ಮಂಗಳೂರು : ಒಮ್ಮೆ ಡ್ರಗ್ ಲಿಂಕ್ ಪ್ರಕರಣದಿಂದ ಹೊರಬಂದ ಸ್ಯಾಂಡಲ್‍ವುಡ್‍ನ ಖ್ಯಾತ ಆ್ಯಂಕರ್ ಕಮ್ ನಟಿ ಅನುಶ್ರೀ ವಿರುದ್ದ ಆರೋಪ ಕೇಳಿಬಂದಿದ್ದು, ಇದೀಗ ಮಂಗಳೂರು ಪೊಲೀಸರು ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಅನುಶ್ರೀ ಹೆಸರನ್ನೂ ಕೂಡ ಸೇರಿಸಲಾಗಿದೆ.
ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ಅನುಶ್ರೀ ಮಾದಕ ದ್ರವ್ಯವನ್ನು ರೂಂಗೆ ತರುತ್ತಿದ್ದರು ಎಂದು ಅವರ ಸ್ನೇಹಿತ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Rajat Bedi: ಹಿಟ್ ಆಂಡ್ ರನ್ ಕೇಸ್: ಬಂಧನ ಭೀತಿಯಲ್ಲಿ ಮತ್ತೊಬ್ಬ ಬಾಲಿವುಡ್ ನಟ
ಅನುಶ್ರೀ ಮಾದಕ ದ್ರವ್ಯ ಸಾಗಾಟದೊಂದಿಗೆ ಸ್ನೇಹಿತರೊಂದಿಗೆ ಡ್ರಗ್ ಪಾರ್ಟಿ ಮತ್ತು ಪಾರ್ಟಿಗೆ ಡ್ರಗ್ಸ್ ತರುತ್ತಿದ್ದರು. ತರುಣ್, ನಾನು ಹಾಗೂ ಅನುಶ್ರೀ ಡ್ರಗ್ ಪಾರ್ಟಿ ಮಾಡುತ್ತಿದ್ದೆವು ಎಂದಿದ್ದಾರೆ. ಅಲ್ಲದೇ ಆಗ ಅನುಶ್ರೀ ನಮ್ಮ ರೂಂಗೆ ಎಕ್ಟಸಿ ಡ್ರಗ್ಸ್ ತರುತ್ತಿದ್ದರು ಎಂದು ಅಮನ್ ಶೆಟ್ಟಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: Trisha Krishnan:ಶೂಟಿಂಗ್ ವೇಳೆ ಎಡವಟ್ಟು: ಸೌತ್ ಬ್ಯೂಟಿ ತ್ರಿಶಾಕೃಷ್ಣನ್ ಗೆ ಬಂಧನ ಭೀತಿ
ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಆರೋಪ ಪಟ್ಟಿಯಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಿದ್ದಾರೆ. ಈ ಮೂಲಕ ಅನುಶ್ರೀ ಮತ್ತೆ ಡ್ರಗ್ ಲಿಂಕ್‌ನ ಶಾಕ್ ಎದುರಾಗಿದೆ.
(Anushree’s name on drugs case chargesheet ! Is there a link between anchor Anushree and the drug case?)