ಬುಧವಾರ, ಏಪ್ರಿಲ್ 30, 2025
HomeNationalAryan Khan : ಕ್ರೂಸ್‌ನಲ್ಲಿ ಡ್ರಗ್ಸ್‌ ಪಾರ್ಟಿ : ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌...

Aryan Khan : ಕ್ರೂಸ್‌ನಲ್ಲಿ ಡ್ರಗ್ಸ್‌ ಪಾರ್ಟಿ : ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಇಂದು ಜಾಮೀನಿಗೆ ಅರ್ಜಿ ಸಲ್ಲಿಕೆ

- Advertisement -

ಮುಂಬೈ : ಕಾರ್ಡಿಯಾ ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರನನ್ನುಆರ್ಯನ್‌ ಖಾನ್‌ನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನ್ಯಾಯಾಲಯ ಒಂದು ದಿನಗಳ ಕಾಲ ಎನ್‌ಸಿಬಿ ಕಸ್ಟಡಿಗೆ ನೀಡಿತ್ತು. ಇಂದು ಆರ್ಯನ್‌ ಖಾನ್‌ ಪರ ವಕೀಲರು ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಶಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ ಮಾಡುತ್ತಿರುವ ವೇಳೆಯಲ್ಲಿಯೇ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ( NCB ) ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆಯಲ್ಲಿ ಖ್ಯಾತ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಇನ್ನೊಬ್ಬ ಆರೋಪಿ ಮುನ್ಮುನ್ ಧಮೇಚಾ ಅವರನ್ನು ಡ್ರಗ್ಸ್ ಪ್ರಕರಣದಲ್ಲ ಭಾಗಿಯಾದ ಆರೋಪದಡಿಯಲ್ಲಿ ಬಂಧಿಸಿದ್ದರು.

ಭಾನುವಾರ ಎನ್‌ಸಿಬಿ ಅಧಿಕಾರಿಗಳು ಮುಂಬೈ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ವೇಳೆಯಲ್ಲಿ ನ್ಯಾಯಾಲಯ ಒಂದು ದಿನಗಳ ಕಾಲ ಎನ್‌ಸಿಬಿ ಕಸ್ಟಡಿಗೆ ಒಪ್ಪಿಸಿತ್ತು. ಆದರೆ ಮತ್ತೆ ಎನ್‌ಸಿಬಿ ವಶಕ್ಕೆ ಪಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿಂದು ಜಾಮೀನಿಗೆ ಅರ್ಜಿ ಸಲ್ಲಿಸಲು ಆರ್ಯನ್‌ ಪರ ವಕೀಲರು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ ಆರೋಪ : ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಬಂಧಿಸಿದ ಎನ್‌ಸಿಬಿ

ಇನ್ನೊಂದೆಡೆಯಲ್ಲಿ ಆರ್ಯನ್‌ ಖಾನ್‌ ಸೇರಿದಂತೆ ಮೂವರು ಆರೋಪಿಗಳನ್ನು ಇಂದು ಮತ್ತೆ ಎನ್‌ಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಅಲ್ಲದೇ ನೂಪುರ್ ಸತಿಜಾ, ಇಶ್ಮೀತ್ ಸಿಂಗ್ ಚಡ್ಡಾ, ಮೊಹಕ್ ಜೈಸ್ವಾಲ್, ಗೋಮಿತ್ ಚೋಪ್ರಾ ಮತ್ತು ವಿಕ್ರಾಂತ್ ಚೋಕರ್ ಅವರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಸಮುದ್ರ ಮಧ್ಯೆ ಕ್ರೂಸ್‌ನಲ್ಲಿ ರೇವ್ ಪಾರ್ಟಿ : ಸ್ಟಾರ್‌ ನಟ ಪುತ್ರ, 10 ಮಂದಿ ಬಂಧನ

(Big relief for Aryna Khan, NCB won’t seek further Custody, Aryan lawyers file for bail )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular