ಬುಧವಾರ, ಏಪ್ರಿಲ್ 30, 2025
Homekarnatakaಕೋವಿಡ್, ಡೆಲ್ಟಾ ನಡುವೆ ಆತಂಕ ಮೂಡಿಸಿದ ಡೆಂಗ್ಯೂ : ರಾಜ್ಯದಲ್ಲಿ 2,736 ಜನರಲ್ಲಿ ಸೋಂಕು...

ಕೋವಿಡ್, ಡೆಲ್ಟಾ ನಡುವೆ ಆತಂಕ ಮೂಡಿಸಿದ ಡೆಂಗ್ಯೂ : ರಾಜ್ಯದಲ್ಲಿ 2,736 ಜನರಲ್ಲಿ ಸೋಂಕು ಪತ್ತೆ

- Advertisement -

ಬೆಂಗಳೂರು : ರಾಜ್ಯದ ಜನತೆ ಕೊರೊನಾ ಮೂರನೇ ಅಲೆಯ ಭೀತಿಯಲ್ಲಿದ್ದಾರೆ. ಈ ನಡುವಲ್ಲೇ ಡೆಂಗ್ಯೂ ಜ್ವರ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ.

ಒಂದೆಡೆ ಕೋವಿಡ್, ಡೆಲ್ಟಾ, ಡೆಲ್ಟಾ ಪ್ಲಸ್ ಅಟ್ಟಹಾಸದ ನಡುವೆ ನಿಫಾ ಆತಂಕ ಕೂಡ ಆರಂಭವಾಗಿದೆ. ಈ ನಡುವೆ ಡೆಂಘೀ ಕೇಸ್ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ 893 ಡೆಂಘೀ ಪ್ರಕರಣಗಳು ದಾಖಲಾಗಿವೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿಯೇ ಅತೀ ಹೆಚ್ಚು ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ: ನಿಫಾ’ಕ್ಕೂ ಬರಲಿದೆ ‘ಕೋವಿಶೀಲ್ಡ್’ ಮಾದರಿ ಲಸಿಕೆ

ಬೆಂಗಳೂರಿನಲ್ಲಿ 446 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗದಲ್ಲಿ 202, ಉಡುಪಿಯಲ್ಲಿ 293, ಕಲಬುರ್ಗಿಯಲ್ಲಿ 280, ದಕ್ಷಿಣ ಕನ್ನಡ 178, ಕೊಪ್ಪಳ 150, ದಾವಣಗೆರೆ 120, ದಕ್ಷಿಣ ಕನ್ನಡ 178, ಕೊಪ್ಪಳ 150, ದಾವಣಗೆರೆ 120, ಬಳ್ಳಾರಿ 113, ಹಾವೇರಿಯಲ್ಲಿ 100 ಡೆಂಘೀ ಕೇಸ್ ಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ 2,736ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ನಿಫಾ ವೈರಸ್ ಲಕ್ಷಣಗಳು ಹೇಗಿರುತ್ತೆ ಗೊತ್ತಾ?

(Dengue infection detected in 2,736 people in the state)
RELATED ARTICLES

Most Popular