ಬೆಂಗಳೂರು : ಕೊವೀಡ್ ಲಸಿಕೆ ವಿತರಣೆಯಲ್ಲಿ ನಿಶ್ಚಿತ ಗುರಿ ತಲುಪಲು ಸರ್ಕಾರ ಸರ್ಕಸ್ ನಡೆಸುತ್ತಿದೆ. ಹೀಗಿರುವಾಗಲೇ ಲಸಿಕೆ ಸಾಗಾಟ ದಲ್ಲಿ ಸಮಯ ಹಾಗೂ ಶ್ರಮ ಎರಡನ್ನು ಉಳಿಸುವಂತಹ ಪ್ರಯತ್ನವೊಂದು (Drone Vaccine) ಯಶಸ್ವಿಯಾಗಿದೆ.
ಕೊವೀಡ್ ಲಸಿಕೆ ಸಾಗಿಸಲು ಡ್ರೋನ್ ಬಳಕೆ ಮಾಡಲಾಗಿದ್ದು ಪ್ರಯೋಗ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಇಂದು ಇಂಥಹದೊಂದು ಯಶಸ್ವಿ ಪ್ರಯೋಗ ನಡೆದಿದ್ದು ಡ್ರೋನ್ ಮೂಲಕ ಲಸಿಕೆಯನ್ನು ಸಾಗಿಸಲಾಗಿದೆ. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ ಸಿದ್ಧಪಡಿಸಿದ ಡ್ರೋನ್ ನಲ್ಲಿ ಈ ಪ್ರಯೋಗ ಮಾಡಲಾಗಿದೆ. ಎನ್ ಎಎಲ್ ಅಭಿವೃದ್ಧಿ ಪಡಿಸಿದ ಅಕ್ಟಾಕಾಪ್ಟರ್ ಎಂಬ ಡ್ರೋನ್ ನಲ್ಲಿ ಲಸಿಕೆಯನ್ನು ಚಂದಾಪುರದ ಪ್ರಾಥಮಿಕ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಕೇಂದ್ರಕ್ಕೆ ರವಾನಿಸಲಾಗಿದೆ.
ಲಸಿಕೆಯನ್ನು ಹೊತ್ತೊಯ್ದ ಡ್ರೋನ್ 10 ನಿಮಿಷದಲ್ಲಿ 14 ಕಿಲೋಮೀಟರ್ ಕ್ರಮಿಸಿದೆ. ಅಕ್ಟಾಕಾಪ್ಟರ್ ಡ್ರೋಣ್ 15 ಕೆಜಿ ತೂಕದ ಐಸ್ ಬಾಕ್ಸ್ ನಲ್ಲಿ 50 ವಯಲ್ಸ್ ಲಸಿಕೆಯನ್ನು ಡ್ರೋನ್ ಹೊತ್ತೊಯ್ದಿದೆ.
ಈ ಕಾರ್ಯಾಚರಣೆಯ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಡ್ರೋನ್ ಹೊತ್ತು ತಂದ ಲಸಿಕೆಯನ್ನು ಆರೋಗ್ಯ ಕೇಂದ್ರದ ಸಿಬ್ಬಂದಿ ಸ್ವೀಕರಿಸಿದ್ದಾರೆ. ರಸ್ತೆ ಮಾರ್ಗದಲ್ಲಿ ಲಸಿಕೆ ಸಾಗಿಸಲು ಕನಿಷ್ಟ 40 ನಿಮಿಷದ ಅವಧಿ ಬೇಕಾಗುತ್ತಿತ್ತು. ಆದರೆ ಡ್ರೋನ್ ಸಮಯ ಹಾಗೂ ಶ್ರಮವನ್ನು ಕಡಿಮೆ ಮಾಡಿದೆ. ಎನ್ ಎ ಎಲ್ ಅಭಿವೃದ್ಧಿಪಡಿಸಿದ ಈ ಡ್ರೋನ್ ಕ್ಯಾಮರಾಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ : ಮಕ್ಕಳಿಗಾಗಿ ನರ್ತಿಸಿದ ಶಿಕ್ಷಕರು : ಹೀಗೊಂದು ವಿಶಿಷ್ಟ ಮಕ್ಕಳ ದಿನಾಚರಣೆ
ಇದನ್ನೂ ಓದಿ : ಹರ್ ಘರ್ ದಸ್ತಕ್ ಅಭಿಯಾನ ಕೈಗೊಂಡ ಆರೋಗ್ಯ ಇಲಾಖೆ
( Corona vaccine shipping by drone)