ಚಿಕ್ಕಬಳ್ಳಾಪುರ : ಲಾರಿ ಹಾಗೂ ಪ್ಯಾಸೆಂಜರ್ ಜೀಪ್ ನಡುವೆ ನಡೆದ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿ, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿಯಲ್ಲಿ ನಡೆದಿದೆ.
ಗೋಪಲ್ಲಿಯ ಮುನಿರತ್ಮಮ್ಮ(49 ವರ್ಷ), ರಾಯಲ್ಪಾಡುವಿನ ರಮೇಶ್ (49 ವರ್ಷ), ಕೂಸಂದ್ರದ ನಿಖಿಲ್(22ವರ್ಷ ), ಸೊಣ್ಣಶೆಟ್ಟಿಹಳ್ಳಿಯ ನಾರಾಯಣ್ವಾಮಿ (55 ವರ್ಷ), ವೆಂಕಟಲಕ್ಷಮ್ಮ(45ವರ್ಷ ) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಅಲ್ಲದೇ ಸೋಮಯಾಜಲಪಲ್ಲಿಯ ವೆಂಕಟಲಕ್ಷ್ಮಿ, ದಿಬ್ಬೂರಳ್ಳಿಯ ಯಶೋಧಮ್ಮ, ನಂಬೂರ್ಲಹಳ್ಳಿಯ ಸತ್ಯಪ್ಪ, ನಾಗದೇನಹಳ್ಳಿಯ ಮುನಿಸ್ವಾಮಿ, ರಾಯಲ್ಪಾಡುವಿನ ಮಂಜುನಾಥ್, ಕಿತ್ತಗನೂರಿನ ಅಂಬರೀಶ್ ಗಾಯಗೊಂಡಿದ್ದು, ಹಲವರ ಗುರುತು ಪತ್ತೆಯಾಗಿಲ್ಲ.
ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಪ್ಯಾಸೆಂಜರ್ ಜೀಪ್ ಗೆ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಜೀಪಿನಲ್ಲಿದ್ದ6 ಮಂದಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯ ಗೊಂಡಿರುವ 11 ಮಂದಿಯನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮೂವರಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೀಪ್ನಲ್ಲಿ ಇಬ್ಬರು ಮಕ್ಕಳು, 6 ಜನ ಮಹಿಳೆಯರು, 9 ಜನ ಪುರುಷರು ಸೇರಿದಂತೆ ಒಟ್ಟು 17 ಮಂದಿ ಪ್ರಯಾಣಿಸುತ್ತಿದ್ದರು. ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : 9 ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರವೆಸಗಿದ ಶಾಲಾ ಮುಖ್ಯೋಪಾಧ್ಯಾಯ
ಇದನ್ನೂ ಓದಿ : ಮಧ್ಯ ರಾತ್ರಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಚಿನ್ನಾಭರಣ ದೋಚಿದ ಪಾಪಿಗಳು
( Jeep and truck Accident 6 killed, 11 injured in Chikkaballapur near Srinivasapura )