ಚಂಢೀಗಡ : ಬಾಲಿವುಡ್ ಖ್ಯಾತ ನಟ ಸೋನು ಸೂದ್ (Sonu Sood) ಸಹೋದರಿ ಮಾಳವಿಕಾ ಸೂದ್ (Malvika Sood) ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುಂಬವರು ಪಂಜಾಬ್ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಖುದ್ದು ನಟ ಸೋನು ಸೂದ್ ಘೋಷಣೆ ಮಾಡಿದ್ದಾರೆ. ನಟ ಸೋನು ಸೂದ್ ಈಗಾಗಲೇ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು.
ಕೊರೊನಾ ಸಂಕಷ್ಟದ ಕಾಲದಲ್ಲಿ ಜನರಿಗೆ ನೆರವಾಗಿದ್ದರು. ಸೋನು ಸೂದ್ ಅವರ ಸಾಮಾಜಿಕ ಕಾರ್ಯವನ್ನು ದೇಶವೇ ಕೊಂಡಾಡಿತ್ತು. ಇದೀಗ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ರಾಜಕೀಯದ ಮೂಲಕ ಜನ ಸೇವೆಗೆ ರೆಡಿಯಾಗಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಮಾಳವಿಕಾ ಸೂದ್ ಅವರು, ರಾಜಕೀಯ ಪಕ್ಷಕ್ಕೆ ಸೇರುವ ವಿಚಾರದಲ್ಲಿ ವಿಚಾರದಲ್ಲಿ ಇದು ಜೀವನದ ದೊಡ್ಡ ನಿರ್ಧಾರ ಎಂದಿದ್ದಾರೆ.
ಮಾಳವಿಕಾ ಸೂದ್ ಯಾವ ಪಕ್ಷದ ಮೂಲಕ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರಿಯಾದ ಸಮಯದಲ್ಲಿ ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸುತ್ತೇವೆ ಎಂದಿದ್ದಾರೆ. ಸೋನುಸೂದ್ ಅವರ ಸಹೋದರಿ ಇತ್ತೀಚೆಗೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಭೇಟಿಯಾಗಿದ್ದರು ಮತ್ತು ಎಎಪಿಯ ಅರವಿಂದ್ ಕೇಜ್ರಿವಾಲ್ ಮತ್ತು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಸೇರಿದಂತೆ ಇತರ ರಾಜಕೀಯ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಕೋವಿಡ್ ಸಂಕಷ್ಟದ ಕಾಲದಲ್ಲಿಯೇ ಸೋನು ಸೂದ್ ಅವರು ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ದೇಶ್ ಕಾ ಮೆಂಟರ್ಸ್ ಅನ್ನೋ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಅಂತಾನೂ ಘೋಷಿಸಿಕೊಂಡಿದ್ದರು. ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ, ಲಾಕ್ಡೌನ್ನಿಂದ ಸಿಲುಕಿರುವ ನೂರಾರು ವಲಸಿಗರನ್ನು ತಮ್ಮ ತಾಯ್ನಾಡಿಗೆ ಕರೆದೊಯ್ಯಲು ಅವರು ಬಸ್ಗಳು, ರೈಲುಗಳು ಮತ್ತು ವಿಮಾನಗಳನ್ನು ಸಹ ವ್ಯವಸ್ಥೆಗೊಳಿಸಿದಾಗ ಸೂದ್ ಅವರ ಕೆಲಸವು ಅವರಿಗೆ ಎಲ್ಲಾ ಭಾಗಗಳಿಂದ ಪ್ರಶಂಸೆ ಗಳಿಸಿತು. ಈ ವರ್ಷದ ಆರಂಭದಲ್ಲಿ ಎರಡನೇ ತರಂಗದ ಸಮಯದಲ್ಲಿ, ಅವರು ಕೋವಿಡ್ ರೋಗಿಗಳಿಗೆ ಆಮ್ಲಜನಕವನ್ನು ಆಯೋಜಿಸಿದರು.
ಇದನ್ನೂ ಓದಿ : ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ವಂಚನೆ ಪ್ರಕರಣ ದಾಖಲು
ಇದನ್ನೂ ಓದಿ : ಭಾರತದಲ್ಲಿ ಜಾರಿಯಾಗುತ್ತೆ ಕ್ರಿಪ್ಟೋಕರೆನ್ಸಿ ಕಾನೂನು : ಪಿಎಂ ಮೋದಿ ನೇತೃತ್ವದಲ್ಲಿ ಸಭೆ
( Sonu Sood Sister Malvika Sood enter politics likely to Contest Punjab Polls)