ಬೆಂಗಳೂರು : ಜನಸಾಮಾನ್ಯರು ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಬೆಲೆಗಳು ಮತ್ತೆ ಮತ್ತೇ ಗಗನದತ್ತ ಸಾಗುತ್ತಿರುವುದು ಬಡವರ ಪಾಲಿಗೆ ಚಾಟಿ ಏಟು ಕೊಡುತ್ತಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆಯಾಗಿದೆ.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆಯೇ ವಿವಿಧ ಬಗೆಯ ಅಡುಗೆ ಎಣ್ಣೆ ದರಗಳಲ್ಲಿ ಭಾರೀ ಏರಿಕೆಯಾಗಿದ್ದು, 15-20 ರೂ. ಹೆಚ್ಚಾಗಿದೆ. 1 ಲೀಟರ್ ಸನ್ ಫ್ಯೂರ್ 140 ರೂ. ನಿಂದ 155 ರೂ. ಗೆ ಏರಿಕೆಯಾಗಿದೆ.
ಗೋಲ್ಡ್ ವಿನ್ನರ್ 150 ರೂ. ನಿಂದ 160 ರೂ.ಗೆ ಏರಿಕೆಯಾಗಿದೆ. ಸಪೋಲಾ 180 ರೂ.ನಿಂದ 200 ರೂ. ಫ್ರೀಡಂ 150 ರೂ. ನಿಂದ 150 ರೂ.ಗೆ ಏರಿಕೆಯಾಗಿದೆ. ಇದೇ ರೀತಿ ಬೆಲೆಗಳು ಏರಿಕೆ ಯಾದರೆ ಸಾಮಾನ್ಯಜನರ ಪರಿಸ್ಥಿತಿ ತೀರಾ ಹದಗೆಡುವುದರಲ್ಲಿ ಅನುಮಾನವೇ ಇಲ್ಲಾ.
ಇದನ್ನೂ ಓದಿ: Cooking Oil : ಇಳಿಕೆಯಾಗಲಿದೆ ಅಡುಗೆ ಎಣ್ಣೆಯ ಬೆಲೆ : ಕೇಂದ್ರ ಮಾಡಿದೆ ಮಾಸ್ಟರ್ ಫ್ಲ್ಯಾನ್
(Another shock for the masses: the huge rise in cooking oil rates)