ಸಿನಿ ಪ್ರಿಯರು ಬಹಳ ಆಕಾಂಕ್ಷೆಯಿಂದ ಕಾಯುತ್ತಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ, ಜ್ಯೂನಿಯರ್ ಎನ್‌ಟಿಆರ್ ( Jr NTR ), ರಾಮ್ ಚರಣ್ ತೇಜ ( Ram Charan ), ಆಲಿಯಾ ಭಟ್ ನಟನೆಯ ಆರ್ ಆರ್ ಆರ್ (RRR Trailer) ಸಿನಿಮಾದ ಟ್ರೈಲರ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಇದಕ್ಕೆ ಜನರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಟ್ರೇಲರ್ ನಲ್ಲಿ ಎನ್‌ಟಿಆರ್, ರಾಮ ಚರಣ್ ತೇಜ, ಅಜಯ್ ದೇವಗನ್ ಅಭಿನಯ, ಫೈಟಿಂಗ್, ಆಲಿಯಾ ಭಟ್ ಹೊಸ ಗೆಟಪ್ಪಿಗೆ ಎಲ್ಲರೂ ಫಿದಾ ಆಗಿದ್ದಾರೆ.
ರಾಮ ಚರಣ್ ತೇಜ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ. ಕುತೂಹಲ ಕೆರಳಿಸಿದ್ದಾರೆ. ಈಗಾಗಲೇ ಬಾಹುಬಲಿಯಂತಹ ಮೆಗಾ ಹಿಟ್ ಸಿನೆಮಾ ನಿರ್ದೇಶಿಸಿರುವ ರಾಜಮೌಳಿ ಈ ಚಿತ್ರದಲ್ಲೂ ತಮ್ಮ ನಿರ್ದೇಶನ ಕಲೆಯನ್ನು ತೋರಿಸಿದ್ದಾರೆ. ಲಾಂಚ್ ಆಗಿ ಕೇವಲ 6 ಗಂಟೆಗಳಲ್ಲಿ 9.6 ಮಿಲಿಯನ್ ಲೈಕ್ಸ್ ಪಡೆದಿದ್ದು, ಇದರ ಇನ್ನೊಂದು ಹೆಗ್ಗಳಿಕೆ.
ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ಸುಮಾರು ₹400 ಕೋಟಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್ ಅವರ ಜೀವನ ಕಥೆಯನ್ನು ಆಧರಿಸಿದೆ. 3.10 ನಿಮಿಷಗಳ ಈ. ಟ್ರೇಲರ್ ನಲ್ಲಿ ಕಥೆ ಏನಿರಬಹುದು ಎಂದು ನಿರ್ದೇಶಕರು ಎಲ್ಲೂ ಬಿಟ್ಟುಕೊಟ್ಟಿಲ್ಲ.
ಈ ಚಿತ್ರದಲ್ಲೂ ಭರ್ಜರಿ ಸೆಟ್ ಗಳನ್ನು ಬಳಸಿದ್ದು, ಇದೊಂದು ಬಿಗ್ ಬಜೆಟ್ ಸಿನಿಮಾ ಅನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಬರುವ ಜನವರಿ 7ರಂದು ಚಿತ್ರ ಬಿಡುಗಡೆ ಆಗಲಿದ್ದು, ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆ ಆಗಲಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ಪ್ರಚಾರ ಪಡೆದ ಈ ಚಿತ್ರ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಮೂಲಕ ಮತ್ತಶ್ಟು ಗಳಿಕೆ ಮಾಡುವುದು ಪಕ್ಕಾ ಆಗಿದೆ. ಟ್ರೇಲರ್ ಗೆ ಇಷ್ಟು ರೆಸ್ಪಾನ್ಸ್ ಸಿಕ್ಕಿದೆ, ಅಂದಮೇಲೆ ಸಿನೆಮಾ ಸೂಪರ್ ಹಿಟ್ ಆಗುತ್ತದೆ ಎಂಬುದು ಸಿನಿ ಪ್ರಿಯರ ಮಾತು.
ENOUGH WORDS!!!!! GOING TO BE AN ADRENALINE RUSH IN THE THEATRES FOR SURE!!!
— Human..❤️ (@yintomyyang__) December 9, 2021
@ssrajamouli SIR YOU NEVER LET US DOWN!!!!🔥🔥🔥🔥🔥 #RRRTrailer
RRR Trailer (Telugu) – NTR, Ram Charan, Ajay Devgn, Alia Bhatt | SS Raja… https://t.co/7YDByCIhpt via @YouTube
#RRR He’s been spectacular in any angle acting with eyes is a rare quality Tarak elevate them with eyes none other can 🔥🔥🔥🔥🔥🙏🙏🙏🤙🤙 pic.twitter.com/vgIqQ5L0bp
— Hara Hara Mahadeva 🔥🔥 (@Nbk2Nbk) December 9, 2021
ಇದನ್ನೂ ಓದಿ: Realme Discounts Offers: ರಿಯಲ್ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್
( RRR Trailer released here is the twitter review Ram Charan and Jr NTR starrer as superhit call SS Rajmouli visionary by Netizens)