ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ : ನಷ್ಟವನ್ನು ಲಾಭವಾಗಿ ಪರಿವರ್ತಿಸಲು ಪ್ರಯತ್ನಿಸಿ

Horoscope : ದಿನಭವಿಷ್ಯ : ನಷ್ಟವನ್ನು ಲಾಭವಾಗಿ ಪರಿವರ್ತಿಸಲು ಪ್ರಯತ್ನಿಸಿ

- Advertisement -

ಮೇಷರಾಶಿ
ನಿಮ್ಮ ಭಾವನೆಯನ್ನು ಹಿಡಿದಿಟ್ಟುಕೊಳ್ಳಬೇಡಿ, ವಿಶ್ರಾಂತಿಯನ್ನು ಪಡೆಯಲು ನೀವು ಇಷ್ಟಪಡುವ ಕೆಲಸಗಳನ್ನು ಮಾಡಿ, ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನಕ್ಕೆ ಅವಕಾಶ, ಆರ್ಥಿಕ ಬಿಕ್ಕಟ್ಟು ನಿಮ್ಮನ್ನು ಅಸಮಧಾನಗೊಳಿಸಲಿದೆ, ಪ್ರೀತಿಸುವವರಿಂದ ಉದಾರ ಕೊಡುಗೆ ಪಡೆಯಲಿದ್ದೀರಿ, ಜೀವನವನ್ನು ಸುಂದರಗೊಳಿಸುವ ಯೋಜನೆಯನ್ನು ರೂಪಿಸುವಿರಿ. ಹೊಸ ಉದ್ಯಮಕ್ಕೆ ಸಹಿ ಮಾಡಲು ಉತ್ತಮವಾದ ದಿನ.

ವೃಷಭರಾಶಿ
ಉತ್ತಮ ಆರೋಗ್ಯಕ್ಕಾಗಿ ಯೋಗ, ಧ್ಯಾನವನ್ನು ಮಾಡಿ, ಹಣಕಾಸಿನ ಲಾಭವನ್ನು ತರುವ ಹೊಸ ಯೋಜನೆಗಳು ಹೊಳೆಯಲಿದೆ. ಪ್ರಮುಖ ಜನರ ಜೊತೆಗೆ ಸಂವಹನ ನಡೆಸುವಾಗ ಎಚ್ಚರಿಕೆವಹಿಸಿ, ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ, ಹಿರಿಯರಿಂದ ಅಮೂಲ್ಯವಾದ ಸಲಹೆಯನ್ನು ಪಡೆದುಕೊಳ್ಳಿ, ನಿಮ್ಮ ಅಗತ್ಯತೆಯನ್ನು ಪೂರೈಸಿಕೊಳ್ಳಲು ಕಷ್ಟಕರವಾದ ಪರಿಸ್ಥಿತಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಮಿಥುನರಾಶಿ
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ, ನಿಮ್ಮ ಶಕ್ತಿಯನ್ನು ಹಾಳುಮಾಡಿಕೊಳ್ಳಬೇಡಿ, ಹಣದ ಮಹತ್ವವನ್ನು ಅರಿತುಕೊಳ್ಳಿ, ಉಳಿತಾಯ ಆರಂಭಿಸುವುದರಿಂದ ಭವಿಷ್ಯದಲ್ಲಿ ಲಾಭ ಸಿಗಲಿದೆ, ಸಂಬಂಧಿಕರ ಭೇಟಿಯಿಂದ ಸಂತಸ, ಧಾರ್ಮಿಕ ಕ್ಷೇತ್ರದಲ್ಲಿ ಪರಿಚಿತರಿಂದ ಲಾಭ, ಮನೆಯ ಕೆಲಸವನ್ನು ಮಾಡಿ ಮುಗಿಸಲು ಯತ್ನಿಸಿ, ಸಹೋದ್ಯೋಗಿಗಳ ಸಹಕಾರದಿಂದ ವ್ಯವಹಾರದಲ್ಲಿ ಅಭಿವೃದ್ದಿ.

ಕರ್ಕಾಟಕರಾಶಿ
ಮಾನಸಿಕ ಭಯ ನಿಮ್ಮನ್ನು ಕೆರಳಿಸಲಿದೆ, ಧನಾತ್ಮಕ ಚಿಂತನೆ ಲಾಭವನ್ನು ತಂದುಕೊಡಲಿದೆ, ಹಣಕಾಸಿನ ಸುಧಾರಣೆಯಿಂದ ಅಗತ್ಯ ವಸ್ತುಗಳ ಖರೀದಿ, ಸಾಮಾಜಿಕ ಜೀವನವನ್ನು ನಿರ್ಲಕ್ಷಿಸಬೇಡಿ, ಬಿಡುವಿನ ವೇಳಾಪಟ್ಟಿಯಲ್ಲಿ ವಿಶ್ರಾಂತಿಯನ್ನು ಪಡೆಯಿರಿ, ಗುಪ್ತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ, ಎಲ್ಲಾ ವಿಚಾರಗಳನ್ನು ಇತರರ ಜೊತೆಗೆ ಹಂಚಿಕೊಳ್ಳಬೇಡಿ, ಸಂಗಾತಿಯೊಂದಿಗೆ ಸುಂದರ ಕ್ಷಣವನ್ನು ಕಳೆಯುವಿರಿ.

ಸಿಂಹರಾಶಿ
ನರಮಂಡಲದ ಕಾರ್ಯನಿರ್ವಹಣೆಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಿ. ಹೂಡುವಿಕೆ ನಿಮಗೆ ಲಾಭವನ್ನು ತಂದುಕೊಡಲಿದೆ, ಪ್ರೀತಿಸುವ ಹಾಗೂ ಕಾಳಜಿವಹಿಸುವ ಜನರೊಂದಿಗೆ ಸಂತಸವಾಗಿರಿ, ನಿಮ್ಮ ಅನುಪಸ್ಥಿತಿ ಮನೆಯಲ್ಲಿ ಎದ್ದು ಕಾಣಲಿದೆ, ನಿಮ್ಮ ಸಾಮರ್ಥ್ಯದಿಂದಾಗಿ ಕೆಲವೊಂದು ಅನಿರೀಕ್ಷಿತ ಪ್ರತಿಫಲಗಳು ದೊರೆಯಲಿದೆ, ಬಿಡುವಿನ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ, ಇಷ್ಟ ಮಿತ್ರರ ಜೊತೆಗೆ ದೂರ ಪ್ರಯಾಣ ಸಾಧ್ಯತೆ.

ಕನ್ಯಾರಾಶಿ
ದುಡುಕಿನ ವರ್ತನೆ ಸ್ನೇಹಿತರಿಗೆ ಸಮಸ್ಯೆ ತರಲಿದೆ, ಸಂಬಂಧಿಕರು ಹಣವನ್ನು ಎರವಲು ಪಡೆಯುವ ಸಾಧ್ಯತೆ, ನೀವು ದೊಡ್ಡ ಮೊತ್ತದ ಹಣವನ್ನು ನೀಡಬೇಕಾಗಬಹುದು, ಪ್ರೀತಿ ಪಾತ್ರರ ಅಸಮಾಧಾನವನ್ನು ತಿಳಿಗೊಳಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ದೊರೆಯಲಿದೆ, ಕಠಿಣ ಹೆಚ್ಚು ಲಾಭವನ್ನು ತಂದುಕೊಡಲಿದೆ, ಇತರರನ್ನು ಸರಿಯಾಗಿ ಅರ್ಥೈಯಿಸಿಕೊಳ್ಳಿ. ಬಿಡುವಿನ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.

ಇದನ್ನೂ ಓದಿ : ಇಲ್ಲಿ ಪ್ರತಿ ರಾತ್ರಿ ನಡೆಯುತ್ತೆ ಭಗವಂತನ ರಾಸಲೀಲೆ – ನೋಡೋಕೆ ಹೋದವರಿಗೆ ಏನಾಗುತ್ತೆ ?

ತುಲಾರಾಶಿ
ಉದಾರ ಮನೋಭಾವದಿಂದ ವಿಶ್ವಾಸ ದ್ರೋಹ, ಖಿನ್ನತೆ, ನಂಬಿಕೆಯ ಕೊರೆತೆ ಅನುಭವಿಸುವಿರಿ, ಅಹಂಕಾರ, ಅಸೂಯೆಯನ್ನು ದೂರ ಮಾಡಿಕೊಳ್ಳಿ, ಹಣಕಾಸಿನ ಲಾಭ ತರಲಿದೆ, ಮನೆಯವರ ಜೊತೆಯಲ್ಲಿ ಪ್ರವಾಸಕ್ಕೆ ತೆರಳುವ ಸಾಧ್ಯತೆ, ಉದ್ಯಮವನ್ನು ವಿಸ್ತರಿಸುವ ಯೋಜನೆಗೆ ಕೈ ಗೂಡಲಿದೆ, ವೈವಾಹಿಕ ಜೀವನವು ನಿಮಗೆ ಶುಭ ಫಲವನ್ನು ನೀಡಿದೆ. ಹೊಂದಾಣಿಕೆಯಿಂದ ಅಧಿಕ ಲಾಭ ದೊರೆಯಲಿದೆ.

ವೃಶ್ಚಿಕರಾಶಿ
ಕೆಲವು ಸಂಬಂಧಿಕರು ನಿಮ್ಮ ಬಗ್ಗೆ ಅಸೂಯೆ ಹೊಂದಿರುತ್ತಾರೆ, ಯಾವುದೇ ಕಾರಣಕ್ಕೂ ಕೋಪ ಮಾಡಬೇಡಿ, ಮಕ್ಕಳಿಂದಾಗಿ ನೀವು ಅಧಿಕ ಹಣಕಾಸಿನ ಲಾಭವನ್ನು ಪಡೆಯಲಿದ್ದೀರಿ, ಪಾಲುದಾರಿಕೆ ವ್ಯವಹಾರ ನಿಮಗೆ ಅದೃಷ್ಟವನ್ನು ತರಲಿದೆ, ಸಂಗಾತಿಯ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ, ಅನಾರೋಗ್ಯ ಸಮಸ್ಯೆ ನಿಮಗೆ ಆಘಾತವನ್ನು ಒಡ್ಡಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳ ಕುರಿತು ಚಿಂತನೆ.

ಧನಸುರಾಶಿ
ಹತಾಶೆಯ ಭಾವನೆ ಆರೋಗ್ಯವನ್ನು ಹಾಳು ಮಾಡಲಿದೆ, ಹಿಂದಿನ ಘಟನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಲು ಯತ್ನಿಸಿ, ನಿಮ್ಮ ನಷ್ಟವನ್ನು ಲಾಭವಾಗಿ ಪರಿವರ್ತಿಸಲು ಪ್ರಯತ್ನಿಸಿ, ಮನೆಯ ಕುಟುಂಬದ ಸದಸ್ಯರ ಹೊಸ ಯೋಜನೆಗಳು ನಿಮಗೆ ಲಾಭವನ್ನು ತಂದುಕೊಡಲಿದೆ, ಅವಿವಾಹಿತರಿಗೆ ವಿವಾಹ ಭಾಗ್ಯ.

ಇದನ್ನೂ ಓದಿ : ಸಾನ್ವರ್ ನಲ್ಲಿದ್ದಾನೆ ಉಲ್ಟಾ ಹನುಮಾನ್ : ಹನುಮನೇಕೆ ಇಲ್ಲಿ ತಲೆ ಕೆಳಗಾದ ಗೊತ್ತಾ?

ಮಕರರಾಶಿ
ಕೆಲವೊಂದು ಘಟನೆಗಳು ಮನಸನ್ನು ವಿಚಲಿತಗೊಳಿಸಲಿದೆ, ದೈಹಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಯೋಗ, ಧ್ಯಾನ ಅಗತ್ಯ. ಹಣಕಾಸಿನ ಸುಧಾರಣೆಯಿಂದ ಅಗತ್ಯ ವಸ್ತುಗಳ ಖರೀದಿ ಮಾಡುವಿರಿ, ಗೌಪ್ಯ ಮಾಹಿತಿಯನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವ ಮುನ್ನ ಎಚ್ಚರ ಅಗತ್ಯ, ಪ್ರಯಾಣದ ಯೋಜನೆಗಳು ಮುಂದೂಡಿಕೆಯಾಗಲಿದೆ, ವೈವಾಹಿಕ ಜೀವನ ಅದ್ಬುತ ಎನಿಸಲಿದೆ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.
ಗಿವೆ.

ಕುಂಭರಾಶಿ
ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆಯ ಹೆಜ್ಜೆಯನ್ನಿಡಿ, ಆರ್ಥಿಕ ವಿಚಾರದಲ್ಲಿ ಅಧಿಕ ಲಾಭವನ್ನು ಪಡೆಯಲಿದ್ದೀರಿ, ವೈಯಕ್ತಿಕ ಮಾರ್ಗದರ್ಶನಗಳು ಸಂಬಂಧವನ್ನು ಸುಧಾರಿಸಲಿದೆ, ಸಹೋದ್ಯೋಗಿಗಳು ಹಾಗೂ ಹಿರಿಯರು ಹೆಚ್ಚಿನ ಸಹಕಾರವನ್ನು ನೀಡಲಿದ್ದಾರೆ, ವೈವಾಹಿಕ ಜೀವನವು ಅತ್ಯಂತ ಉತ್ತಮವಾಗಿರಲಿದೆ, ಪ್ರೀತಿಯಲ್ಲಿ ನೀವು ನಿಜವಾದ ಭಾವಪರವಶತೆಯನ್ನು ಅನುಭವಿಸುವಿರಿ, ಬಾಕಿ ಉಳಿದ ಕಾರ್ಯಕ್ಕೆ ಚಾಲನೆ ನೀಡಿ.

ಮೀನರಾಶಿ
ಮಕ್ಕಳು ನಿಮ್ಮ ಇಚ್ಚೆಯಂತೆ ವರ್ತಿಸುವುದಿಲ್ಲ, ಕೋಪವನ್ನು ನಿಯಂತ್ರಿಸಿಕೊಳ್ಳಿ, ಕೆಲಸ ಕಾರ್ಯಗಳು ಹಾಳಾಗುವ ಸಾಧ್ಯತೆ, ಕಠಿಣ ಪರಿಶ್ರಮವು ಉತ್ತಮ ಫಲಿತಾಂಶವನ್ನು ನೀಡುತ್ತದೆ, ಕೆಲಸದ ವೇಳೆಯಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ, ಕಠಿಣ ಪರಿಶ್ರಮವು ನಿಮಗೆ ಅಧಿಕ ಲಾಭವನ್ನು ತಂದುಕೊಡಲಿದೆ, ಕೆಲಸದಲ್ಲಿರುವ ವ್ಯಕ್ತಿಗಳು ಕಿರಿಕಿರಿಯನ್ನು ಉಂಟು ಮಾಡಲಿದ್ದಾರೆ, ಯಾವುದಕ್ಕೂ ಧೃತಿಗೆಡುವ ಅಗತ್ಯವಿಲ್ಲ.

ಇದನ್ನೂ ಓದಿ : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಭಾರೀ ಏರಿಕೆ ಕಂಡ ಅಡುಗೆ ಎಣ್ಣೆಯ ದರ

ಇದನ್ನೂ ಓದಿ : ವಾಟ್ಸಾಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ : ಬಳಕೆದಾರರ ಪರದಾಟ

( Horoscope today astrological prediction for October 05 )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular