ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಲಕ್ನೋ ಮತ್ತು ಅಹಮದಾಬಾದ್ ಹೊಸ ತಂಡಗಳು ಸೇರ್ಪಡೆಯಾಗಿವೆ. ಈ ಹಿನ್ನೆಲೆಯಲ್ಲಿ ತಂಡಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು (IPL Retention) ಇಂದು ಸಲ್ಲಿಕೆ ಮಾಡಲಿವೆ. ಇದಕ್ಕೂ ಮೊದಲೇ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ತಂಡದಿಂದ ಹೊರ ನಡೆಯುವ ಸಾಧ್ಯತೆಯಿದೆ ಅನ್ನೋ ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್‌ವಾಲ್ ತಂಡದ ನಾಯಕನಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ತಮ್ಮ ಪ್ರಕಾರ, ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತೆಹ ಸಾಧನೆಯನ್ನು ಮಾಡಿರುವ ಪಂಜಾಬ್ ಕಿಂಗ್ಸ್ ತಂಡ ಸ್ಟಾರ್ ಆಟಗಾರರಾಗಿರುವ ಮಯಾಂಕ್ ಅಗರ್‌ವಾಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಅಲ್ಲದೇ ಅವರಿಗೆ ತಂಡ ನಾಯಕ ಸ್ಥಾನವನ್ನು ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್ ಕಿಂಗ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಫೈನಲ್‌ಗೆ ಏರಿಲ್ಲ. ಇದೀಗ ಕೆ.ಎಲ್.ರಾಹುಲ್ ತಂಡದಿಂದ ಹೊರ ನಡೆಯುತ್ತಿದ್ದಾರೆ. ಹೀಗಾಗಿ ಮಯಾಂಕ್ ಅಗರ್ವಾಲ್ ನನ್ನ ಮೊದಲ ಆಯ್ಕೆಯಾಗಿದೆ. ಅಲ್ಲದೇ ಅವರನ್ನೇ ನಾಯಕನ್ನಾಗಿ ಮಾಡಬೇಕು ಎಮದು ಆಕಾಶ್ ಚೋಪ್ರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಭಾರತದ ಮಾಜಿ ಆರಂಭಿಕ ಆಟಗಾರ ಮೊಹಾಲಿ ಮೂಲದ ಫ್ರಾಂಚೈಸ್ ನಿಕೋಲಸ್ ಪೂರನ್ ಮತ್ತು ಐಡೆನ್ ಮಾರ್ಕ್ರಾಮ್ ಅನ್ನು ಉಳಿಸಿಕೊಳ್ಳಬೇಕು. ಆದರೆ ಕ್ರಿಸ್‌ಗೇಲ್ ತಂಡಕ್ಕೆ ಅಗತ್ಯವಿಲ್ಲ, ಭಾರತಟ ಸ್ಟಾರ್ ಬೌಲರ್ ಮೊಹಮ್ಮದ್ ಶೆಮಿ ಅವರನ್ನು ಕೈಬಿಟ್ಟು ಹರಾಜಿನ ಮೂಲಕ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಲ್ಲದೇ ಅನ್ ಕ್ಯಾಪ್ಟ್ ಆಟಗಾರರಾದ ಶಾರೂನ್ ಖಾನ್, ರವಿ ಬಿಷ್ಣೋಯಿ, ಆರ್ಶದೀಪ್ ಸಿಂಗ್ ಅವರನ್ನು ತಂಡ ಪರಿಗಣಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳು ಇಂದು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿದೆ. ಪ್ರತೀ ತಂಡವು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ.
IPL Retention ಐಪಿಎಲ್ ತಂಡಗಳು ಉಳಿಸಿಕೊಳ್ಳಲು ಯಾವೆಲ್ಲಾ ಮಾನದಂಡ ಅನುಸರಿಸಬೇಕು :
ಸಂಬಳದ ಮಿತಿ : 90 ಕೋಟಿ ರೂ
ಹಳೆಯ ಫ್ರಾಂಚೈಸಿಗಳು : ಎಂಟು ಹಳೆಯ ಫ್ರಾಂಚೈಸಿಗಳು ನವೆಂಬರ್ 30, 2021 ರೊಳಗೆ ಉಳಿಸಿಕೊಂಡಿರುವ ಆಟಗಾರರನ್ನು ಹೆಸರಿಸುತ್ತವೆ, ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಬಹುದು.
ಹೊಸ ಫ್ರಾಂಚೈಸಿಗಳು : 2 ಹೊಸ ತಂಡಗಳು ತಮ್ಮ 3 ಆಟಗಾರರನ್ನು ಹರಾಜಿನ ಹೊರಗೆ ಡಿಸೆಂಬರ್ 1, 2021 ರಿಂದ ಡಿಸೆಂಬರ್ 30, 2021 ರ ನಡುವೆ ಅಂತಿಮಗೊಳಿಸಿವೆ. 2 ಭಾರತೀಯರು ಮತ್ತು 1 ವಿದೇಶಿಯರಿಗಿಂತ ಹೆಚ್ಚಿಲ್ಲ.
ಆರ್‌ಟಿಎಂ ಕಾರ್ಡ್‌ಗಳು : ಈ ಬಾರಿ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್‌ಗಳೂ ಇರುವುದಿಲ್ಲ.
ಉಳಿಸಿಕೊಂಡಿರುವ ಆಟಗಾರರ ವೇತನ : ಬಿಸಿಸಿಐ ಅವರ ಆಯ್ಕೆಗಳ ಪ್ರಕಾರ ಸಂಬಳದ ಮಿತಿಯಿಂದ ಎಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ ಎಂಬುದನ್ನು ವಿವರಿಸಿದೆ.
ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿ ಆಯ್ಕೆ ಮಾಡಿಕೊಂಡರೆ:
ರಿಟೈನ್ ಆಟಗಾರರ ವೇತನದ ಆಯ್ಕೆ (ಒಟ್ಟು ರೂ 42 ಕೋಟಿ)
• ಮೊದಲ ರಿಟೈನ್ ಆಟಗಾರನಿಗೆ ರೂ 16 ಕೋಟಿ
• ಎರಡನೇ ರಿಟೈನ್ ಆಟಗಾರನಿಗೆ ರೂ 12 ಕೋಟಿ
• ಮೂರನೇ ರಿಟೈನ್ ಆಟಗಾರನಿಗೆ ರೂ 8 ಕೋಟಿ
• ನಾಲ್ಕನೇ ರಿಟೈನ್ ಆಟಗಾರನಿಗೆ ರೂ 6 ಕೋಟಿ
ಫ್ರಾಂಚೈಸಿಯು ಮೂರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ:
ರಿಟೈನ್ ಆಟಗಾರರ ವೇತನದ ಆಯ್ಕೆ (ಒಟ್ಟು ರೂ 33 ಕೋಟಿ)
• ಮೊದಲ ರಿಟೈನ್ ಆಟಗಾರನಿಗೆ ರೂ 15 ಕೋಟಿ
• ಎರಡನೇ ರಿಟೈನ್ ಆಟಗಾರನಿಗೆ ರೂ 11 ಕೋಟಿ
• ಮೂರನೇ ರಿಟೈನ್ ಆಟಗಾರನಿಗೆ ರೂ 7 ಕೋಟಿ
ಫ್ರಾಂಚೈಸಿಯು ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ:
ರಿಟೈನ್ ಆಟಗಾರರ ವೇತನದ ಆಯ್ಕೆ (ಒಟ್ಟು ರೂ 24 ಕೋಟಿ)
• ಮೊದಲ ರಿಟೈನ್ ಆಟಗಾರನಿಗೆ ರೂ 14 ಕೋಟಿ
• ಎರಡನೇ ರಿಟೈನ್ ಆಟಗಾರನಿಗೆ ರೂ 10 ಕೋಟಿ
ಫ್ರಾಂಚೈಸಿಯು ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಆರಿಸಿಕೊಂಡರೆ:
ರಿಟೈನ್ ಆಟಗಾರರ ವೇತನದ ಆಯ್ಕೆ (ಒಟ್ಟು ರೂ 14 ಕೋಟಿ)
• ಮೊದಲ ರಿಟೈನ್ ಆಟಗಾರನಿಗೆ ರೂ 14 ಕೋಟಿ
ರಿಟೈನ್ ಆಟಗಾರರ ಪಟ್ಟಿ :
ಬಹು ವರದಿಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಉಳಿಸಿಕೊಳ್ಳಲು ಬಯಸುವ ಆಟಗಾರರನ್ನು ಬಹುತೇಕ ಅಂತಿಮಗೊಳಿಸಿವೆ.
ಚೆನ್ನೈ ಸೂಪರ್ ಕಿಂಗ್ಸ್ (CSK) : ಎಂಎಸ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ/ ಸ್ಯಾಮ್ ಕರ್ರಾನ್
ದೆಹಲಿ ಕ್ಯಾಪಿಟಲ್ಸ್ (DC): ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಆಂಡ್ರೆ ನಾರ್ಟ್ಜೆ.
ಮುಂಬೈ ಇಂಡಿಯನ್ಸ್ (MI) : ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರಾನ್ ಪೊಲಾರ್ಡ್, ಇಶಾನ್ ಕಿಶನ್ (ಹೆಚ್ಚುವರಿ ಆಟಗಾರ)
ಕೋಲ್ಕತ್ತಾ ನೈಟ್ ರೈಡರ್ಸ್ (KKR): ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) : ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್
ರಾಜಸ್ಥಾನ್ ರಾಯಲ್ಸ್ (RR) : ಸಂಜು ಸ್ಯಾಮ್ಸನ್ 14 ಕೋಟಿ ರೂ
ಪಂಜಾಬ್ ಕಿಂಗ್ಸ್ (KXIP) : ಇನ್ನೂ ನಿರ್ಧರಿಸಬೇಕಿದೆ
ಸನ್‌ರೈಸಸ್ ಹೈದ್ರಾಬಾದ್ (SRH) : ಇನ್ನೂ ನಿರ್ಧರಿಸಬೇಕಿದೆ
ಐಪಿಎಲ್ ಸ್ಟಾರ್ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ಜೊತೆಗಿನ ಒಡನಾಟವನ್ನು ಕೊನೆಗೊಳಿಸಲಿದ್ದಾರೆ. ಅಲ್ಲದೇ ಹೊಸ ಪ್ರಾಂಚೈಸಿಯಾಗಿರುವ ಲಕ್ನೋ ತಂಡದ ನಾಯಕರಾಗಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ರಾಹುಲ್ ಈಗಾಗಲೇ ಪ್ರಾಂಚೈಸಿ ಜೊತೆಗೆ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಐಪಿಎಲ್ ಆಡಳಿತ ಮಂಡಳಿಯ ಸದಸ್ಯರ ಪ್ರಕಾರ, ಐಪಿಎಲ್ 2022 ರ ಮೆಗಾ ಹರಾಜು ಜನವರಿ 2022 ರ ಮೊದಲ ವಾರದಲ್ಲಿ ನಡೆಯಲಿದೆ.
ಈ ಬಾರಿ IPL 2022 ರ ಮೆಗಾ ಹರಾಜು ಹಾಗೂ ಪಂದ್ಯಾವಳಿ ಭಾರತದಲ್ಲಿಯೇ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಅಲ್ಲದೇ IPL 2022 ಮೆಗಾ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಅಭಿಮಾನಿಗಳು ಪಂದ್ಯಾವಳಿಯನ್ನು ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದಾಗಿದೆ.
ಇದನ್ನೂ ಓದಿ : IPL 2022 ನಿಂದ ಕೆ.ಎಲ್. ರಾಹುಲ್, ರಶೀದ್ ಖಾನ್ ಅಮಾನತು !
( IPL Retention : KL Rahul Departs, Mayank Agarwal to be Named as Punjab Kings Skipper )