ಸೋಮವಾರ, ಏಪ್ರಿಲ್ 28, 2025
HomeCrimeGangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ...

Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ

- Advertisement -

ಆಗ್ರಾ : ಅವರಿಬ್ಬರಿಗೂ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿತ್ತು. ಪರಿಚಯ ನಂತರದಲ್ಲಿ ಸ್ನೇಹಕ್ಕೆ ತಿರುಗಿತ್ತು. ಗೆಳತಿಯನ್ನು ಭೇಟಿಯಾಗಲು ಆಹ್ವಾನ ನೀಡಿದ್ದ ಗೆಳೆಯ ಮಾಡಿದ್ದು ಮಾತ್ರ ನೀಚ ಕೃತ್ಯ. ಯುವತಿ ಗೆಳೆಯನ ಭೇಟಿಯಾಗಲು ಬಂದಿದ್ದ ವೇಳೆಯಲ್ಲಿ ತನ್ನ ಗೆಳೆಯನ ಜೊತೆ ಸೇರಿ ಯುವತಿಯ ಮೇಲೆ ಕಾರಿನಲ್ಲಿಯೇ (Gangrape Instagram Friend) ಸಾಮೂಹಿಕ ಅತ್ಯಾಚಾರವೆಗಿಸಿದ್ದಾನೆ.

ಕೃಷ್ಣ ಬಾಫೆಲ್‌ ( 24 ವರ್ಷ) ಎಂಬಾತ ಫಿರೋಜಾಬಾದ್‌ನ 18 ವರ್ಷದ ಯುವತಿಯೊಬ್ಬಳ ಜೊತೆಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿತ್ತು. ದಿನ ಕಳೆದಂತೆ ಇಬ್ಬರೂ ಗಂಟೆಗಟ್ಟಲೆ ಚಾಟ್‌ ಮಾಡೋದಕ್ಕೆ ಶುರು ಮಾಡಿದ್ದಾರೆ. ಒಂದು ದಿನ ಕೃಷ್ಣ ಯುವತಿಯ ಬಳಿಯಲ್ಲಿ ತನ್ನನ್ನು ಭೇಟಿಯಾಗುವಂತೆ ಬಲವಂತ ಮಾಡಿದ್ದಾನೆ. ಯುವತಿ ಕೊನೆಗೆ ಭೇಟಿಯಾಗಲು ಒಪ್ಪಿಗೆ ನೀಡಿದ್ದಾಳೆ. ಈ ವೇಳೆಯಲ್ಲಿ ಗೆಳೆಯನ್ನು ಭೇಟಿಯಾಗಲು ತನ್ನ ಗೆಳೆಯ ಹೇಮಂತ್‌ ಕುಮಾರ್‌ (22 ವರ್ಷ) ಎಂಬಾತನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದಾನೆ.

ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡ ಕೃಷ್ಣ ಹಾಗೂ ಹೇಮಂತ್‌ ಬಿಯರ್‌ ಕುಡಿಯುವಂತೆ ಬಲವಂತ ಮಾಡಿದ್ದಾರೆ. ನಂತರದಲ್ಲಿ ಯುವತಿ ನಿರಾಕರಿಸಿದಾಗ ಯುವತಿಯ ತಲೆಯನ್ನು ಕಾರಿನ ಬಾಗಿಲಿಗೆ ಹೊಡೆದು ಬಲವಂತವಾಗಿ ಬಿಯರ್‌ ಕುಡಿಸಿದ್ದಾರೆ. ನಂತರ ಚಲಿಸುತ್ತಿರುವ ಕಾರಿನಲ್ಲಿಯೇ ಇಬ್ಬರೂ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.

ಕಾರಿನಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಮಾಡಿಟ್ಟುಕೊಂಡಿದ್ದ ಕಾಮಾಂಧರು, ಯಾರ ಬಳಿಯಲ್ಲಾದ್ರೂ ಈ ವಿಚಾರವನ್ನು ತಿಳಿಸಿದ್ದರೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿಯೇ ನಿದ್ರೆ ಮಾತ್ರೆಯನ್ನು ಸೇವೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದರಿಂದಾಗಿ ಅಕೆಯ ಸಹೋದರಿಗೆ ವಿಷಯ ತಿಳಿಯುತ್ತಲೇ ಪೊಲೀಸರಿಗೆ ದೂರು ನೀಡಿದ್ದಾನೆ. ಅಲ್ಲದೇ ದೂರಿನಲ್ಲಿ ತನ್ನ ಸಹೋದರಿಯ ಮೇಲಾಗಿರುವ ದೌರ್ಜನ್ಯವನ್ನು ಎಳೆ ಎಳೆಯಾಗಿ ವಿವರಿಸಿದ್ದಾಳೆ.

ಅದೃಷ್ಟವಶಾತ್‌ ಯುವತಿ ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನೆಯ ಕುರಿತು ಸರ್ಕಲ್ ಆಫೀಸರ್ ಲಖನ್ ಸಿಂಗ್ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. ಇಬ್ಬರು ಆರೋಪಿಗಳಾದ ಕೃಷ್ಣ ಹಾಗೂ ಹೇಮಂತ್‌ ಕುಮಾರ್‌ ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ಐಪಿಸಿ ಸೆಕ್ಷನ್ 376 ಡಿ (ಗ್ಯಾಂಗ್ ರೇಪ್) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ : ಅಂಕಲ್​ ಎಂದು ಕರೆದಿದ್ದಕ್ಕೆ ರೋಷಾವೇಷ..!ವಿದ್ಯಾರ್ಥಿನಿಯ ತಲೆಗೆ ಜಜ್ಜಿ ಆಕ್ರೋಶ

ಇದನ್ನೂ ಓದಿ : ಶ್ವಾನಕ್ಕೆ ಪತ್ನಿ ಹೆಸರಿಟ್ಟಿದ್ದಾರೆಂದು ಆರೋಪಿಸಿ ನೆರೆಮನೆಯಾಕೆಗೆ ಬೆಂಕಿ ಹಚ್ಚಿದ ಪಾಪಿ..!

(Gangrape Instagram Friend : Uttar Pradesh 18-Yr-Old Gangraped In Moving Car in Agra, Accused Befriended Her On Instagram, Arrested Police)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular