ಸೋಮವಾರ, ಏಪ್ರಿಲ್ 28, 2025
HomeNationalAkhilesh mishra:ಬೀದಿಬದಿಯಲ್ಲಿ ಗೋಣಿಚೀಲದ ಮೇಲೆ ಕುಳಿತು ತರಕಾರಿ ಮಾರಿದ ಐಎಎಸ್ ಅಧಿಕಾರಿ: ಪೋಟೋ ವೈರಲ್

Akhilesh mishra:ಬೀದಿಬದಿಯಲ್ಲಿ ಗೋಣಿಚೀಲದ ಮೇಲೆ ಕುಳಿತು ತರಕಾರಿ ಮಾರಿದ ಐಎಎಸ್ ಅಧಿಕಾರಿ: ಪೋಟೋ ವೈರಲ್

- Advertisement -

ಲಖ್ನೋ:ಸರ್ಕಾರಿ ಉದ್ಯೋಗದಲ್ಲಿರುವ ಐಎಎಸ್ ಅಧಿಕಾರಿಯೊಬ್ಬರು ಬೀದಿ ಬದಿಯಲ್ಲಿ ಗೋಣಿಚೀಲದ ಮೇಲೆ ಕುಳಿತು ತರಕಾರಿ ಮಾರುವ ಮೂಲಕ ಸುದ್ದಿಯಾಗಿದ್ದಾರೆ. ಲಖ್ನೋದ ಅಖಿಲೇಶ್ ಮಿಶ್ರಾ ಇಂತಹದೊಂದು ಸಾಹಸಕ್ಕೆ ಮುಂದಾಗಿದ್ದು ಸೋಷಿಯಲ್ ಮೀಡಿಯಾದ ವೈರಲ್ ಆಗಿರೋ ಪೋಟೋ ಚರ್ಚೆಗೆ ಗ್ರಾಸವಾಗಿದೆ.

ಪ್ರಯಾಗ್ ರಾಜ್ ನಲ್ಲಿ ರಸ್ತೆಬದಿಯ ತರಕಾರಿ ಅಂಗಡಿಯಲ್ಲಿ ಕುಳಿತು ಅಖಿಲೇಶ್ ಮಿಶ್ರಾ ತರಕಾರಿ ವ್ಯಾಪಾರ ಮಾಡುತ್ತಿದ್ದು, ಗ್ರಾಹಕರು ತರಕಾರಿ ಖರೀದಿಸುತ್ತಿದ್ದಾರೆ. ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಖಿಲೇಶ್ ಮಿಶ್ರಾ ಪ್ರಸ್ತುತ ಉತ್ತರ ಪ್ರದೇಶದ ಸಾರಿಗೆ ಇಲಾಖೆಯ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಗೋಣಿಚೀಲದ ಮೇಲೆ ಕುಳಿತು ತರಕಾರಿ ಮಾರುವ ಮೂಲಕ  ಸರ್ಕಾರವನ್ನು ಅಣಕಿಸಿದ್ದಾರೆ. ಸರ್ಕಾರಕ್ಕೆ ಅಗೌರವ ತರುವ ಕೆಲಸ ಮಾಡಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಖಿಲೇಶ್ ಮಿಶ್ರಾ, ನಾನು ಕೆಲಸದ ಮೇಲೆ ಪ್ರಯಾಗರಾಜ್ ಗೆ ಭೇಟಿ ನೀಡಿದ್ದೆ. ಅಲ್ಲಿಂದ ಬರುವಾಗ ತರಕಾರಿ ಖರೀದಿಸಲು ಹೋಗಿದ್ದು, ಈ ವೇಳೆ ತರಕಾರಿ ಮಾರುತ್ತಿದ್ದ ವೃದ್ಧೆಗೆ ನಾನಾರೆಂಬುದು ಗೊತ್ತಿಲ್ಲದೇ, ಮೊಮ್ಮಗುವನ್ನು ಹುಡುಕಿಕೊಂಡು ಬರುತ್ತೇನೆ 10 ನಿಮಿಷ ಅಂಗಡಿನೋಡಿಕೊಳ್ಳಿ ಎಂದು ವಿನಂತಿಸಿದಳು. ಆ ಕಾರಣಕ್ಕೆ ನಾನು ಆ ಅಂಗಡಿಯಲ್ಲಿ ಕುಳಿತಿದ್ದೆ ಎಂದಿದ್ದಾರೆ.

RELATED ARTICLES

Most Popular