ಭಾನುವಾರ, ಏಪ್ರಿಲ್ 27, 2025
HomeCinemamangli Sister Indravati : ಪುಷ್ಪ ಸಿನಿಮಾಕ್ಕೆ ಬಂದ್ರು‌ ಮಂಗ್ಲಿ ಸಹೋದರಿ: ಸಮಂತಾ ಡ್ಯಾನ್ಸ್ ಗೆ...

mangli Sister Indravati : ಪುಷ್ಪ ಸಿನಿಮಾಕ್ಕೆ ಬಂದ್ರು‌ ಮಂಗ್ಲಿ ಸಹೋದರಿ: ಸಮಂತಾ ಡ್ಯಾನ್ಸ್ ಗೆ ಇಂದ್ರಾವತಿ ಚೌಹ್ಹಾಣ ಧ್ವನಿ

- Advertisement -

ತೆಲುಗಿನ ಬಹುನೀರಿಕ್ಷಿತ ಚಿತ್ರ ಪುಷ್ಪ ರಿಲೀಸ್ ಗೂ ಮುನ್ನವೇ ಸಖತ್ ಸದ್ದು ಮಾಡ್ತಿದೆ. ಟೀಸರ್, ಟ್ರೇಲರ್,ಫರ್ಸ್ಟ್ ಲುಕ್ ಎಲ್ಲದರಲ್ಲೂ ದಾಖಲೆ ಬರೆದಿರುವ ಈ ಐಟಂ ಸಾಂಗ್ ಲಿರಿಕಲ್ ಆಡಿಯೋ ರಿಲೀಸ್ ನಲ್ಲೂ ( Pushpa Oo Antava ) ಹೊಸ ದಾಖಲೆ ರಚಿಸಿದ್ದು ಕಣ್ಣೇ ಅದಿರಿಂದಿ ಖ್ಯಾತಿಯ ಗಾಯಕಿ‌ ಮಂಗ್ಲಿ ಸಹೋದರಿ ( mangli Sister Indravati Chauhan ) ಈ ಸಾಂಗ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪುಷ್ಪ’ ಸಿನಿಮಾ ರಿಲೀಸ್​ ಗೂ ಮುನ್ನವೇ ತನ್ನ ವಿಶೇಷತೆಗಳಿಂದ ಥಿಯೇಟರ್ ನಲ್ಲಿ ಗೆಲ್ಲುವವಿಶ್ವಾಸ ಮೂಡಿಸಿದೆ. ಅಲ್ಲೂ ಅರ್ಜುನ್ ಹಾಗೂ ರಶ್ಮಿಕಾ‌ಮಂದಣ್ಣ ನಟನೆಯ ಈ ಸಿನಿಮಾಗೆ ಐಟಂ ಸಾಂಗ್ ನಲ್ಲಿ ನಟಿ ಸಮಂತಾ ಸೊಂಟ ಬಳುಕಿಸಿದ್ದಾರೆ. ಓ ಅಂತಾವ ಐಟಂ ಸಾಂಗ್ ಗಾಗಿ ನಟಿ ಸಮಂತಾ ಪುಷ್ಪ ಚಿತ್ರತಂಡ ಸೇರಿದ್ದರು. ಈಗ ಚಿತ್ರತಂಡ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದೆ. ಸಾಂಗ ಲಿರಿಕಲ್ ವಿಡಿಯೋ ಬಿಡುಗಡೆಯಾದ ದಿನದ ಅವಧಿಯಲ್ಲೇ 1 ಕೋಟಿ ಜನರ ವೀಕ್ಷಣೆಗೆ ಒಳಗಾಗಿದೆ.

ಈ ಹಾಡಿನ ಇನ್ನೊಂದು ವಿಶೇಷ ಅಂದ್ರೇ ಓ ಅಂತಾವ್ ಮೂಲಕ ಗಾಯಕಿ ಮಂಗ್ಲಿ ಸಹೋದರಿ ಇಂದ್ರಾವತಿ ಚೌಹಾಣ್ ಪ್ಲೇ ಬ್ಯಾಕ್ ಸಿಂಗರ್ ಕೆರಿಯರ್ ಆರಂಭಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನವಿರುವ ಈ ಹಾಡನ್ನು ಚಂದ್ರಬೋಸ್ ಬರೆದಿದ್ದಾರೆ. ಗಾಯಕಿ ಇಂದ್ರಾವತಿ ಚೌಹಾಣ್ ರಾಬರ್ಟ್ ನ ತೆಲುಗು ಗೀತೆ ಕಣ್ಣೇ ಅದಿರಿಂದಿ‌ ಖ್ಯಾತಿಯ ನಾಯಕಿ ಮಂಗ್ಲಿ ಸಹೋದರಿಯಾಗಿದ್ದಾರೆ. ಪ್ರಸ್ತುತ ಮಂಗ್ಲಿ ಕನ್ನಡದ ಏಕ್ ಲವ್ ಯಾ ಸಿನಿಮಾದ ಎಣ್ಣೆ ಗೂ ಹೆಣ್ಣಿಗೂ ಹೆಂಗೇ ಲಿಂಕಿಟ್ಟೆ ಭಗವಂತಾ ಹಾಡಿನ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.

ರಕ್ತಚಂದನದ ಕಳ್ಳಸಾಗಾಣಿಕೆ ಕತೆಯನ್ನು ಒಳಗೊಂಡ ಈ ಸಿನಿಮಾ ಸಾಕಷ್ಟು ಕುತೂಹಲ‌ ಮೂಡಿಸಿದೆ. ಈ ಸಿನಿಮಾದಲ್ಲಿ ಅಪ್ಪಟ ಗ್ರಾಮೀಣ ಭಾಗದ ಹೆಣ್ಣುಮಗಳಂತೆ ನಟಿ ರಶ್ಮಿಕಾ‌ ಮಂದಣ್ಣ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಜೊತೆ ವಿವಾಹ ವಿಚ್ಛೇದನದ ಬಳಿಕ ಸಮಂತಾ ಈ ಚಿತ್ರದ ಸಖತ್ ಎಕ್ಸ್ ಪೋಸ್ ಗೆ ಅವಕಾಶವಿರುವ ಐಟಂ ಸಾಂಗ್ ಗೆ ಆಯ್ಕೆ ಯಾಗಿದ್ದು, ಡಿವೋರ್ಸ್ ಬಳಿಕ ಸಮಂತಾ ಈ ರೀತಿಯ ಬೋಲ್ಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಸಮಂತಾ ಕಾದಂಬರಿ ಆಧಾರಿತ ಹಾಲಿವುಡ್ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಸಮಂತಾ ಐಟಂ ಸಾಂಗ್, ಮಂಗ್ಲಿ ಸಹೋದರಿ ಗಾಯನ ಸೇರಿದಂತೆ ಹಲವು ಕಾರಣಕ್ಕೆ ಪುಷ್ಪ ಸಿನಿಮಾ ಅಭಿಮಾನಿಗಳನ್ನು ಕಾತುರತೆಯಿಂದ ಕಾಯುವಂತೆ ಮಾಡಿದೆ.

ಇದನ್ನೂ ಓದಿ : Oo Antava Pushpa Songs : ಐಕಾನ್ ಸ್ಟಾರ್ ಜೊತೆ ಸಮಂತಾ ರೋಮಾನ್ಸ್ : ದಾಖಲೆ ಬರೆದ ಐಟಂ ಸಾಂಗ್

ಇದನ್ನೂ ಓದಿ : ಕಣ್ಣೇ ಅದಿರಿಂದಿ ಎನ್ನುತ್ತ ಮೋಡಿ ಮಾಡಿದ ಮಂಗ್ಲಿ…! ಕಪ್ಪುಸುಂದರಿ ಈಗ ಯುವಜನತೆಯ ಕ್ರಶ್ …!!

( Mangli Sister Indravati Chauhan Voice of Samantha’s Item Song in Pushpa Oo Antava)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular