ಸೋಮವಾರ, ಏಪ್ರಿಲ್ 28, 2025
HomeSpecial StoryLife StyleBeauty tips : ತಿಂದು ಎಸೆಯುವ ಬಾಳೆಹಣ್ಣಿನ ಸಿಪ್ಪೆಯಿಂದ ಅರಳುತ್ತೆ ಮುಖದ ಕಾಂತಿ

Beauty tips : ತಿಂದು ಎಸೆಯುವ ಬಾಳೆಹಣ್ಣಿನ ಸಿಪ್ಪೆಯಿಂದ ಅರಳುತ್ತೆ ಮುಖದ ಕಾಂತಿ

- Advertisement -

ಸಾಮಾನ್ಯವಾಗಿ ಬಾಳೆಹಣ್ಣನ್ನು ತಿನ್ನುವಾಗ ನಾವು ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಬಾಳೆಹಣ್ಣಿನಂತೆ ಅದರ ಸಿಪ್ಪೆಯೂ ಬಹಳ ಪ್ರಯೋಜನಕಾರಿ. ಬಾಳೆಹಣ್ಣಿನ ಸಿಪ್ಪೆಯು ಮುಖದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಇದು ಚರ್ಮದ ಸುಕ್ಕುಗಳು, ನಸುಕಂದು ಮಚ್ಚೆಗಳು ಮುಂತಾದ ಅಕಾಲಿಕ ವಯಸ್ಸಾದ ಚಿಹ್ನೆಗಳನ್ನು ತೊಡೆದುಹಾಕಲು ಸಹ ಉಪಯುಕ್ತವಾಗಿರುತ್ತದೆ.

ಬಾಳೆಹಣ್ಣಿನ ಸಿಪ್ಪೆಯನ್ನು ಮುಖದ ಮೇಲೆ ಉಜ್ಜಿ ಮಸಾಜ್ ಮಾಡಿ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆ ನಿವಾರಣೆ ಆಗುತ್ತದೆ. ಇದಲ್ಲದೆ ನಿಮ್ಮ ಕೈ, ಸಹ ಚರ್ಮದ ಮೇಲೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡುವುದರಿಂದಲೂ ಹೊಳೆಯುವ ಚರ್ಮವನ್ನು ಪಡೆಯಬಹುದಾಗಿದೆ. ಇದಲ್ಲದೆ ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಹಚ್ಚಬಹುದು.

ಇದನ್ನೂ ಓದಿ: ಆಯುರ್ವೇದದಲ್ಲಿದೆ ಸೌಂದರ್ಯದ ಗುಟ್ಟು

ಹೊಳೆಯುವ ಚರ್ಮವನ್ನು ಪಡೆಯಲು ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ತಯಾರಿಸಿ ಬಳಸುವುದು ಕೂಡ ಒಳ್ಳೆಯ ಮಾರ್ಗವಾಗಿದೆ. ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಪದಾರ್ಥಗಳು:-
ಬಾಳೆಹಣ್ಣಿನ ಸಿಪ್ಪೆ, 2 ಚೆನ್ನಾಗಿ ಮಾಗಿದ ಬಾಳೆಹಣ್ಣು, 2 ಟೀಸ್ಪೂನ್ ಹಾಲು, 1 ಟೀಚಮಚ ಜೇನುತುಪ್ಪ

ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣಗೆ ಕತ್ತರಿಸಿ ಮಿಕ್ಸಿಗೆ ಹಾಕಿ. ಇದರ ನಂತರ, ಎರಡು ಮಾಗಿದ ಬಾಳೆಹಣ್ಣನ್ನು ಅದಕ್ಕೆ ಸೇರಿಸಿ. ಅದೇ ಸಮಯದಲ್ಲಿ, 2 ಟೀಸ್ಪೂನ್ ಹಾಲು ಮತ್ತು 1 ಟೀಚಮಚ ಜೇನುತುಪ್ಪವನ್ನು ಸೇರಿಸಿ. ಈ ಎಲ್ಲಾ ವಸ್ತುಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಪೇಸ್ಟ್ ಮಾಡಿ. ನುಣ್ಣಗೆ ರುಬ್ಬಿಕೊಂಡಿರುವ ಈ ಪೇಸ್ಟ್ ಅನ್ನು ಪಾತ್ರೆಗೆ ಹಾಕಿ 10 ನಿಮಿಷಗಳ ಕಾಲ ಫ್ರಿಜ್ ನಲ್ಲಿಡಿ.

ಇದನ್ನೂ ಓದಿ: Beauty tips : ಒಣದ್ರಾಕ್ಷಿಯ ಸೌಂದರ್ಯ ರಹಸ್ಯ

banana beauty

ನಂತರ ಪೇಸ್ಟ್ ಅನ್ನು ಫ್ರಿಜ್ ನಿಂದ ಹೊರತೆಗೆಯಿರಿ. ಬಳಿಕ ಮೊದಲಿಗೆ ಫೇಸ್ ವಾಶ್ ನಿಂದ ಮುಖವನ್ನು ಸ್ವಚ್ಛಗೊಳಿಸಿ ಮತ್ತು ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಸಮವಾಗಿ ಹಚ್ಚಿ. ಪೇಸ್ಟ್ ಡ್ರೈ ಆದ ನಂತರ, ಕರವಸ್ತ್ರವನ್ನು ತೇವಗೊಳಿಸುವ ಮೂಲಕ ಪೇಸ್ಟ್ ಅನ್ನು ಒರೆಸಿ ಅಥವಾ ಸಾಮಾನ್ಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಬಾಳೆಹಣ್ಣಿನ ಸಿಪ್ಪೆಯ ಈ ಫೇಸ್ ಪ್ಯಾಕ್ ಅನ್ನು ವಾರದಲ್ಲಿ ಮೂರು ಬಾರಿ ಬಳಸಬಹುದು.

(Blossoms from banana peel the brightness of the face)

RELATED ARTICLES

Most Popular