ಮದುವೆಯಾದ್ಮೇಲೆ ಮಕ್ಕಳನ್ನು ಪಡೆಯುವುದು ಹಿಂದಿನಿಂದಲೂ ನಡೆದು ಬಂದ ಅಲಿಖಿತ ನಿಯಮ. ಆದರೆ ಮದುವೆಗಿಂತ ಮೊದಲು ಮಕ್ಕಳನ್ನು ಪಡೆಯುವುದು ನಾಚಿಕೆ ವಿಷ್ಯ, ಅಷ್ಟೇ ಯಾಕೆ ಅವಮಾನ ಎನ್ನಲಾಗ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರ ಆಲೋಚನೆ, ಜೀವನಶೈಲಿ ಬದಲಾಗಿದೆ. ಅಧ್ಯಯನವೊಂದರ ಪ್ರಕಾರ, ಮದುವೆಗೂ ಮುನ್ನ ಶಿಕ್ಷಿತ ಯುವತಿಯರು ಮಕ್ಕಳನ್ನು ಪಡೆಯುವ ಆಸೆ ಹೊಂದಿದ್ದಾರಂತೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞರು ಈ ಕುರಿತು ಅಧ್ಯಯನವೊಂದನ್ನು ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಶಿಕ್ಷಿತ ಮಹಿಳೆಯರಲ್ಲಿ ಐತಿಹಾಸಿಕ ಬದಲಾವಣೆ ಕಂಡಿದೆಯಂತೆ. 90ನೇ ಶತಮಾನದಲ್ಲಿ ಕಾಣದ ದೊಡ್ಡ ಬದಲಾವಣೆ 91ನೇ ಶತಮಾನದಲ್ಲಿ ಕಾಣ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪದವಿ ಪಡೆದ ಯುವತಿಯರು ಮೊದಲು ಮಕ್ಕಳನ್ನು ಪಡೆಯಲು ಹಾಗೂ ನಂತರ ಮದುವೆಯಾಗಲು ಬಯಸುತ್ತಿದ್ದಾರಂತೆ. ಅಂದ್ರೆ ಮದುವೆಗೂ ಮೊದಲೇ ಮೊದಲ ಮಗು ಪಡೆಯಲು ಅವರು ಬಯಸುತ್ತಿದ್ದಾರಂತೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಲ್ಲಿ ಶೇಕಡಾ 18 ರಿಂದ 27 ರಷ್ಟು ಮಹಿಳೆಯರು, ಮದುವೆಗೆ ಮೊದಲೇ ಮಕ್ಕಳನ್ನು ಪಡೆದಿದ್ದರು.
ಇದನ್ನೂ ಓದಿ: ಚರ್ಚ್‌ಗೆ ಭೇಟಿ ನೀಡಿದ ವಿಘ್ನವಿನಾಶಕ ಗಣಪತಿ ! ಸ್ಪೇನ್ ನಲ್ಲಿ ನಡೆಯಿತು ಅಪರೂಪದ ಘಟನೆ
ಪದವಿ ಪಡೆದು ಕೆಲಸ ಶುರು ಮಾಡಿದ ನಂತರ ಮೊದಲು ಮಕ್ಕಳು. ನಂತ್ರ ಪರಿವಾರಕ್ಕಾಗಿ ಮದುವೆ ಮಾಡಿಕೊಳ್ತಿದ್ದಾರೆಂದು ತಜ್ಞರು ಹೇಳಿದ್ದಾರೆ. ಪದವಿ ಪಡೆದ ಮಹಿಳೆಯರು, ಪದವಿ ಪಡೆಯದ ಮಹಿಳೆಯರಿಗಿಂತ ಹೆಚ್ಚು ಅವಿವಾಹಿತರಾಗಿದ್ದರು. 1996ರಲ್ಲಿ ಮದುವೆಯಾಗದೆ ಮಕ್ಕಳನ್ನು ಪಡೆದ ಮಹಿಳೆಯರ ಸಂಖ್ಯೆ ಶೇಕಡಾ 4ರಷ್ಟಿತ್ತು. 20 ವರ್ಷಗಳ ನಂತ್ರ ಈ ಸಂಖ್ಯೆ ಶೇಕಡಾ 24.5ರಷ್ಟಾಗಿದೆ. ಇದು ದೊಡ್ಡ ಪರಿವರ್ತನೆಯಾಗಿದೆ.
(Young women getting children before marriage! Shocking issue from study)