ಮಂಗಳವಾರ, ಜೂನ್ 17, 2025
Homeನಮ್ಮ ಬೆಂಗಳೂರುDog No entry Cubbon Park : ನಾಯಿಗಳು ಕಬ್ಬನ್ ಪಾರ್ಕ್ ಗೆ ಬಂದ್ರೇ ಬಿಬಿಎಂಪಿ...

Dog No entry Cubbon Park : ನಾಯಿಗಳು ಕಬ್ಬನ್ ಪಾರ್ಕ್ ಗೆ ಬಂದ್ರೇ ಬಿಬಿಎಂಪಿ ಅಧಿಕಾರಿಗಳ ತಲೆದಂಡ: ಹೈಕೋರ್ಟ್

- Advertisement -

ಬೆಂಗಳೂರು: ಕಬ್ಬನ್ ಪಾರ್ಕ್ ವಾಕಿಂಗ್ ಪ್ರಿಯರ ಸ್ವರ್ಗ. ಅಷ್ಟೇ ಅಲ್ಲ ನೆಮ್ಮದಿಯಾಗಿ ಒಂದಷ್ಟು ಕಾಲಕಳೆದು ಬರಬೇಕೆಂದು ಬಯಸೋರಿಗೆ ಇದು ರಿಲ್ಯಾಕ್ಸ್ ಪ್ಲೇಸ್. ಆದರೆ ಇತ್ತೀಚಿಗೆ ಕಬ್ಬನ್ ಪಾರ್ಕ್ ಸಾಕು ನಾಯಿಗಳ ಅಡ್ಡೆಯಾಗಿತ್ತು. ಇದರ ಜೊತೆ ಬೀದಿ ನಾಯಿಗಳು ಸೇರಿಕೊಂಡು ಜನರ‌ನೆಮ್ಮದಿಗೆಡಿಸಿತ್ತು. ಈಗ ಈ ಅವಾಂತರಕ್ಕೆ ಹೈಕೋರ್ಟ್ ( High Court notice ) ಕಡಿವಾಣ ಹಾಕಿದ್ದು ಕಬ್ಬನ್ ಪಾರ್ಕ್ ಗೆ ಸಾಕು ನಾಯಿಗಳ ಪ್ರವೇಶ ಹಾಗೂ ಬೀದಿಗಳ ನಾಯಿ ಪ್ರವೇಶವನ್ನು (Dog No entry Cubbon Park) ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಇತ್ತೀಚಿಗೆ ಕಬ್ಬನ್ ಪಾರ್ಕ್ ಜನರಿಗಿಂತ ಪ್ರಾಣಿಗಳ ಉದ್ಯಾನವನವಾಗಿ ಬದಲಾಗಿತ್ತು. ವಾಕಿಂಗ್ ಬರೋ ಜನರು ತಮ್ಮ ನಾಯಿಗಳ ಜೊತೆ ಬರ್ತಿದ್ದರು. ಮಾತ್ರವಲ್ಲ ನಾಯಿಗೆ ವಾಕ್ ಮಾಡಿಸಿ ಮಲ,ಮೂತ್ರ ವಿಸರ್ಜನೆ ಮಾಡಿಸಿ ಉದ್ಯಾನವನ್ನು ಗಬ್ಬೆಬ್ಬಿಸಿ ಹೋಗುತ್ತಿದ್ದರು. ಇದರೊಂದಿಗೆ ಸಾಕು ನಾಯಿಗಳ ಜೊತೆ ಬೀದಿನಾಯಿಗಳು ಗೇಟ್ ಒಳಕ್ಕೆ ನುಗ್ಗುತ್ತಿದ್ದರಿಂದ ಜನರಿಗೆ ವಾಕಿಂಗ್ ಮಾಡೋದೆ ಕಷ್ಟ ಎಂಬಂತಾಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ನಿರ್ವಹಣೆ ಕೊರತೆಯಿಂದ ನರಳುತ್ತಿರುವ ಕಬ್ಬನ್ ಪಾರ್ಕ್ ಸ್ಥಿತಿಗತಿಯ ಬಗ್ಗೆ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಕಬ್ಬನ್ ಪಾರ್ಕ್ ಒಳಗೆ ಕೆಲವರು ನಾಯಿ ತಂದು ಮಲಮೂತ್ರ ವಿಸರ್ಜನೆ ಮಾಡಿಸುತ್ತಾರೆ. ಇದನ್ನು ನೋಡಿ ಬೀದಿ ನಾಯಿಗಳು ಪಾರ್ಕ್ ನಲ್ಲಿ ಓಡಾಡುತ್ತಿವೆ. ಹೀಗಾಗಿ ಜನರು ನೆಮ್ಮದಿಯಿಂದ ಸಂಚರಿಸದ ಸ್ಥಿತಿ ಇದೆ. ಹೀಗಾಗಿ ಸಾಕು ನಾಯಿಗಳು ಹಾಗೂ ಬೀದಿನಾಯಿಗಳು ಕಬ್ಬನ್ ಪಾರ್ಕ್ ಪ್ರವೇಶಿಸದಂತೆ ಕ್ರಮ ಜರುಗಿಸಿ ಈ ಬಗ್ಗೆ ಹೈಕೋರ್ಟ್ ಗೆ ವರದಿ ಸಲ್ಲಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದೆ.

ಹಲವರು ಬೀದಿನಾಯಿಗಳಿಗೆ ಊಟ ತಂದು ಹಾಕುತ್ತಿದ್ದು ಇದರಿಂದ ಕೆರಳುವ ನಾಯಿಗಳು ಕಬ್ಬನ್ ಪಾರ್ಕ್ ಗೆ ಭೇಟಿ ಮಾಡುವವರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ತಕ್ಷಣವೇ ಬಿಬಿಎಂಪಿ ನಾಯಿಗಳ ಪ್ರವೇಶಕ್ಕೆ ಕಡಿವಾಣ ಹಾಕದಿದ್ದರೇ ನ್ಯಾಯಾಲಯವೇ ಕ್ರಮಕೈಗೊಳ್ಳಲಿದೆ ಎಂದು ಹೈಕೋರ್ಟ್ ಎಚ್ಚರಿಸಿದೆ. ಹೈಕೋರ್ಟ್ ಚಾಟಿ ಬಳಿಕ ಬಿಬಿಎಂಪಿ ಎಚ್ಚೆತ್ತಿದ್ದು ಕಬ್ಬನ್ ಪಾರ್ಕ್ ಗೆ ನಾಯಿ ಪ್ರವೇಶಿಸುವುದನ್ನು ನಿಷೇಧಿಸಲು ಚಿಂತನೆ ನಡೆಸಿದೆ. ಆದರೆ ಕಬ್ಬನ್ ಪಾರ್ಕ್ ಕಾರ್ಪೋರೇಷನ್, ಕೆ.ಆರ್‌.ಸರ್ಕಲ್,ಹೈಕೋರ್ಟ್ ಮುಖ್ಯ ದ್ವಾರ,ಪ್ರೆಸ್ ಕ್ಲಬ್ ದ್ವಾರ,ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ದ್ವಾರ, ವೆಂಕಟಪ್ಪ ಆರ್ಟ್ ಗ್ಯಾಲರಿ ಸೇರಿದಂತೆ ಹಲವು ದ್ವಾರಗಳಿವೆ. ಹೀಗಾಗಿ ಎಲ್ಲಾ ದ್ವಾರಗಳಲ್ಲೂ ನಾಯಿಗಳ ಪ್ರವೇಶ ನಿಷೇಧಿಸುವುದು, ನಾಯಿಗಳನ್ನು ಹೊರಹಾಕುವುದು ದೊಡ್ಡ ಸವಾಲಾಗಿದೆ.

ಇದನ್ನೂ ಓದಿ : Power Cut : ನಾಳೆಯಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿದ್ಯುತ್​ ವ್ಯತ್ಯಯ..!

ಇದನ್ನೂ ಓದಿ : 10 Years Sentence : ಬೈಂದೂರು ಅಪ್ರಾಪ್ತ ನಾದಿನಿ ಅತ್ಯಾಚಾರ ಪ್ರಕರಣ : 10 ವರ್ಷ ಶಿಕ್ಷೆ, 20 ಸಾವಿರ ದಂಡ

( Dog No entry Cubbon Park : High Court notice to BBMP)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular