ಶಿಕ್ಷಕರಿಗೆ ಬಡ್ತಿ ನೀಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಿ ಬಿಡುಗಡೆ ಮಾಡಿದೆ. ಬಡ್ತಿ ನೀಡುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಡ್ಡಾಯವಾಗಿ (Competitive Exam for teacher promotion) ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಆರರಿಂದ ಎಂಟನೇ ತರಗತಿ ಶಿಕ್ಷಕರ ನೇಮಕಾತಿಗೆ ಅನ್ವಯವಾಗುವಂತೆ ಈ ನಿಯಮ ರೂಪಿಸಲಾಗಿದೆ.
ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಮಂದಿ ಈಗಾಗಲೇ ಪದವಿಯನ್ನು ಪೂರೈಸಿದ್ದಾರೆ. ಇವರನ್ನು ಆರರಿಂದ ಎಂಟನೇ ತರಗತಿಗೆ ಶಿಕ್ಷಕರನ್ನಾಗಿ ನೇಮಿಸಬೇಕೆಂಬ ಕೂಗು ಕೇಳಿ ಬರ್ತಿದೆ. ಹೀಗಾಗಿ ಬಡ್ತಿ ನೀಡುವ ಸಂದರ್ಭದಲ್ಲಿ ಪ್ರಾಧಿಕಾರದ ನಿಯಮದ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆದರೆ ಪದವಿಧರ ಶಿಕ್ಷಕರಿಗೆ ಬಡ್ತಿ ನೀಡುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು ಬೇಡ ಎನ್ನಲಾಗ್ತಿದೆ. 2017ರಲ್ಲಿ ರೂಪಿಸಲಾದ ನಿಯಮಾವಳಿಗಳಲ್ಲಿ ತಿದ್ದುಪಡಿ ತಂದು 2021ರಲ್ಲಿ ಹೊಸ ನೇಮಕಾತಿ ನಿಯಮ ಜಾರಿಗೊಳಿಸಲಾಗಿದೆ.
ನಾಳೆಯಿಂದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ : ಇಲಾಖೆಯಿಂದ ಮಹತ್ವದ ಆದೇಶ
ರಾಜ್ಯದ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಫ್ ಬಿ ವೃದ್ದಂದ ಬೆಂಗಳೂರು ಹಾಗೂ ಮೈಸೂರು ವಿಭಾಗದ ವರ್ಗಾವಣಾ ಕೌನ್ಸಿಲಿಂಗ್ ನಾಳೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ವರ್ಗಾವಣಾ ಕೌನ್ಸೆಲಿಂಗ್ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ಹೊರಡಿಸಿದೆ.
ಈ ಮೊದಲು ಅಭ್ಯರ್ಥಿಗಳು ಬೆಂಗಳೂರು ಆಯುಕ್ತಾಲಯದ ಕಚೇರಿಯಲ್ಲಿ ಹಾಜರಾಗಬೇಕಿತ್ತು. ಆದರೆ ಇದೀಗ ಈ ನಿಯಮದಲ್ಲಿ ಬದಲಾವಣೆ ತರಲಾಗಿದ್ದು ಬೆಂಗಳೂರು ಹಾಗೂ ಮೈಸೂರು ವಿಭಾಗದ ಶಿಕ್ಷಕರಿಗೆ ಹಾಗೂ ಬಿ ಗ್ರೂಪ್ ಸಿಬ್ಬಂದಿಗೆ ಅನುಕೂಲವಾಗುವಂತೆ ಕೇಂದ್ರೀಕೃತ ಮಾದರಿಯಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಅಭ್ಯರ್ಥಿಗಳು ಜಿಲ್ಲೆಯ ಉಪನಿರ್ದೇಶಕರ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ. ತಾಂತ್ರಿಕ ವ್ಯವಸ್ಥೆಯನ್ನು ಬಳಸಿಕೊಂಡು ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಂತ್ರಾಂಶವನ್ನು ಅಭಿವೃದ್ದಿ ಪಡಿಸಲಾಗಿದೆ. ಕೌನ್ಸಿಲಿಂಗ್ ಕೇಂದ್ರೀಕೃತ ಮಾದರಿಯಲ್ಲಿ ಒಂದೇ ಸ್ಥಳದಲ್ಲಿ ಹಮ್ಮಿಕೊಳ್ಳುವ ಬದಲು, ಆಯಾಯ ಜಿಲ್ಲೆಗೆ ಸಂಬಂಧಪಟ್ಟ ಅಭ್ಯರ್ಥಿಗಳು ಅದೇ ಜಿಲ್ಲೆಯ ಉಪನಿರ್ದೇಶಕರ ಕಚೇರಿಯಲ್ಲಿ ಕೌನ್ಸಿಂಲಿಂಗ್ ಪ್ರಕ್ರಿಯೆಯಲ್ಲಿ ಹಾಜರಾಗಲು ಅನುಕೂಲ ಕಲ್ಪಿಸಲಾಗಿದೆ. ಜೂಮ್ ಮೀಟ್ ಮಾದರಿಯಲ್ಲಿ ಶಿಕ್ಷಕರು ಯಾವುದೇ ಖಾಲಿ ಹುದ್ದೆಯನ್ನು ನಿಯಮಾನುಸಾರು ಆಯ್ಕೆ ಮಾಡಿಕೊಳ್ಳತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ ದೈಹಿಕ ಪರಿವೀಕ್ಷಕರ ಬಡ್ತಿ ಕೌನ್ಸಿಲಿಂಗ್ ಅನ್ನು ಇದೇ ಮಾದರಿಯನ್ನು ಹಮ್ಮಿಕೊಂಡಿತ್ತು. ಇದೀಗ ಜಿಲ್ಲಾ ಮಟ್ಟದಲ್ಲಿಯೇ ಕೌನ್ಸಿಲಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಡಿಸೆಂಬರ್ 16 ರಂದು ಬೆಳಗ್ಗೆ 9 ಗಂಟೆಯಿಂದ ಕ್ರಮ ಸಂಖ್ಯೆ 1 ರಿಂದ 60, ಮಧ್ಯಾಹ್ನ 2 ಗಂಟೆಯಿಂದ ಕ್ರಮ ಸಂಖ್ಯೆ 61 ರಿಂದ 160, ಡಿಸೆಂಬರ್17ರಂದು180 ಹಾಗೂ ಮಧ್ಯಾಹ್ನ 2 ಗಂಟೆಯಿಂದ ಕ್ರಮ ಸಂಖ್ಯೆ ೧೮೧ರಿಂದ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯಲಿದೆ.
ಇದನ್ನು ಓದಿ: Jarkiholi master plan : ಬಿಜೆಪಿಗೆ ಅನಿವಾರ್ಯವಾದ್ರಾ ಲಖನ್ : ರಮೇಶ್ ಜಾರಕಿಹೊಳಿ ಪ್ಲ್ಯಾನ್ ಏನು ಗೊತ್ತಾ?!
Competitive exam for teacher promotion