ಬೆಂಗಳೂರು : ವಿಶ್ವ ಕೊರೊನಾ ಎಂಬ ಸಾಂಕ್ರಾಮಿಕ ಹೆಮ್ಮಾರಿಯಿಂದ ತತ್ತರಿಸುತ್ತಿರುಸಿದ್ದಾರೆ. ಕೋಡಿ ಮಠದ ಸ್ವಾಮೀಜಿ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಜಲಪ್ರಳಯಸಂಭವಿಸಲಿದ್ದು, ಜನರು ತತ್ತರಿಸಲಿದ್ದಾರೆ ಎಂದು ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕುಂಭ ರಾಶಿಯಲ್ಲಿ ಗುರು ಪ್ರವೇಶಿಸಿದರೆ ಮಳೆ ಹೆಚ್ಚು ಎಂದು ನಂಬಲಾಗುತ್ತದೆ. ಈ ಬಾರಿಯೂ ಕುಂಭ ರಾಶಿಗೆ ಗುರು ಪ್ರವೇಶಿಸಿದ್ದು, ಮಳೆ ಜಾಸ್ತಿಯಾಗಿ ಕಾರ್ತಿಕ ಮಾಸದವರೆಗೂ ನೆರೆ, ಮತ್ತಿತರ ಅಪಘಡಗಳಿಂದ ಜನ ತತ್ತರಿಸಲಿದ್ದು, ಮುಂದಿನ 5 ವರ್ಷಗಳವರೆಗೂ ಕೊರೊನಾ ಸಂಪೂರ್ಣ ನಾಶವಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Horoscope : ದಿನಭವಿಷ್ಯ – ವೃಷಭರಾಶಿಯವರಿಗೆ ಉದ್ಯೋಗದ ಮುಂಭಡ್ತಿಗೆ ಅನಾರೋಗ್ಯ ಸಮಸ್ಯೆ ತೊಡಕಾಗಲಿದೆ
ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿ ಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಅಫ್ಗಾನಿಸ್ತಾನ ತಾಲಿಬಾನ್ ವಶವಾಗುತ್ತಿದೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ಅಡ್ಡಿಯಿಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಆಡಳಿತ ಮುಂದುವರೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: Yogi adityanath: ಮಥುರಾದಲ್ಲಿ ಮಾಂಸ ಮತ್ತು ಮದ್ಯ ಮಾರಾಟ ನಿಷೇಧ: ವ್ಯಾಪಾರಿಗಳಿಗೆ ಶಾಕ್ ನೀಡಿದ ಸಿಎಂ
( People are going to be flooded in 2 years: Kodimatha Swamiji )