ಬಹುವರ್ಷಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಇಬ್ಬರೇ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ರಿಯಲ್ ಲೈಫ್ ನಲ್ಲೂ ಹೀರೋಗಿರಿ ಮೆರೆದಿರುವ ರಾಕಿಂಗ್ ಸ್ಟಾರ್ ಯಶ್ ಸಿಂಹಕ್ಕೆ ಮಾಂಸ ತಿನ್ನಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಯಶ್ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಕಡ್ಡಿಯೊಂದರ ತುದಿಗೆ ಮಾಂಸವನ್ನು ಕಟ್ಟಲಾಗಿದ್ದು ಆ ಮಾಂಸವನ್ನು ಯಶ್ ಅಂಜದೇ ಸಿಂಹಕ್ಕೆ ತಿನ್ನಿಸುತ್ತಿದ್ದಾರೆ. ಈ ವಿಡಿಯೋವನ್ನು ಯಶ್ ಶೇರ್ ಮಾಡಿಕೊಂಡಿದ್ದಾರೆ.

ಬಿಳಿ ಸಿಂಹಕ್ಕೆ ನೇರವಾಗಿ, ಧೈರ್ಯವಾಗಿ ಮಾಂಸ ತಿನ್ನಿಸಿದ ಯಶ್ ಸಾಹಸ ಕಂಡು ಅಭಿಮಾನಿಗಳು ಫುಲ್ ಖುಷಿ ಯಾಗಿದ್ದು ನಮ್ಮ ಹೀರೋ ರಿಯಲ್ ಲೈಫ್ ನಲ್ಲೂ ನಾಯಕನೇ ಅಂತ ಸಂಭ್ರಮಿಸುತ್ತಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ ಯಶ್ ಹಾಗೂ ರಾಧಿಕಾ ತಮ್ಮ ಇಬ್ಬರು ಮಕ್ಕಳನ್ನು ಬಿಟ್ಟು ಪ್ರವಾಸಕ್ಕೆ ದುಬೈಗೆ ಹಾರಿದ್ದಾರೆ. ಅಲ್ಲಿನ ಶಾಪಿಂಗ್ ಮಾಲ್ ಸೇರಿದಂತೆ ಹಲವೆಡೆ ಯಶ್ ಹಾಗೂ ರಾಧಿಕಾ ಓಡಾಡಿ ಎಂಜಾಯ್ ಮಾಡ್ತಿದ್ದು ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
(Rocking star Yash has bravely fed the lion )