ಬುಧವಾರ, ಏಪ್ರಿಲ್ 30, 2025
HomeCorona UpdatesSerum Corona Vaccine : ಮಕ್ಕಳ ಮೇಲೆ ಲಸಿಕೆ ಪ್ರಯೋಗ : ಸೀರಮ್‌ ಸಂಸ್ಥೆಗೆ ಸರಕಾರದ...

Serum Corona Vaccine : ಮಕ್ಕಳ ಮೇಲೆ ಲಸಿಕೆ ಪ್ರಯೋಗ : ಸೀರಮ್‌ ಸಂಸ್ಥೆಗೆ ಸರಕಾರದ ಅನುಮತಿ

- Advertisement -

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಲಸಿಕೆ ಅಭಿಯಾನ ನಡೆಯುತ್ತಿದೆ. ಮಕ್ಕಳನ್ನು ಹೊರತು ಪಡಿಸಿ ಉಳಿದವರಿಗೆ ಲಸಿಕೆ ನೀಡಲಾಗುತ್ತಿದೆ. ಆದ್ರೀಗ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದ್ದು, ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಸೀರಂ ಸಂಸ್ಥೆಗೆ ಅನುಮತಿ ನೀಡಿದೆ.

ದೇಶದಲ್ಲಿರುವ ಒಟ್ಟು ೧೪೦ ಕೋಟಿ ಜನರ ಪೈಕಿ ಈಗಾಗಲೇ 87 ಕೋಟಿಗೂ ಅಧಿಕ ಜನರಿಗೆ ಲಸಿಕೆಯನ್ನು ನೀಡಲಾಗಿದೆ. ಆದರೆ ೧ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ನೀಡಿಲ್ಲ. ಇದೀಗ 7 ರಿಂದ 11 ವರ್ಷದೊಳಗಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿರುವ ಕುರಿತು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿಯು ತಿಳಿಸಿದೆ.

ಇದನ್ನೂ ಓದಿ: Covid -19 Updates : ಭಾರತದಲ್ಲಿಂದು 26,041 ಹೊಸ ಕೋವಿಡ್‌ ಪ್ರಕರಣ, 276 ಮಂದಿ ಸಾವು

ಕೊರೊನಾ ಸೋಂಕಿನ ವಿರುದ್ದ ಹೊರಾಡಲು ಮಕ್ಕಳನ್ನು ಬಿಟ್ಟು ಉಳಿದವರಿಗೆಲ್ಲಾ ಕೊರೊನಾ ಲಸಿಕೆ ಲಭ್ಯವಿದೆ. ಆದರೆ ಮಕ್ಕಳಿಗೆ ಮಾತ್ರ ಸರಿಯಾದ ಲಸಿಕೆ ದೊರೆಯುತ್ತಿಲ್ಲ. ಆದ್ರೀಗ ಕೊರೊನಾ ವೈರಸ್ʼನಿಂದ ಮಕ್ಕಳನ್ನ ರಕ್ಷಿಸಲು ಸಿದ್ದತೆ ನಡೆಸುತ್ತಿರುವ ಕೇಂದ್ರ ಸರಕಾರ ಮೊದಲ ಹೆಜ್ಜೆಯನ್ನಿರಿಸಿದೆ. ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್‌ಗೆ ಲಸಿಕೆಯ ಪ್ರಯೋಗಕ್ಕಾಗಿ 7-11 ವರ್ಷ ವಯಸ್ಸಿನ ಮಕ್ಕಳನ್ನ ಬಳಸಿಕೊಳ್ಳಲು ಭಾರತದ ಔಷಧ ನಿಯಂತ್ರಕ ಮಂಗಳವಾರ ಅನುಮತಿ ನೀಡಿದೆ.

ಸೀರಮ್ ಇನ್ಸ್ಟಿಟ್ಯೂಟ್ ಈಗಾಗಲೇ ತನ್ನ ಕೋವಿಡ್-19 ಲಸಿಕೆಯ ಪ್ರಯೋಗವನ್ನು ನಡೆಸುತ್ತಿದ್ದು, ಈಗಾಗಲೇ ಅಮೇರಿಕಾ ಉತ್ಪಾದನೆಯ ನೊವಾಕ್ಸ್‌ ಲಸಿಕೆಯನ್ನು12-17 ವರ್ಷದ ಮಕ್ಕಳಿಗೆ ನೀಡಲಾಗುತ್ತಿದೆ. ಇದುವರೆಗೆ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝೈಡಸ್ ಕ್ಯಾಡಿಲಾ ಅವರ ಡಿಎನ್ ಎ ಕೋವಿಡ್-19 ಲಸಿಕೆಯನ್ನು ಮಾತ್ರವೇ ಬಳಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಇನ್ಮುಂದೆ ಮನೆಯಲ್ಲಿಯೇ ಪಡೆಯಬಹುದು ಕೋವಿಡ್ ಲಸಿಕೆ : ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್ !

ಇದೀಗ ಕೇಂದ್ರ ಸರಕಾರ ಸೀರಮ್‌ ಸಂಸ್ಥೆಗೆ ಲಸಿಕೆ ಪ್ರಯೋಗಕ್ಕೆ ಅನುಮತಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲಿಯೇ ಮಕ್ಕಳಿಗೆ ಲಸಿಕೆ ನೀಡುವ ಸಾಧ್ಯತೆಯಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಲಸಿಕೆ ನೀಡಿದ ದೇಶಗಳ ಪೈಕಿ ಭಾರತ ಅಗ್ರಸ್ಥಾನದಲ್ಲಿದೆ. ದೇಶದಲ್ಲಿ ನಿತ್ಯವೂ ಒಂದು ಕೋಟಿಗೂ ಅಧಿಕ ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು, ಇನ್ಮುಂದೆ ಮಕ್ಕಳಿಗೆ ಲಸಿಕೆ ನೀಡುವ ಕಾಲ ದೂರವಿಲ್ಲ.

(Vaccine trial on children: government permission for serum)

RELATED ARTICLES

Most Popular