ಉತ್ತರ ಪ್ರದೇಶದ : ಹೆಂಡತಿ ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ಕಾರಣಕ್ಕೆ ಪತಿಯೋರ್ವ ಪತ್ನಿಯಿಂದ ವಿಚ್ಛೇದನ ಕೋರಿದ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದೇ ಕಾರಣಕ್ಕೆ ದಂಪತಿಗೆ ಆಗಾಗ್ಗೆ ಜಗಳವಾಗಿದ್ಯಂತೆ. ಪ್ರತಿದಿನ ಸ್ನಾನ ಮಾಡುವುದಾಗಿ ಒಪ್ಪಿಕೊಂಡ ಪತ್ನಿ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಕ್ಕೆ ಬೇಸರಗೊಂಡ ಪತಿರಾಯ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ತನ್ನ ದಾಂಪತ್ಯ ಬಾಂಧವ್ಯವನ್ನು ಉಳಿಸುವಂತೆ ಪತ್ನಿ ಆಲಿಘಡ ಮಹಿಳಾ ಸಮಿತಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಮತ್ತು ಸಂಬಂಧವನ್ನು ಉಳಿಸುವ ಸಲುವಾಗಿ ಸಮಿತಿಯು ದಂಪತಿ ಬಳಿ ಮಾತನಾಡುತ್ತಿದೆ. ದಾಂಪತ್ಯಕ್ಕೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಯೋಚಿಸಲು ದಂಪತಿಗೆ ಸಮಯ ಕೊಡಲಾಗಿದೆ.
ಇದನ್ನೂ ಓದಿ: ಮದುವೆಯಲ್ಲಿ ಬೋಳಿಸುತ್ತಾರೆ ವಧುವಿನ ಕೂದಲು ! ಇಲ್ಲಿನ ಜನರದ್ದು ವಿಚಿತ್ರ ಸಂಪ್ರದಾಯ
“ಮಹಿಳೆಯೊಬ್ಬರು ತಮ್ಮ ಪತಿ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಲಿಖಿತ ದೂರು ನೀಡಿದ್ದಾರೆ. ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ನೆಪವೊಡ್ಡಿ ವಿಚ್ಛೇದನ ಕೋರಿದ್ದಾರೆ. ನಾವು ದಂಪತಿಗಳಿಗೆ ಮತ್ತು ಅವರ ಪೋಷಕರಿಗೆ ಅವರ ಮದುವೆಯನ್ನು ಉಳಿಸಲು ಸಲಹೆ ನೀಡುತ್ತಿದ್ದೇವೆ” ಎಂದು ಮಹಿಳಾ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ. ತ್ರಿವಳಿ ತಲಾಖ್ ಅನ್ನು ಉಚ್ಚರಿಸಿರುವ ಅಮನ್, ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಒಂದು ವರ್ಷದ ಪುಟ್ಟ ಮಗುವಿದೆ.
ಇದನ್ನೂ ಓದಿ: ಸಾವಿನ ನಂತ್ರ ಹಲ್ಲು ಕಿತ್ತಿಟ್ಟುಕೊಳ್ತಾರೆ ಸಂಬಂಧಿಕರು ! ಇಲ್ಲಿನ ಜನರ ಆಚರಣೆಯೇ ವಿಚಿತ್ರ
(Wife who does not bathe every day: This is the husband who divorced)