ಭಾನುವಾರ, ಏಪ್ರಿಲ್ 27, 2025
HomeCrimeCrime News : ಮಗನ ಅಪ್ರಾಪ್ತ ಪ್ರಿಯತಮೆಯ ಮೇಲೆ ಅತ್ಯಾಚಾರವೆಸಗಿದ ತಂದೆ

Crime News : ಮಗನ ಅಪ್ರಾಪ್ತ ಪ್ರಿಯತಮೆಯ ಮೇಲೆ ಅತ್ಯಾಚಾರವೆಸಗಿದ ತಂದೆ

- Advertisement -

ಚಿಕ್ಕಮಗಳೂರು : ಮಗನನ್ನು ಹುಡುಕಿಕೊಂಡು ಮನೆಗೆ ಬಂದಿದ್ದ ಮಗನ ಅಪ್ರಾಪ್ತ ವಯಸ್ಸಿನ ಪ್ರಿಯತಮೆಯೆ ಮೇಲೆ ತಂದೆಯೋರ್ವ ಅತ್ಯಾಚಾರವೆಸಗಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್‌ ಠಾಣಾ ವ್ಯಾಕ್ತಿಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲೀಗ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಚಂದ್ರು ಎಂದು ಗುರುತಿಸಲಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಬಾಲಕಿ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಆತನ ಮನೆಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಪ್ರಿಯಕರ ಇರಲಿಲ್ಲ. ಮಗ ಕೆಲಸಕ್ಕೆ ಹೋಗಿದ್ದಾನೆ. ರಾತ್ರಿ ಮನೆಗೆ ಬರುತ್ತಾನೆ, ನೀವು ಮನೆಯಲ್ಲಿಯೇ ಉಳಿದುಕೋ ಎಂದು ಯುವಕನ ತಂದೆ ಅಪ್ರಾಪ್ತ ಬಾಲಕಿಗೆ ತಿಳಿಸಿದ್ದಾನೆ. ಅಂತೆಯೇ ಬಾಲಕಿ ಆತನ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಆದರೆ ರಾತ್ರಿಯ ವೇಳೆಯಲ್ಲಿ ಪಾಪಿ ತಂದೆ ಮಗಳ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಬಾಲಕಿ ರಾತ್ರಿ ನಡೆದಿದ್ದ ವಿಚಾರವನ್ನು ತನ್ನ ತಾಯಿ ಬಳಿಯಲ್ಲಿ ಹೇಳಿಕೊಂಡಿದ್ದಾಳೆ. ಕೂಡಲೇ ಬಾಲಕಿಯ ತಾಯಿ ಬಾಳೆಹೊನ್ನೂರು ಪೊಲೀಸ್‌ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾಮುಕ ತಂದೆ ಚಂದ್ರು ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ದಲಿತನ ಹುಡುಗನನ್ನು ಮದ್ವೆಯಾಗಿದ್ದಕ್ಕೆ ಮಗಳನ್ನೇ ಅರೆ ನಗ್ನ ಗೊಳಿಸಿದ ತಂದೆ !

ಇದನ್ನೂ ಓದಿ : ನಕ್ಸಲ್‌ ನಾಯಕ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಅರೆಸ್ಟ್‌

(father has raped his sons lover in Chikkamagalore)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular