ದೆಹಲಿ : ಕೇಂದ್ರ ಸರಕಾರವು ಮಹತ್ವದ ಯೋಜನೆ ಒಂದನ್ನು ಜಾರಿಗೆ ತರಲು ಮುಂದಾಗಿದೆ. ಇದರಿಂದಾಗಿ 59 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ರಫ್ತು ಸಾಲ ಖಾತರಿ ನಿಗಮ(ECGC)ದಲ್ಲಿ 4,400 ಕೋಟಿ ರೂ.ಗಳ ಬಂಡವಾಳ ಒಳಹರಿವಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸಂಪುಟ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಸರ್ಕಾರವು ಮುಂದಿನ 5 ವರ್ಷಗಳಲ್ಲಿ 4,400 ಕೋಟಿ ರೂಪಾಯಿಗಳನ್ನು ಇಸಿಜಿಸಿಯಲ್ಲಿ ಹೂಡಿಕೆ ಮಾಡಲಿದೆ. ಈ ಯೋಜನೆಯ ಮೂಲಕ ರಫ್ತುದಾರರಿಗೆ ಮಾತ್ರವಲ್ಲದೆ ಬ್ಯಾಂಕುಗಳಿಗೂ ಸಹಾಯ ಮಾಡಲಾಗುತ್ತದೆ ಎಂದಿದ್ದಾರೆ.
ಔಪಚಾರಿಕ ವಲಯದಲ್ಲಿ 2.6 ಲಕ್ಷ ಉದ್ಯೋಗಗಳು ಸೇರಿದಂತೆ 59 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಅಲ್ಲದೇ ಈ ಯೋಜನೆಗಾಗಿ ಸುಮಾರು 500 ಕೋಟಿ ರೂ.ಗಳನ್ನು ತಕ್ಷಣೆವೇ ಹೂಡಿಕೆ ಮಾಡಲಾಗುತ್ತದೆ. ಇಸಿಜಿಸಿಯ ಪಟ್ಟಿ ಮುಂದಿನ ವರ್ಷ ನಡೆಯುವ ಸಾಧ್ಯತೆಯಿದೆ ಎಂದಿದ್ದಾರೆ.
(Cabinet approves Investment in ECGC)