ಗೌರಿ-ಗಣೇಶ್ ಹಬ್ಬ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ. ಸೆಲೆಬ್ರೆಟಿಗಳು ಮಕ್ಕಳ ಜೊತೆ ಹಬ್ಬ ಆಚರಿಸುತ್ತಿದ್ದರೇ, ನಟ-ನಟಿಯರು ಗೌರಿ-ಗಣೇಶ್ ಅವತಾರದಲ್ಲಿ ಗಮನಸೆಳೆದಿದ್ದಾರೆ. ಈ ಪೈಕಿ ನಟಿ ದೀಪಿಕಾ ದಾಸ್ ಗುರಿಯಾಗಿ ಮನಗೆದ್ದಿದ್ದಾರೆ.
ಕೈಲಾಸದರಸಿ,ನೀಮಹಾಮಾಯೆ,ಆ ಶಿವನ ಅರ್ಧಾಂಗಿ ಎಂಬ ಹಾಡಿಗೆ ದೀಪಿಕಾ ದಾಸ್ ಗೌರಿಯಾಗಿ ಅಭಿನಯಿಸಿದ್ದು, ಸಖತ್ ಟ್ರೆಡಿಷನಲ್ ಲುಕ್ ನಲ್ಲಿ ಮಾದಕ ಸೌಂದರ್ಯ ತೆರೆದಿಟ್ಟಿದ್ದಾರೆ.
ಇದನ್ನೂ ಓದಿ: ಪರಮ ಸುಂದರಿಯಾದ್ರು ಅಗ್ನಿಸಾಕ್ಷಿ ಚೆಲುವೆ: ವೈಷ್ಣವಿ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ
ಹೂವು ಕೊಯ್ದು ಪೂಜೆಗೆ ಹೊರಡೋ ಗೌರಿ, ಅರಿಸಿನದಿಂದ ಗಣಪತಿ ತಯಾರಿಸಿ ಜೀವ ತುಂಬಿ ಕಾವಲಿಗೆ ನಿಲ್ಲಿಸೋ ಕತೆಯನ್ನು ದೀಪಿಕಾ ದಾಸ್ ಅಭಿನಯಿಸಿದ್ದಾರೆ.
ಇನ್ ಲೈಫ್ ಮೇಕ್ ಓವರ್ ಸ್ಟುಡಿಯೋಸ್
ದೀಪಿಕಾ ದಾಸ್ ರನ್ನು ಗೌರಿಯಾಗಿ ಶೂಟ್ ಮಾಡಿದ್ದು ಮೋಹಕ ಸಾಹಿತ್ಯ, ಸುಂದರವಾದ ಸಂಗೀತದೊಂದಿಗೆ ಹಾಡು ಗಮನಸೆಳೆಯುತ್ತಿದೆ.
ಇದನ್ನೂ ಓದಿ: ರಮ್ಯ ಫ್ಯಾನ್ಸ್ ಗೆ ಸಿಹಿಸುದ್ದಿ: ನೀನಾಸಂ ಸತೀಶ್ ಗೆ ಜೊತೆಯಾದ ಪದ್ಮಾವತಿ
ದೀಪಿಕಾ ದಾಸ್ ಗಣೇಶ್ ಹಬ್ಬದ ಸ್ಪೆಶಲ್ ಗೀತೆಯನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಒಂದು ಲಕ್ಷಕ್ಕೂ ಅಧಿಕ ಜನರು ಈ ಹಾಡಿಗೆ ಲೈಕ್ಸ್ ಒತ್ತಿದ್ದಾರೆ.
(GauriMultiTask of Nagini:Deepika Das became Goddess Gauri)