ನವದೆಹಲಿ : ಕೋವಿಡ್ 19 ಕಾರಣದಿಂದಾಗಿ ರದ್ದಾದ ವಿಮಾನಗಳಿಂದಾಗಿ ಪ್ರಯಾಣಿಕರಿಗೆ ಮರುಪಾವತಿ ಮಾಡಬೇಕಾದ ಮೊತ್ತದಲ್ಲಿ ಏರ್ ಇಂಡಿಯಾ ಇನ್ನೂ 250 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಕೊರೊನಾದಿಂದಾಗಿ ಆದಾಯ ಸಂಪೂರ್ಣ ನೆಲಕಚ್ಚಿದ್ದರೂ ಕೂಡ ಜುಲೈ ತಿಂಗಳಿನಿಂದ ಪ್ರಯಾಣಿಕರಿಗೆ ಟಿಕೆಟ್ ದರ ಮರುಪಾವತಿ ಪ್ರಕ್ರಿಯೆ ನಡೆಯಲಿದೆ ಎಂದು ಏರ್ ಇಂಡಿಯಾ ಹೇಳಿತ್ತು.
ಏರ್ ಇಂಡಿಯಾ ಭಾರತ ಹಾಗೂ ವಿದೇಶಗಳಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ಈಗಾಗಲೇ ಶುರು ಮಾಡಿದೆ. ಪ್ರಸ್ತುತ 130 ಕೋಟಿ ರೂಪಾಯಿ ಹಣ ಹಿಂದಿರುಗಿಸಲಾಗಿದ್ದು ಈ ಪ್ರಕ್ರಿಯೆ ಇನ್ನೂ ಮುಂದುವರಿಯಲಿದೆ ಎಂದು ಏರ್ ಇಂಡಿಯಾ ಏರ್ಲೈನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ: Ration Card: ಅಕ್ರಮ ಪಡಿತರದಾರರಿಗೆ ಬಿಗ್ ಶಾಕ್: ಸದ್ಯದಲ್ಲೇ ಬದಲಾಗಲಿದೆ ರೇಶನ್ ಕಾರ್ಡ್ ಮಾನದಂಡ
ಕಳೆದ ವರ್ಷದಲ್ಲಿ ರದ್ದಾದ ವಿಮಾನಗಳ ಮರುಪಾವತಿ ಯನ್ನು ಪೂರ್ಣಗೊಳಿಸಲಾಗಿದೆ ಎಂದು ಇಂಡಿಗೋ ಏರ್ಲೈನ್ಸ್ ಮಾಹಿತಿ ನೀಡಿದೆ. ಕೊರೊನಾದ ಆರಂಭ ದಲ್ಲಿ ಲಾಕ್ಡೌನ್ ಹಾಗೂ ಪ್ರಯಾಣ ನಿರ್ಬಂಧಗಳು ಏಕಾಏಕಿ ಜಾರಿ ಬಂದ ಹಿನ್ನೆಲೆಯಲ್ಲಿ ಅನೇಕ ವಿಮಾನ ಯಾನ ಸೇವೆ ರದ್ದಾಗಿದ್ದವು. ಇದರಿಂದಾಗಿ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಯೋಜನೆಯನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿ ಬಂದಿತ್ತು.
(Flight cancelled during Corona : Air India due to pay passengers 250 crore)