ದೇಶದಾದ್ಯಂತ ಓಮಿಕ್ರಾನ್ ಭೀತಿ ಜೋರಾಗಿರುವ ಬೆನ್ನಲ್ಲೇ ಮಾಯಾನಗರಿ ಮುಂಬೈನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದೆ. ಈ ಮಧ್ಯೆ ಬಾಲಿವುಡ್ ನಟಿಮಣಿಯರು ಕೊರೋನಾ ಪಾಸಿಟಿವ್ ( COVID-19 ) ಇದ್ದರೂ ಕೂಡ ಪಾರ್ಟಿ ಮಾಡುವ ಮೂಲಕ ಮುಂಬೈ ಮಹಾನಗರ ಪಾಲಿಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಲಿವುಡ್ ನಟಿಮಣಿಯರಾದ ಕರೀನಾ ಕಪೂರ್ (Kareena Kapoor Corona Positive) ಹಾಗೂ ಅಮೃತ್ ಅರೋರಾ (Amrita Arora) ಅವರಿಗೆ ಕರೋನಾ ಪಾಸಿಟಿವ್ ಆಗಿದೆ. ಆದರೆ ಕೊರೋನಾ ಪಾಸಿಟಿವ್ ಆಗಿರೋ ನಟಿಯರು ಮನೆಯಲ್ಲಿ ಐಸೋಲೇಟ್ ಆಗೋ ಬದಲು ಉಳಿದ ನಟಿಯರ ಜೊತೆ ಸೇರಿ ಪಾರ್ಟಿ ಮಾಡಿದ್ದಾರೆ.
ನಟಿಯರ ಈ ಉದ್ಧಟತನ ಹಾಗೂ ನಿರ್ಲಕ್ಷ್ಯತನ ಈಗ ಮುಂಬೈ ಮಹಾನಗರ ಪಾಲಿಕೆ ಕೆಂಗಣ್ಣಿಗೆ ಗುರಿಯಾಗಿದೆ. ನಟಿಯರು ಕೊರೋನಾ ಪಾಸಿಟಿವ್ ಆಗಿದ್ದರೂ ಪಾರ್ಟಿಯಲ್ಲಿ ಪಾಲ್ಗೊಂಡಿರುವ ಸಂಗತಿಯನ್ನು ಬಿಎಂಸಿ ಬಹಿರಂಗ ಪಡಿಸಿದ್ದು ನಟಿಮಣಿಯರ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಿದೆ. ಜ್ವರ, ಶೀತ, ನೆಗಡಿ, ಮೈಕೈನೋವಿನಂತಹ ಲಕ್ಷಣವಿದ್ದವರು ಮನೆಯಲ್ಲೇ ಐಸೋಲೇಟ್ ಆಗಬೇಕೆಂದು ಮುಂಬೈ ಮಹಾನಗರ ಪಾಲಿಕೆ ಸೂಚಿಸಿದೆ. ಹೀಗಿದ್ದರೂ ಕರೀನಾ ಕಪೂರ್, ಅಮೃತ್ ಅರೋರಾ ಹಾಗೂ ಮಲೈಕಾ ಅರೋರಾ ಹಾಗೂ ಕರಿಶ್ಮಾ ಕಪೂರ್ ಜೊತೆ ರಿಯಾ ಕಪೂರ್ ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿ ಮಾಡಿದ್ದಾರೆ.
ಮಾತ್ರವಲ್ಲ ಬಳಿಕ ಕರಣ್ ಜೋಹರ್ ಮನೆಯಲ್ಲೂ ವೀಕೆಂಡ್ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಆಲಿಯಾ ಭಟ್, ರಬ್ಣೀರ್ ಕಪೂರ್, ಅರ್ಜುನ್ ಕಪೂರ್ ಕೂಡ ಪಾಲ್ಗೊಂಡಿದ್ದರು. ಕರೀನಾ ಕಪೂರ್ ಹಾಗೂ ಅಮೃತ್ ಅರೋರಾ ಸಂಪರ್ಕಕ್ಕೆ ಬಂದವರೆಲ್ಲರೂ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಹೇಳಿದೆ.
ಇನ್ನೂ ನಟಿಯರಿಗೆ ಕೊರೋನಾ ತಗುಲಿದ ಬಳಿಕವೂ ಪಾರ್ಟಿ ಮಾಡಿರುವ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಕರೀನಾ ಹಾಗೂ ಅಮೃತ್ ಅರೋರಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕರೀನಾ ಕಪೂರ್ ಮನೆಯಲ್ಲಿ ಎರಡು ಪುಟ್ಟ ಮಕ್ಕಳಿದ್ದಾರೆ. ಇಂತಹ ಸೂಕ್ಷ್ಮ ಸಂದರ್ಭದಲ್ಲೂ ಇಷ್ಟು ಬೇಜವಾಬ್ದಾರಿತನ ಬೇಕೇ ಎಂದು ನೆಟ್ಟಿಗರು ಕರೀನಾಗೆ ಕುಟುಕಿದ್ದಾರೆ.
ಇನ್ನು ಕೊವೀಡ್ ನಿಯಮಗಳನ್ನು ಉಲ್ಲಂಘಿಸಿ ಪಾರ್ಟಿ ಮಾಡಿರುವ ಕಾರಣಕ್ಕೆ ನಟಿಯರಾದ ಅಮೃತ್ ಅರೋರಾ ಹಾಗೂ ಕರೀನಾ ಕಪೂರ್ ವಿರುದ್ಧ ಮುಂಬೈ ಮಹಾನಗರ ಪಾಲಿಕೆ ಪ್ರಕರಣ ದಾಖಲಿಸಿಕೊಳ್ಳಲಿದೆ. ಕಳೆದ ಮಾರ್ಚ್‌ನಲ್ಲಿ ಗಾಯಕಿ ಕನ್ನಿಕಾ ಕಪೂರ್ ಕೂಡ ಹೀಗೆಯೇ ಕೊರೋನಾ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ಹಲವು ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಬಳಿಕ ಶಿಸ್ತುಕ್ರಮದ ಭಯಕ್ಕೆ ಗಾಯಕಿ ಕ್ಷಮೆಕೋರಿದ್ದರು. ಅದರೂ ಬಿಎಂಸಿ ಗಾಯಕಿ ವಿರುದ್ಧ ದೂರು ದಾಖಲಿಸಿಕೊಂಡಿತ್ತು.
ಇದನ್ನೂ ಓದಿ : Badava Rascal 4K Trailer: ಬಡವ ರಾಸ್ಕಲ್ ಟ್ರೇಲರ್: ಆಟೋಗಳ ಮೇಲೆ ಡಾಲಿ ಧನಂಜಯ ಹೆಸರು,ಫೋಟೋ ಅಚ್ಚಾಗೋದು ಗ್ಯಾರಂಟಿ
ಇದನ್ನೂ ಓದಿ : Laka Laka Lamborghini : ಲ್ಯಾಂಬೋರ್ಗಿನಿಯಲ್ಲಿ ಗುಳಿಕೆನ್ನೆ ಬೆಡಗಿ: ರ್ಯಾಪರ್ ಗೆ ಜೊತೆಯಾದ ರಚಿತಾರಾಮ್
( Actors Kareena Kapoor Corona Positive Amrita Arora For COVID-19)