟ್ಟಾಗಿ ಪರಿಹರಿಸಿಕೊಳ್ಳಬೇಕು. ಅವರೆಡೂ ನೆರೆ ಹೊರೆಯ ದೇಶಗಳಾಗಿದ್ದು, ಅವರ ನಡುವಣ ವಿಚಾರಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

ಇದನ್ನೂ ಓದಿ: Burqa: ತಾಲಿಬಾನ್ ಎಫೆಕ್ಟ್ : ಆಹಾರದ ಜೊತೆ ಗಗನಕ್ಕೇರಿತು ಬುರ್ಖಾ ಬೆಲೆ

ಭಾರತ ಸೇರಿದಂತೆ ಎಲ್ಲ ದೇಶಗಳೊಂದಿಗೆ ತಾಲಿಬಾನ್ ಉತ್ತಮ ಬಾಂಧವ್ಯ ಬಯಸುತ್ತದೆ. ಅಫ್ಘಾನಿಸ್ತಾನದ ಜನರ ಹಿತಾಸಕ್ತಿಗೆ ಅನುಗುಣವಾಗಿ ಭಾರತವು ನೀತಿಯನ್ನು ರೂಪಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಯಾವುದೇ ದೇಶದ ವಿರುದ್ಧ ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಈಗಿನ ಅಫ್ಗಾನಿಸ್ತಾನ ಆಡಳಿತವು ಪಾಕಿಸ್ತಾನವನ್ನು ತನ್ನ ಎರಡನೇ ಮನೆ ಎಂದೇ ಭಾವಿಸಿದೆ. ಹೀಗಾಗಿ ಆ ದೇಶದ ವಿರುದ್ಧದ ಚಟುವಟಿಕೆಗಳಿಗೆ ಅಫ್ಗಾನಿಸ್ತಾನದ ನೆಲದಲ್ಲಿ ಅವಕಾಶ ನೀಡುವುದಿಲ್ಲ ಎಂದು ಮುಜಾಹಿದ್ ಸಂದರ್ಶನದಲ್ಲಿ ಹೇಳಿರುವುದಾಗಿ ‘ಐಎಎನ್‌ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಉಗ್ರ ಸಂಘಟನೆಗಳಿಂದ ಮೂರನೇ ಬಾರಿ ಬಾಂಬ್ ಬ್ಲಾಸ್ಟ್‌ ; 40 ಕ್ಕೂ ಅಧಿಕ ಮಂದಿ ಸಾವು

RELATED ARTICLES

Most Popular