ಈಗಿನ ಕಾಲದಲ್ಲಿ ಉದ್ಯೋಗ ಹುಡುಕೋದು ಅಂದರೆ ಸುಲಭದ ಮಾತಲ್ಲ. ಒಳ್ಳೆಯ ಕಂಪನಿ, ಉತ್ತಮ ಸ್ಥಾನ, ಕೈ ತುಂಬಾ ಸಂಬಳ ಎಲ್ಲರಿಗೂ ಸಿಗೋದಿಲ್ಲ. ಅದೇ ರೀತಿ ಕಳೆದ 10 ವರ್ಷಗಳಿಂದ ಕೆಲಸಕ್ಕಾಗಿ ಅಲೆಯುತ್ತಿದ್ದ 45 ವರ್ಷದ ಮುಂಬೈನ ಮಹಿಳೆ ಉದ್ಯೋಗ ಸಿಗುತ್ತೆ ಎಂದು ನಂಬಿ ಬರೋಬ್ಬರಿ 38 ಲಕ್ಷ ರೂಪಾಯಿ ಕಳೆದು ಕೊಂಡಿದ್ದಾಳೆ. ದೇವಮಾನವ (Godman) ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಆನ್ಲೈನ್ನಲ್ಲಿಯೇ ಹೋಮ – ಹವನ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಏನಾದರೂ ಮಾಡಿ ಕೆಲಸ ಗಿಟ್ಟಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿದ್ದ ಮಹಿಳೆಯು ತನ್ನೆಲ್ಲ ಆಭರಣ ಹಾಗೂ ಉಳಿತಾಯದ ಹಣವನ್ನು ಆತನ ಕೈಗೆ ನೀಡಿದ್ದಾಳೆ. ಆನ್ಲೈನ್ ಹೋಮ ಹವನದಿಂದ ತನ್ನೆಲ್ಲ ಸಮಸ್ಯೆ ನೀಗುತ್ತೆ ಎಂದು ನಂಬಿದ್ದ ಮಹಿಳೆ ಪಂಗನಾಮ ಹಾಕಿಸಿಕೊಂಡಿದ್ದಾಳೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಎಂಹೆಚ್ಬಿ ಠಾಣಾ ಪೊಲೀಸರು ಮುಂಬೈನ ಬೋರಿವಲಿ ಎಂಬಲ್ಲಿ ತನ್ನ ವಯಸ್ಸಾದ ಪೋಷಕರೊಂದಿಗೆ ವಾಸಿಸುತ್ತಿದ್ದ ಮಹಿಳೆ ಅನೇಕ ವರ್ಷಗಳಿಂದ ಉದ್ಯೋಗಕ್ಕಾಗಿ ಅರಸುತ್ತಿದ್ದಳು. 2018ರಲ್ಲಿ ಜಾಹೀರಾತೊಂದನ್ನು ವೀಕ್ಷಿಸಿದ ಈ ಮಹಿಳೆ ನನ್ನ ಸಮಸ್ಯೆಗಳನ್ನು ಪರಿಹಾರ ಮಾಡಲು ದೇವಮಾನವನೇ ಸರಿ ಎಂದು ನಂಬಿದ್ದಾಳೆ. ಜಾಹೀರಾತಿನಲ್ಲಿ ನೀಡಲಾದ ಫೋನ್ ನಂಬರ್ಗೆ ಕರೆ ಮಾಡಿ ತನ್ನಸಮಸ್ಯೆ ಬಗೆಹರಿಸಿ ಎಂದು ಸ್ವಯಂ ಘೋಷಿತ ದೇವಮಾನವನಲ್ಲಿ ಕೇಳಿಕೊಂಡಿದ್ದಾಳೆ. ಆದ ನಾಲ್ಕು ವರ್ಷಗಳ ಕಾಲ ಮಹಿಳೆಗೆ ವಂಚಿಸಿದ್ದು ಆನ್ಲೈನ್ ಹವನ ನೆರವೇರಿಸುವ ನೆಪದಲ್ಲಿ ಇಲ್ಲಿಯವರೆಗೆ ಬರೋಬ್ಬರಿ 38 ಲಕ್ಷ ರೂಪಾಯಿ ವಂಚಿಸಿದ್ದಾನೆ.
ಇಷ್ಟೆಲ್ಲ ಹೋಮ- ಹವನಗಳ ಬಳಿಕವೂ ಆಕೆಯ ಜೀವನದಲ್ಲಿ ಯಾವುದೇ ಬದಲಾವಣೆಯಾಗದೇ ಇರೋದನ್ನು ಗಮನಿಸಿದ ಮಹಿಳೆ ನವೆಂಬರ್ 27ರಂದು ಸೀದಾ ಅಯೋಧ್ಯೆಗೆ ತೆರಳಿ ದೇವಮಾನವನಿಗಾಗಿ ಹುಡುಕಾಟ ನಡೆಸಿದ್ದಾಳೆ. ಅಲ್ಲಿ ಆಕೆ ಹೊರಟಿದ್ದ ವಿಳಾಸದಲ್ಲಿ ಯಾವುದೇ ದೇವ ಮಾನವ ಇಲ್ಲ ಎಂಬ ವಿಚಾರ ತಿಳಿದುಬಂದಿದ್ದು ತಾನು ಮೋಸ ಹೋಗಿದ್ದರ ಬಗ್ಗೆ ಅರಿವಾಗಿದೆ. ಇದಾದ ಬಳಿಕ ಮುಂಬೈಗೆ ಮರಳಿದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪರಿಚಿತ ವಂಚಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆತನ ವೆಬ್ಸೈಟ್ ಹಾಗೂ ಹಣ ವ್ಯವಹಾರದ ದಾಖಲೆಗಳನ್ನು ಆಧರಿಸಿ ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಸ್ನೇಹಿತನ ಮಗನ ಪತ್ನಿಗೆ ಲೈಂಗಿಕ ಕಿರುಕುಳ : ಆರೋಪಿ ಬಂಧನ
ಇನ್ನೊಂದು ಪ್ರಕರಣದಲ್ಲಿ ಸ್ನೇಹಿತನ ಮಗ ಯುವತಿಯೋರ್ವಳನ್ನು ವಿವಾಹವಾಗಿದ್ದ. ಹೀಗಾಗಿ ಸ್ನೇಹಿತನ ಜೊತೆ ರಾಜಿ ಪಂಚಾಯಿತಿ ಮಾಡಿಸುವ ಸಲುವಾಗಿ ಸ್ನೇಹಿತ, ಸ್ನೇಹಿತನ ಮಗ ಹಾಗೂ ಸೊಸೆ ತನ್ನ ಮನೆಗೆ ಕರೆಯಿಸಿಕೊಂಡಿದ್ದ ಆರೋಪಿ ಸ್ನೇಹಿತನ ಸೊಸೆಯ ಮೇಲೆಯೇ ಅತ್ಯಾಚಾರವೆಸಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಯುವಾವ್ ಎಂಬಾತನ ಸ್ನೇಹಿತನ ಮಗ ಪೋಷಕರಿಗೆ ತಿಳಿಸದೇ ಮದುವೆಯಾಗಿದ್ದ. ಇದರಿಂದ ಮನನೊಂದ ತಂದೆ ತನ್ನ ಸ್ನೇಹಿತನ ಬಳಿಯಲ್ಲಿ ವಿಚಾರವನ್ನು ತಿಳಿಸಿದ್ದಾನೆ. ಹೀಗಾಗಿ ರಾಜಿ ಪಂಚಾಯಿತಿ ಮಾಡಿಸುವುದಾಗಿ ಹೇಳಿ ಸ್ನೇಹಿತ ಹಾಗೂ ಆತನ ಪತ್ನಿ ಮತ್ತು ಆತನ ಮಗ ಹಾಗೂ ಸೊಸೆಯನ್ನು ತನ್ನ ಮನೆಗೆ ಕರೆಯಿಸಿಕೊಂಡಿದ್ದ. ರಾಜಿ ಪಂಚಾಯಿತಿ ನಡೆಸಿದ ಬಳಿಕ ಮಗ, ಸೊಸೆಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡು ಬುದ್ದಿ ಮಾತು ಹೇಳುವುದಾಗಿ ನಂಬಿಸಿದ್ದಾನೆ. ನಂತರ ಮಗ, ಸೊಸೆಯನ್ನು ಬಿಟ್ಟು ಸ್ನೇಹಿತ ತನ್ನ ಮನೆಗೆ ತೆರಳಿದ್ದಾನೆ.
ಸ್ನೇಹಿತನ ಮಗ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಯುವಾವ್ ಎಂಬಾತ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಚಾರ ಆಕೆಯ ಪತಿಗೆ ತಿಳಿಯುತ್ತಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇದನ್ನು ಓದಿ : Girl Molested : ವಿದ್ಯುತ್ ಮೀಟರ್ ರೀಡಿಂಗ್‌ಗೆ ಮನೆಗೆ ಬಂದ : 12 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ
ಇದನ್ನು ಓದಿ : Onion Lorry Accident : ಲಾರಿ – ಟ್ಯಾಂಕರ್ ನಡುವೆ ಭೀಕರ ಅಪಘಾತ : ನಾಲ್ವರ ದುರ್ಮರಣ
Mumbai Woman Duped of Rs 38 Lakh by ‘Godman’ Who Promised Her Job With ‘Online Havan’