ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರು ಬ್ಯಾಕಿಂಗ್ ಡೇಟಾ ಹ್ಯಾಕ್ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲೂ ಆಂಡ್ರಾಯ್ಡ್ ( Android ) ಮೊಬೈಲ್ ಬಳಕೆದಾರರು ಎಷ್ಟು ಎಚ್ಚರವಾಗಿದ್ರೂ ಕಡಿಮೆಯೇ. ಇದೀಗ ಡ್ರೈನಮಿಕ್ ಅನ್ನೋ ವೈರಸ್ ಹರಿಬಿಟ್ಟಿರೋ ಸೈಬರ್ ಕಳ್ಳರು ಗ್ರಾಹಕರ ಬ್ಯಾಂಕ್ ಡೇಟಾ ಕದಿಯಲು ಮುಂದಾಗಿದ್ದಾರೆ.
ನೀವೇನಾದ್ರೂ Android ಮೊಬೈಲ್ ಬಳಕೆ ಮಾಡುತ್ತಿದ್ರೆ ಎಚ್ಚರವಾಗಿರಲೇ ಬೇಕು. ಇಲ್ಲವಾದ್ರೆ ನಿಮ್ಮ ಮೊಬೈಲ್ ಪೋನ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗುತ್ತೆ. ಈ ಕುರಿತು ಕೇಂದ್ರ ಸರಕಾರ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಕೇಂದ್ರದ ಸೈಬರ್ ಭದ್ರತಾ ಪಡೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದು, ಡ್ರೈನಮಿಕ್ ವೈರಸ್ ಬಗ್ಗೆ ಎಚ್ಚರವಾಗಿರುವಂತೆಯೂ ಸೂಚನೆಯನ್ನು ನೀಡಿದೆ.
ಪ್ರಮುಖವಾಗಿ ಮೊಬೈಲ್ಗಳಿಗೆ ಆದಾಯ ತೆರಿಗೆ ಪಾವತಿಯ ಹಣವನ್ನು ಮರುಪಾವತಿ ಮಾಡುವ ನೆಪದಲ್ಲಿ ಡ್ರೈನಮಿಕ್ ಮೆಸೇಜ್ ಮೂಲಕ ಹರಿಬಿಡಲಾಗುತ್ತಿದೆ. ದೇಶದ ಪ್ರಮುಖ 27 ಬ್ಯಾಂಕುಗಳ ಗ್ರಾಹಕರ ಖಾತೆಗೆ ಕನ್ನ ಹಾಕುವ ಸಾಧ್ಯತೆಯಿದೆ. ಹೀಗಾಗಿಯೇ ಮೊಬೈಲ್ ಪೋನ್ಗಳಲ್ಲಿ ಸಂಶಯಯುತ ಮಸೇಜ್ ಓಪನ್ ಮಾಡದಂತೆ ತಿಳಿಸಿದೆ.
ಡ್ರೈನಿಕ್ Android ಫೋನ್ ಅನ್ನು ಟಾರ್ಗೇಟ್ ಮಾಡಿ ಹ್ಯಾಕರ್ ಗಳು ಸೃಷ್ಟಿಸಿರುವ ವೈರಸ್ ಆಗಿದ್ದು, ಮಾಲ್ ವೇರ್ ತಂತ್ರಾಂಶದ ಮೂಲಕ ಹ್ಯಾಕರ್ ಗಳು ಖಾತೆಗಳಿಂದ ಹಣ ಕದಿಯುವ ಸಾಧ್ಯತೆಗಳಿದೆಯಂತೆ. ಹೀಗಾಗಿ ಫೋನ್ ಬಳಕೆದಾರರು ಎಚ್ಚರಿಕೆಯಿಂದ ಇರುವಂತೆ CERTN ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : Google Search : ಗೂಗಲ್ ಸರ್ಚ್ ಹಿಸ್ಟರಿಯನ್ನು ರಕ್ಷಣೆ ಮಾಡುವುದು ಹೇಗೆ ?
ಇದನ್ನೂ ಓದಿ : ಗೂಗಲ್ ಪರಿಚಯಿಸಲಿದೆ ಫೋಲ್ಡಬಲ್ ಫೋನ್ : ವಿಶೇಷತೆ, ಬೆಲೆ ಎಷ್ಟು ಗೊತ್ತಾ ?
( Mobile user alert Your bank data has been stolen Dynamic virus )