ಸೋಮವಾರ, ಏಪ್ರಿಲ್ 28, 2025
HomeCrime`ಪಾನಿ ಪುರಿ' ವಿಚಾರಕ್ಕೆ ಪ್ರಾಣವನ್ನೇ ಕಳೆದುಕೊಂಡ ಮಹಿಳೆ !

`ಪಾನಿ ಪುರಿ’ ವಿಚಾರಕ್ಕೆ ಪ್ರಾಣವನ್ನೇ ಕಳೆದುಕೊಂಡ ಮಹಿಳೆ !

- Advertisement -

ಮುಂಬೈ : ಮಹಿಳೆಯರಿಗೆ ಪಾನಿಪುರಿ ಅಂದ್ರೆ ಪಂಚಪ್ರಾಣ. ಪಾನಿಪೂರಿ ಇಷ್ಟ ಇಲ್ಲಾ ಅನ್ನೋ ಕಾರಣಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದನ್ನು ಎಲ್ಲಾದ್ರೂ ನೋಡಿದ್ರಾ ? ನಿಮಗೆ ಅಚ್ಚರಿ ಎನಿಸಿದ್ರೂ ಇದು ನಿಜ. ಇಲ್ಲೊಬ್ಬಳು ಮಹಿಳೆ ಪಾನಿಪೂರಿ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಹಾರಾಷ್ಟ್ರದ ಪುಣೆಯ ನಿವಾಸಿಯಾಗಿರುವ ಪ್ರತೀಕ್ಷಾ ಸರ್ವಾಡೆ 2019 ರಲ್ಲಿ ಗಹಿನಿನಾಥ್‌ ಸರ್ವಾಡೆ ಎಂಬವರನ್ನು ಮದುವೆಯಾಗಿದ್ದರು. ಒಂದಿಲ್ಲೊಂದು ವಿಚಾರಕ್ಕೆ ಪತಿ, ಪತ್ನಿಯ ನಡುವೆ ಸದಾ ಜಗಳವಾಗುತ್ತಲೇ ಇತ್ತು. ಗಹಿನಿನಾಥ್‌ ಸರ್ವಾಡೆ ಕೆಲಸದಿಂದ ಬರುವಾಗ ಪತ್ನಿಗೆ ತಿಳಿಸದೇ ಪಾನಿಪೂರಿಯನ್ನು ತಂದಿದ್ದರು. ಅಡುಗೆ ಮಾಡಿಟ್ಟಿದ್ದ ಪತ್ನಿ ಪ್ರತೀಕ್ಷಾ ಇದೇ ಕಾರಣಕ್ಕೆ ಕೋಪ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Ksrtc: ಕೆಎಸ್ಆರ್ಟಿಸಿ ಬಸ್ ನಲ್ಲಿ ಕೋಳಿಗೂ ಟಿಕೇಟ್: ಹಣ ಪಾವತಿಸಿ ಪ್ರಯಾಣಿಸಿದ ಪೋಟೋ ವೈರಲ್

ಮರುದಿನ ಪತಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ. ಪ್ರತೀಕ್ಷಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ದಂಪತಿಗಳಿಗೆ 18 ತಿಂಗಳ ಮಗು ಇದೆ. ಇದೀಗ ಪ್ರತೀಕ್ಷಾಆತ್ಮಹತ್ಯೆಗೆ ಪತಿಯೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಮ ಸೇತುವಿನ ಬಗ್ಗೆ ನಿಮಗೆ ತಿಳಿಯದ ರಹಸ್ಯ ! ಸಂಶೋಧನೆಯಿಂದ ತಿಳಿದು ಬಂದಿದ್ದೇನು ?

(The woman who lost her life for 'Pani Puri')
RELATED ARTICLES

Most Popular