ಮೇಷರಾಶಿ
ಮಾನಸಿಕ ದೃಢತೆಯನ್ನು ಸುಧಾರಿಸಿ, ಅನಿರೀಕ್ಷಿತ ಮೂಲಗಳಿಂದ ಆದಾಯ, ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಉತ್ತಮ ದಿನ, ಕಷ್ಟದ ದಿನಗಳು ಕರಗಿ, ಕೆಲಸ ನಿಮ್ಮನ್ನು ಆಶ್ಚರ್ಯ ಗೊಳಿಸಲಿದೆ, ಶಾಂಪಿಂಗ್ ವೇಳೆಯಲ್ಲಿ ಖರ್ಚಿಗೆ ನಿಯಂತ್ರಣ ಹೇರಿ, ಸಂಗಾತಿಯೊಂದಿಗೆ ದಿನ ಕಳೆಯುವಿರಿ.
ವೃಷಭರಾಶಿ
ಆರೋಗ್ಯ ಚೆನ್ನಾಗಿರುತ್ತದೆ. ಆರ್ಥಿಕವಾಗಿ ಅಭಿವೃದ್ದಿ ಕಂಡು ಬರಲಿದೆ, ಮನಸ್ಸಿಗೆ ಶಾಂತಿ ದೊರೆಯಲಿದೆ, ಹಾಸ್ಯ ಸ್ವಭಾವ ಸಾಮಾಜಿಕ ಗೌರವವನ್ನು ಹೆಚ್ಚಿಸಲಿದೆ, ಪ್ರೇಮಿಯಿಂದ ದೂರವಿರುವುದು ಕಷ್ಟಕರವೆನಿಸಲಿದೆ, ಮೇಲಾಧಿಕಾರಿಗಳು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ, ಕೆಲಸದ ಸ್ಥಳದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ, ನಿಮ್ಮ ಕೆಟ್ಟ ಮನಸ್ಥಿತಿಯನ್ನು ತೆಗೆದು ಹಾಕಿ.
ಮಿಥುನರಾಶಿ
ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸುತ್ತಲಿನ ಜನರು ನಿಮ್ಮ ಮನೋಸ್ಥೈರ್ಯ ಮತ್ತು ಚೈತನ್ಯವನ್ನು ಹೆಚ್ಚಿಸುತ್ತಾರೆ. ಹೊಸ ಹಣಕಾಸಿನ ಒಪ್ಪಂದವು ಲಾಭ ವನ್ನು ತರಲಿದೆ, ಕೆಲಸದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ, ಸಂಗಾತಿ ನಿಮ್ಮನ್ನು ಅಚ್ಚರಿಗೊಳಿಸಲಿದ್ದಾರೆ. ಹಗಲುಗನಸು ನಿಮ್ಮ ಅಧಃಪತನವನ್ನು ತರುತ್ತದೆ.
ಕರ್ಕಾಟಕರಾಶಿ
ಒತ್ತಡದ ಹೊರತಾಗಿಯೂ ಆರೋಗ್ಯವು ಚೆನ್ನಾಗಿರಲಿದೆ, ಸಣ್ಣ ವ್ಯವಹಾರ ಮಾಡುವವರು ತಜ್ಞರ ಸಲಹೆಯನ್ನು ಪಡೆಯಿರಿ, ಪ್ರೀತಿ ಪಾತ್ರರ ಜೊತೆಗೆ ವಾದಕ್ಕೆ ಕಾರಣವಾಗಲಿದೆ, ವಿವಾದಾತ್ಮಕ ಸಮಸ್ಯೆಯ ಪರಿಹಾರಕ್ಕೆ ಯತ್ನಿಸಿ, ಶಾಪಿಂಗ್‌ಗೆ ಹೋದ್ರೆ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ, ವೈವಾಹಿಕ ಜೀವನ ಇಂದು ಅಚ್ಚರಿಯನ್ನು ತರಲಿದೆ, ಇಂದು ನೀವು ಅಸಮಾನ್ಯವಾದುದನ್ನು ಸಾಧಿಸುವಿರಿ.
ಸಿಂಹರಾಶಿ
ಸೃಜನಶೀಲ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ರೋಗದ ವಿರುದ್ದ ಹೋರಾಡಲು ಪ್ರೇರಣೆ ಸಿಗಲಿದೆ, ಅಜ್ಞಾತ ಮೂಲದಿಂದ ಇಂದು ಹಣವನ್ನು ಪಡೆದುಕೊಳ್ಳುವಿರಿ, ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ, ಹಳೆಯ ಸ್ನೇಹಿತರು ನಿಮಗೆ ಬೆಂಬಲ ಹಾಗೂ ಸಹಾಯವನ್ನು ಮಾಡಲಿದ್ದಾರೆ, ನ್ಯಾಯಯುತ ಮತ್ತು ಉದಾರದ ಪ್ರೀತಿಗೆ ಬಹುಮಾನ ನೀಡುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಗೆ ಅದ್ಭುತವಾದ ಸುದ್ದಿ ಸಿಗಬಹುದು.
ಇದನ್ನೂ ಓದಿ : ನಿಂಬೆ ಹಣ್ಣಿನಿಂದ ರಕ್ತ ಜಿನುಗುವುದು ಹೇಗೆ ಗೊತ್ತಾ ? ದೀಪ ತಾನಾಗಿಯೇ ಹೊತ್ತಿಕೊಳ್ಳುತ್ತದೆ ಹೇಗೆ ಗೊತ್ತಾ ?
ಕನ್ಯಾರಾಶಿ
ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ, ಸ್ನೇಹಿತರ ಜೊತೆ ಹೆಚ್ಚು ಕಾಲ ಕಳೆಯುವಿರಿ, ಸಮಯ ಮತ್ತು ಹಣವನ್ನು ಗೌರವಿಸಬೇಕು, ಮುಂಬರುವ ಸಮಯವು ತೊಂದರೆ ಹಾಗೂ ಸವಾಲಿನಿಂದ ಕೂಡಿರುತ್ತದೆ, ಮಕ್ಕಳು ಹಾಘು ಸ್ನೇಹಿತರ ಜೊತೆ ಸಮಯ ಕಳೆಯುವಿರಿ, ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ, ಸಂಗಾತಿಯ ಪ್ರೀತಿಯಿಂದ ಜೀವನದ ಎಲ್ಲಾ ಕಷ್ಟಗಳು ಕರಗಿ ಹೋಗಲಿದೆ.
ತುಲಾರಾಶಿ
ಉತ್ತಮ ಮನಸ್ಸಿನಿಂದ ನೀವಿಂದು ಮನೆಯಿಂದ ಹೊರಗೆ ಹೋಗುವಿರಿ, ಪ್ರಭಾವಶಾಲಿ ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ನಿಮ್ಮ ಬಾಂಧವ್ಯ ಸುಧಾರಿಸಲಿದೆ, ಸಾಮಾಜಿಕ ಘಟನೆಗಳು ಪರಿಪೂರ್ಣ ಅವಕಾಶ ದೊರೆಯಲಿದೆ, ಪ್ರಿಯತಮೆಯೊಂದಿಗೆ ಕೆಲವು ವ್ಯತ್ಯಾಸಗಳು ನಡೆಯಲಿದೆ, ಸಂಗಾತಿಗೆ ನಿಮ್ಮ ಸ್ಥಾನವನ್ನು ಅರ್ಥ ಮಾಡಿಕೊಳ್ಳಲು ಕಷ್ಟಕರವಾಗಬಹುದು, ಪ್ರಮುಖ ಕೆಲಸಗಳನ್ನು ಮಾಡಲು ಮರೆಯುವಿರಿ.
ವೃಶ್ಚಿಕರಾಶಿ
ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ, ಸ್ನೇಹಿತರ ಸಹಾಯದಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ, ಒತ್ತಡವನ್ನು ತಪ್ಪಿಸಲು ಜನರರ ಜೊತೆ ಪ್ರೀತಿಯಿಂದ ವರ್ತಿಸಿ, ಕೆಲಸದಲ್ಲಿ ಕ್ರಿಯಾತ್ಮಕ ಹಾಗೂ ಅದ್ಬುತವಾದುದನ್ನು ತರಲಿದೆ, ಸಹೋದ್ಯೋಗಿಗಳಿಂದ ಬೆಂಬಲ ದೊರೆಯಲಿದೆ, ನಿಮ್ಮ ರಹಸ್ಯವನ್ನು ಪರಿಚಯಸ್ಥರ ಜೊತೆಗೆ ಹಂಚಿಕೊಳ್ಳಬೇಡಿ, ಸಂಗಾತಿಯ ಜೊತೆಗಿನ ಪ್ರೀತಿ ಕುಸಿಯುವ ಸಾಧ್ಯತೆಯಿದೆ.
ಧನಸುರಾಶಿ
ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ, ನಿಮ್ಮ ಕಳೆದು ಹೋದ ಶಕ್ತಿಯನ್ನು ಸಂಗ್ರಹಿಸಲು ಸಹಾಯವಾಗಲಿದೆ, ಹಣದ ವಿಷಯದಲ್ಲಿ ಗ್ರಹಗಳ ನಿಯೋಜನೆ ನಿಮಗೆ ಅನುಕೂಲ ಕರವಾಗಿಲ್ಲ, ಹಣವನ್ನು ಸುರಕ್ಷಿತವಾಗಿರಿಸಿಕೊಳ್ಳಿ, ಕುಟುಂಬ ಸದಸ್ಯರು ತುಂಬಾ ಬೇಡಿಕೆಯಿಡುತ್ತಾರೆ, ದಿಟ್ಟ ಹೆಜ್ಜೆ ಹಾಗೂ ನಿರ್ಧಾರಗಳು ಅನುಕೂಲಕರ ಫಲಿತಾಂಶವನ್ನು ತರಲಿದೆ, ಉಚಿತ ಸಮಯದಲ್ಲಿ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.
ಇದನ್ನೂ ಓದಿ : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ
ಮಕರರಾಶಿ
ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ, ಅದೃಷ್ಟ ನಿಮ್ಮ ಭಯವನ್ನು ದೂರ ಮಾಡುತ್ತದೆ, ಆರೋಗ್ಯದ ಮೇಲೆ ತಕ್ಷಣ ಪರಿಣಾಮ ಬೀರುವ ಸಾಧ್ಯತೆ, ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ, ಆರ್ಥಿಕವಾಗಿ ಇಂದು ಮಿಶ್ರಫಲ, ವಿತ್ತೀಯ ಲಾಭವನ್ನು ಗಳಿಸುವಿರಿ, ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಲಿದೆ, ಈ ಹಿಂದೆ ಮಾಡಿದ ತಪ್ಪನ್ನು ಪುನರಾವರ್ತನೆ ಮಾಡಬೇಡಿ, ಸಮಯದ ಸೂಕ್ಷ್ಮತೆಯನ್ನು ಅರಿತುಕೊಂಡ್ರೆ ಲಾಭದಾಯಕವಾಗಲಿದೆ.
ಕುಂಭರಾಶ
ವಿಶೇಷ ವ್ಯಕ್ತಿಯನ್ನು ನಿಮಗಿಂದು ಸ್ನೇಹಿತರು ಪರಿಚಯಿಸಲಿದ್ದಾರೆ, ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಲಿದೆ, ಹಣದ ಲಾಭಗಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ, ಪ್ರೇಮ ಸಂಬಂಧದ ಬಗ್ಗೆ ಕೂಗಬೇಡಿ, ಯಾವುದೇ ಯೋಜನೆ ಆರಂಭಿಸುವ ಮುನ್ನ ಸಂಗಾತಿಯ ಸಲಹೆಯನ್ನು ಆಲಿಸಿ, ಏಕಾಂಗಿಯಾಗಿ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ, ಅದ್ಬುತವಾದ ಕೆಲಸವೊಂದನ್ನು ಮಾಡುವಿರಿ.
ಮೀನರಾಶಿ
ಆರೋಗ್ಯ ವೃದ್ದಿಸಲಿದೆ, ವಿದೇಶಿ ವ್ಯವಹಾರ ನಡೆಸುವವರು ಇಂದು ನಷ್ಟ ಅನುಭವಿಸುವ ಸಾಧ್ಯತೆ, ಕುಟುಂಬದ ಸದಸ್ಯರ ಜೊತೆಗೆ ಸಮಯ ಕಳೆಯುವುದು ಆನಂದದಾಯಕ ವಾಗಿರಲಿದೆ, ರೋಮ್ಯಾಂಟಿಕ್ ಸಂಜೆಯು ಸುಂದರವಾಗಿರಲಿದೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು ಪ್ರಮುಖವಾದ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ, ಸಾಮಾಜಿಕವಾಗಿ ಗೌರವ ದೊರೆಯಲಿದೆ, ಹೊಂದಾಣಿಕೆ ಕಾರ್ಯ ಸಾಧನೆ.
ಇದನ್ನೂ ಓದಿ : ಶಿವರಾತ್ರಿಯಲ್ಲಿ ಪೂಜೆ ಮಾಡಿದ್ರೆ ಒಲಿತಾನೆ ಶಿವ ; ಸಾವಿರ ಲಿಂಗವಾಗಿ ನೆಲೆನಿಂತ ಮಹಾದೇವ
Horoscope today astrological prediction for October 22