ಬುಧವಾರ, ಏಪ್ರಿಲ್ 30, 2025
HomeWorldಆಟ ಆಡಿದ್ರೆ ದೇಹಪ್ರದರ್ಶನ: ಅಪ್ಘಾನಿಸ್ತಾನ್ ದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

ಆಟ ಆಡಿದ್ರೆ ದೇಹಪ್ರದರ್ಶನ: ಅಪ್ಘಾನಿಸ್ತಾನ್ ದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

- Advertisement -

ಕಾಬೂಲ್: ಅಪ್ಘಾನಿಸ್ತಾನ್ ದಲ್ಲಿ ಸಂಪೂರ್ಣ ಷರಿಯಾ ಕಾನೂನು ಜಾರಿಗೊಳಿಸಿ‌ ಆದೇಶ ಹೊರಡಿಸಿರುವ ತಾಲಿಬಾನಿಗಳು ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದ್ದಾರೆ. ಮಾತ್ರವಲ್ಲ ಕ್ರೀಡೆಯಿಂದ ದೇಹಪ್ರದರ್ಶನವಾಗುತ್ತದೆ ಎಂದಿದ್ದಾರೆ.

ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಪ್ಘಾನಿಸ್ತಾನ್ ಎಂದು ಬದಲಾಯಿಸಿ ಮಧ್ಯಂತರ ಸರ್ಕಾರ ರಚಿಸಿರುವ ತಾಲಿಬಾನಿಗಳು ದೇಶದಾದ್ಯಂತ ಸಂಪೂರ್ಣ ಷರಿಯಾ ಕಾನೂನು ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ: “ಅಫ್ಘನ್‌ ಇಸ್ಲಾಮಿಕ್‌ ದೇಶ ” ಅಸ್ತಿತ್ವಕ್ಕೆ : ತಾಲಿಬಾನ್‌ ಹೊಸ ಸರಕಾರ ಘೋಷಣೆ

ಮಹಿಳೆಯರು ಆಟವಾಡುವ ವೇಳೆ ದೇಹಪ್ರದರ್ಶನವಾಗುತ್ತದೆ. ಸಂಪೂರ್ಣ ದೇಹ ಮುಚ್ಚಿ ಕೊಳ್ಳುವಂತೆ ಬಟ್ಟೆ ಧರಿಸಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಾಲಿಬಾನ್ ಸುಪ್ರೀಂ ಲೀಡರ್ ಮೌಲ್ವಿ ಹೈಬತುಲ್ಲಾ ಅಖುಂಡಜಾದಾ ಹೇಳಿದ್ದಾರೆ.

ಷರಿಯತ್ ಕಾನೂನಿನ ಪ್ರಕಾರ ಅಪ್ಘಾನಿಸ್ತಾನ ಜನರ ಜೀವನವನ್ನು ರೂಪಿಸುತ್ತೇವೆ. ಇದಕ್ಕಾಗಿ ಅಪ್ಘಾನಿಸ್ತಾನ ಜನರು ತಾಲಿಬಾನ್ ಸರ್ಕಾರವನ್ನು ಬೆಂಬಲಿಸಬೇಕೆಂದು ಹೈಬತುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಉಗ್ರರಿಂದ ಪೈಶಾಚಿಕ ಕೃತ್ಯ : ಕುಟುಂಬದವರ ಎದುರಲ್ಲೇ ಗರ್ಭಿಣಿ ಪೊಲೀಸ್ ಹತ್ಯೆ

ಇನ್ನು ತಾಲಿಬಾನಿಗಳ ಆಡಳಿತದಲ್ಲಿ ಪಿಎಚ್ಡಿ ಪದವಿಗಳಿಗೆ ಬೆಲೆ ಇಲ್ಲ ಎಂದು ತಾಲಿಬಾನ್ ಶಿಕ್ಷಣ ಸಚಿವರು ಘೋಷಿಸಿದ್ದು, ನೀವೆ ನೋಡಿ ಅಧಿಕಾರ ನಡೆಸುತ್ತಿರುವ ಮುಲ್ಲಾಗಳಿಗೆ, ತಾಲಿಬಾನಿಗಳಿಗೆ ಪಿಎಚ್ಡಿ ಕೋಡು ಇದ್ಯಾ? ಅವರಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣವೂ ಇಲ್ಲ. ಆದರೂ ಉತ್ತಮ ಆಡಳಿತ ನೀಡುತ್ತಿದ್ದಾರೆ. ಹೀಗಾಗಿ ತಾಲಿಬಾನಿಗಳಿಗಿಂತ ಪಿಎಚ್ ಡಿ ಪದವಿ ಶ್ರೇಷ್ಠವಲ್ಲ ಎಂದು ನೂತನ ಶಿಕ್ಷಣ ಮಂತ್ರಿ ಶೇಖ್ ಮೌಲ್ವಿ ನೂರುಲ್ಲಾ ಹೇಳಿದ್ದಾರೆ.

(Sports Bans on Women in Afghanistan)

RELATED ARTICLES

Most Popular